ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಕಾಲುವೆಗೆ ಈಜಲೆಂದು ತೆರಳಿದ್ದ ಇಬ್ಬರು ಮಕ್ಕಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗದ ಹೊಳೆಹೊನ್ನೂರು ಸಮೀಪದ ಹೆಂಚಿನ ಸಿದ್ದಾಪುರ ಗ್ರಾಮದ ಭದ್ರಾ ಬಲದಂಡೆ ಕಾಲುವೆಗೆ ಈಜಲು ಹೋದ ಇಬ್ಬರು ಮಕ್ಕಳು ನೀರು ಪಾಲಾಗಿದ್ದಾರೆ. ತಮ್ಮ ದೊಡ್ಡಪ್ಪನೊಂದಿಗೆ ಕಾಲುವೆಗೆ ತೆರಳಿದ ಮಕ್ಕಳು ಸ್ನಾನ ಮಾಡುವ ಸಂದರ್ಭದಲ್ಲಿ ಆಯತಪ್ಪಿ ಮುಳುಗಿದ್ದಾರೆ, ಮುಳುಗಿದ ಇಬ್ಬರೂ ಕೂಡ ಮತ್ತೆ ಮೇಲೆ ಕಾಣಿಸಿಕೊಳ್ಳಲಿಲ್ಲ ಎನ್ನಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಾಗಿದ್ದು ಅಗ್ನಿಶಾಮಕದಳ ಹಾಗೂ ಪೊಲೀಸರು ಮೃತದೇಹವನ್ನು ಮೇಲಕ್ಕೆತ್ತುವ ಸಲುವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಘಟನಾ ಸ್ಥಳಕ್ಕೆ ಸಾರ್ವಜನಿಕರು ಕೂಡ ತೆರಳಿದ್ದು ಸ್ಥಳೀಯರು ಅಧಿಕಾರಿಗಳಿಗೆ ಸಾಥ್ ನೀಡುತ್ತಿದ್ದಾರೆ.
ಜೀವನವನ್ನು ಕಂಡುಕೊಳ್ಳಬೇಕಿದ್ದ ಮಕ್ಕಳು ದುರಂತದ ಸಾವಿನಲ್ಲಿ ಅಂತ್ಯ ಕಂಡಿರುವುದು ಪೋಷಕರಿಗೆ ಅತೀವ ಬೇಸರವನ್ನು ಉಂಟುಮಾಡಿದೆ. ಮಕ್ಕಳನ್ನು ಕಳೆದುಕೊಂಡಿರುವ ಕುಟುಂಬಸ್ಥರು ಅತೀವವಾದ ನೋವನ್ನು ಹೊರಹಾಕಿದ್ದಾರೆ.




0 Comments