ಮೂಡಿಗೆರೆ : ಅಪರಿಚಿತ ವ್ಯಕ್ತಿಯೋರ್ವರ ಶವ ಹೇಮಾವತಿ ನದಿಯ ದಡದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. 

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಮೂಡಿಗೆರೆ ಕೊಟ್ಟಿಗೆಹಾರ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಶವವು ಪತ್ತೆಯಾಗಿದ್ದು ಶ್ರೀಧರ್ ಎಂಬ ಹೆಸರಿನಲ್ಲಿ ಬರೆದಿರುವ ಡೆತ್ ನೋಟ್ ಪೊಲೀಸರಿಗೆ ಲಭ್ಯವಾಗಿದೆ.

ಕೊಪ್ಪ : ಆಕಸ್ಮಿಕ ವಿದ್ಯುತ್ ಅವಘಡ ; ಓರ್ವ ವ್ಯಕ್ತಿಯ ದುರ್ಮರಣ

ಮೃತ ದೇಹವನ್ನು ಪ್ರಾಣಿಗಳು ತಿಂದಿರುವ ಶಂಕೆಯಿದ್ದು, ಕೊಲೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ, ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. 

ಏಪ್ರಿಲ್ 27 ರ ದಿನಾಂಕವನ್ನು ನಮೂದಿಸಿ ಬರೆದಿರುವ ಡೆತ್ ನೋಟ್ ಮೃತದೇಹದಲ್ಲಿ ಲಭ್ಯವಾಗಿದ್ದು ಬಣಕಲ್ ಠಾಣೆಯ ಪೊಲೀಸರು ಈ ಕುರಿತು ತನಿಖೆ ಆರಂಭಿಸಿದ್ದಾರೆ. 

ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲನೆ ನಡೆಸಿರುವ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಠಾಣೆಯ ಪೊಲೀಸರು ಈ ಸಂಬಂಧ ತನಿಖೆ  ಆರಂಭಿಸಿದ್ದು ತನಿಖೆಯ ನಂತರ ಈ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. 

ತನು ಕೊಟ್ಟಿಗೆಹಾರ, ವರದಿಗಾರರು.

ಅಭ್ಯರ್ಥಿಗಳು ಈ ಕೆಳಕಂಡ ಲಿಂಕ್ ಮೂಲಕ ರಿಜಿಸ್ಟರ್ ಆಗಬಹುದು :  https://forms.gle/PvypXpJerzDzsrfE9

ಕೊಡಗು : ವಿದ್ಯುತ್ ತಗುಲಿ ಸಾವನ್ನಪ್ಪಿದ ಆನೆ ; ಮಳೆಯಿಂದ ಉಂಟಾದ ಅವಘಡ

ಕೊಡಗು : ವಿದ್ಯುತ್ ಸ್ಪರ್ಶಿಸಿ ಗಂಡಾನೆಯೊಂದು ಸಾವನ್ನಪ್ಪಿರುವ ಘಟನೆ ಕೊಡಗಿನಲ್ಲಿ ನಡೆದಿದೆ. ಆನೆ ತೋಟಕ್ಕೆ ನುಗ್ಗಿದ ಸಂದರ್ಭದಲ್ಲಿ ವಿದ್ಯುತ್ ಕಂಬ ಬಿದ್ದ ಪರಿಣಾಮ ಆನೆಯು ಸಾವನ್ನಪ್ಪಿದೆ. 

ಕೊಡಗು ಜಿಲ್ಲೆಯ ಅತ್ತಿಮಂಗಲ ಗ್ರಾಮದಲ್ಲಿರುವ ವಿವೇಕ್ ಅಪ್ಪಯ್ಯ ಎಂಬುವವರಿಗೆ ಸೇರಿದ ಈ ತೋಟದಲ್ಲಿ, ಸಂಭವಿಸಿದ ಮಳೆ  ಗಾಳಿಗೆ ಹೈಟೆನ್ಷನ್ ವಿದ್ಯುತ್ ಲೈನ್ ಮೇಲೆ ಮರ ಬಿದ್ದ ಪರಿಣಾಮ ಈ ಅವಘಡ ಸಂಭವಿಸಿದೆ. ಮರ ಬಿದ್ದ ಸಂದರ್ಭದಲ್ಲಿ ತೋಟವನ್ನು ಪ್ರವೇಶಿಸಿದ ಆನೆಗೆ ವಿದ್ಯುತ್ ತಗುಲಿ ಆನೆಯು ಸಾವನ್ನಪ್ಪಿದೆ. 

ಸಾವನ್ನಪ್ಪಿದ ಗಂಡಾನೆಯು 22 ವರ್ಷ ಪ್ರಾಯದ್ದಾಗಿದ್ದು ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ ಹಾಗೂ ಮಾಹಿತಿ ಕಲೆಹಾಕುತ್ತಿದ್ದಾರೆ. 

ಈ ಭಾಗದಲ್ಲಿ ಆನೆಗಳು ಆಹಾರವನ್ನರಸಿ  ನಿರಂತರವಾಗಿ ಬರುತ್ತಿದ್ದು ಅಧಿಕಾರಿಗಳು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಬೇಕಿದೆ ಎಂದು ಸಾರ್ವಜನಿಕರು ಕೋರಿದ್ದಾರೆ. ಇದಲ್ಲದೇ ಕೆಲ ತೋಟಗಳಿಗೆ ಹಿಂಡು ಹಿಂಡಾಗಿ ಪ್ರವೇಶಿಸುವ ಆನೆಗಳು ಬೆಳೆನಾಶ ಮಾಡುವುದಲ್ಲದೇ ಅನೇಕರನ್ನು ಬಲಿ ತೆಗೆದುಕೊಂಡಿದೆ.