ಬಾಳೆಹೊನ್ನೂರಿನ ಬನ್ನೂರು ಶಿವಣ್ಣ ಗೌಡ ಎಂಬುವವರ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಕಾರ್ಮಿಕರು ಅಂದಿನ ಕೆಲಸ ಮುಗಿಸಿ ರಾತ್ರಿ ಮದ್ಯಪಾನ ಮಾಡುವ ಸಂದರ್ಭದಲ್ಲಿ ಕಾರ್ಮಿಕನ ಮೇಲೆ ಹಲ್ಲೆಯಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ.
ರಾತ್ರಿ ಮದ್ಯಪಾನ ಮಾಡುತ್ತಾ ಕುಳಿತಿದ್ದಾಗ ಮಣಿ, ಶಿವಕುಮಾರ್, ಕೃಷ್ಣ ಈ ತೋಟದ ಕೆಲಸ ಬಿಟ್ಟು ಬೇರೆ ಕಡೆಗೆ ಹೋಗೋಣ ಎಂದಿದ್ದಾರೆ. ಆದರೆ ಏಕಾಏಕಿ ಹೀಗೆ ಮಾಡುವುದು ಸಮಂಜಸವಲ್ಲ ಕೆಲಸ ಬಿಡುವ ವಿಚಾರ ಮಾಲೀಕರಿಗೆ ತಿಳಿಸೋಣ ಎಂದು ಹಲ್ಲೆಗೀಡಾದ ರವಿ ಹೇಳಿದ್ದಾನೆ, ಇಷ್ಟಕ್ಕೇ ಕೋಪಗೊಂಡ ಮಣಿ, ಶಿವಕುಮಾರ್, ಕೃಷ್ಣ ಎಂಬ ಕಾರ್ಮಿಕರು ಕತ್ತಿ, ದೊಣ್ಣಿಯಿಂದ ರವಿ ಮೇಲೆ ಹಲ್ಲೆ ನಡೆಸಿದ್ದಾರೆ.
ಗಾಯಾಳು ರವಿಗೆ ಬಾಳೆಹೊನ್ನೂರು ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಘಟನಾ ಸಂಬಂಧ ಬಾಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಾಗಿದೆ.
ಕಿಡಿಗೇಡಿಗಳಿಂದ ತೊಂದರೆ ಹಿನ್ನೆಲೆ ; ಗನ್ ಮ್ಯಾನ್ ನಿಯೋಜನೆ ಮಾಡುವಂತೆ ಕೋರಿದ ಚಿಕ್ಕಮಗಳೂರು ನಗರಸಭಾಧ್ಯಕ್ಷ
ಚಿಕ್ಕಮಗಳೂರು : ಚಿಕ್ಕಮಗಳೂರು ನಗರಸಭಾ ಅಧ್ಯಕ್ಷರಾದ ವರಸಿದ್ಧಿ ವೇಣುಗೋಪಾಲ್ ಅವರು ಸುರಕ್ಷತೆ ಹಾಗೂ ಭದ್ರತೆಯ ದೃಷ್ಟಿಯಿಂದಾಗಿ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಗನ್ ಮ್ಯಾನ್ ನಿಯೋಜನೆ ಮಾಡಬೇಕೆಂದು ಪತ್ರದ ಮುಖಾಂತರ ಕೋರಿದ್ದಾರೆ.
ನಾನು ಚಿಕ್ಕಮಗಳೂರು ನಗರದ ಪ್ರಥಮ ಪ್ರಜೆಯಾಗಿದ್ದೇನೆ, ಕೆಲ ಕಿಡಿಗೇಡಿಗಳು ತೊಂದರೆ ನೀಡುತ್ತಿದ್ದಾರೆ, ಹಾಗೂ ಅನೇಕ ಬಾರಿ ಅವರನ್ನು ಹಿಂಬಾಲಿಸಿ ಛಾಯಾಚಿತ್ರಗಳನ್ನು ತೆಗೆದು ವಾಟ್ಸಪ್ ನಲ್ಲಿ ಹರಿಬಿಡುತ್ತಿರುವ ಕಾರಣ ಸುರಕ್ಷತೆ ನೀಡಿ ಭದ್ರತೆಯ ದೃಷ್ಟಿಯಿಂದ ಗನ್ ಮ್ಯಾನ್ ನ್ನು ನಿಯೋಜಿಸಬೇಕೆಂದು ಕೋರಿದ್ದಾರೆ.
ವರಸಿದ್ಧಿ ವೇಣುಗೋಪಾಲ್ ಅವರು ಚಿಕ್ಕಮಗಳೂರು ನಗರಸಭಾ ಅಧ್ಯಕ್ಷರಾಗಿ ಅಧಿಕಾರವನ್ನು ವಹಿಸಿಕೊಂಡ ಬಳಿಕದಲ್ಲಿ ಅನೇಕ ರೀತಿಯ ವಿವಾದಗಳು ನಗರಸಭೆಯಲ್ಲಿ ಭುಗಿಲೆದ್ದಿತ್ತು. ಕಿಡಿಗೇಡಿಗಳು ತೊಂದರೆ ಕೊಡುತ್ತಿರುವುದು ಗಮನಕ್ಕೆ ಬಂದಿರುವ ಕಾರಣ ಅವರ ಸುರಕ್ಷತೆ ಹಾಗೂ ಭದ್ರತೆಯ ಸಲುವಾಗಿ ಓರ್ವ ಪೊಲೀಸ್ ಗನ್ ಮ್ಯಾನ್ ನ್ನು ನಿಯೋಜನೆ ಮಾಡಿಕೊಡಬೇಕೆಂದು ವರಸಿದ್ಧಿ ವೇಣುಗೋಪಾಲ್ ಅವರು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಕೋರಿದ್ದಾರೆ.



0 Comments