ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಕಸಾಯಿಖಾನೆಗೆ ಅಕ್ರಮವಾಗಿ ಸಾಗಾಟ ನಡೆಸುತ್ತಿದ್ದ ಗೋವುಗಳನ್ನು ಶ್ರೀ ರಾಮ ಸೇನೆಯ ಕಾರ್ಯಕರ್ತರು ಸೆರೆ ಹಿಡಿದಿದ್ದಾರೆ.
ಚಿಕ್ಕಮಗಳೂರು ನಗರದ ಶಂಕರಪುರ ಕೊಂಗನಾಟಮ್ಮ ದೇವಿಯ ದೇಗುಲದ ಬಳಿ ಹಸುಗಳನ್ನು ಸಾಗಾಟ ನಡೆಸುತ್ತಿದ್ದುದ್ದನ್ನು ಕಂಡ ಶ್ರೀ ರಾಮಸೇನೆಯ ಕಾರ್ಯಕರ್ತರು ಕೂಡಲೇ ವಾಹನವನ್ನು ಅಡ್ಡಗಟ್ಟಿ ಹಸುಗಳನ್ನು ರಕ್ಷಿಸಿದ್ದಾರೆ.
ಇದನ್ನೂ ಓದಿ : ಅಮಾಯಕ ಬಸ್ ಕಂಡಕ್ಟರ್ ಮೇಲೆ ಪೊಲೀಸರಿಂದ ಅಮಾನುಷವಾಗಿ ಹಲ್ಲೆ
ಶ್ರೀ ರಾಮ ಸೇನೆಯ ಕಾರ್ಯಕರ್ತರು ಬೆಳಗ್ಗಿನ ಸುಪ್ರಭಾತ ಸೇವೆಗೆಂದು ತೆರಳುವ ಸಂದರ್ಭದಲ್ಲಿ ಹಸುಗಳ ಸಾಗಾಟವನ್ನು ಕಂಡು ವಾಹನವನ್ನು ಅಡ್ಡಗಟ್ಟಿ ಸಾಗಾಟಗಾರನನ್ನು ಸೆರೆಹಿಡಿದು ಪೋಲೀಸರಿಗೊಪ್ಪಿಸಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಶ್ರೀ ರಾಮ ಸೇನೆಯ ರಂಜಿತ್, ಜಗದೀಶ್ ಸೇರಿದಂತೆ ಇತರರು ಹಾಜರಿದ್ದರು.
ದೈವದ ನುಡಿಯಂತೆ ಮರದ ಕೆಳಗೆ ಗುಳಿಗದೈವದ ಮೂಲವಿಗ್ರಹ ಪತ್ತೆ
ಮೂಡಿಗೆರೆ : ಗುಳಿಗ ದೈವ ಕೊಟ್ಟ ನುಡಿಯಂತೆ ಮರದ ಕೆಳಗೆ ಗುಳಿಗ ದೈವದ ಮೂಲವಿಗ್ರಹ ಪತ್ತೆಯಾಗಿರುವ ವಿಚಾರ ವರದಿಯಾಗಿದೆ.
ಏಪ್ರಿಲ್ 24ರಂದು ಅಲೆಕಾಡು ಇತಿಹಾಸಪ್ರಸಿದ್ಧ ಗುಳಿಗ ಕ್ಷೇತ್ರದಲ್ಲಿ ವಾರ್ಷಿಕ ಪೂಜಾ ಮಹೋತ್ಸವ ನಡೆದಿದ್ದು ಈ ಸಂದರ್ಭದಲ್ಲಿ ನಡೆದ ಶ್ರೀ ಗುಳಿಗ ದೈವದ ದರ್ಶನದಲ್ಲಿ ಕ್ಷೇತ್ರದಿಂದ ನಾಲ್ಕು ಕಿಲೋಮೀಟರು ದೂರದಲ್ಲಿದ್ದ ಮರವೊಂದರ ಕೆಳಗೆ ವಿಗ್ರಹ ಇದೆ ಎಂದು ತಿಳಿಸಿದ್ದು ಅದರಂತೆ ಕ್ಷೇತ್ರ ಸಮಿತಿಯ ಪದಾಧಿಕಾರಿಗಳು ಮೂರು, ನಾಲ್ಕು ಕಿಲೋಮೀಟರ್ ದೂರದಲ್ಲಿ ಮರವೊಂದರ ಕೆಳಗೆ ನೋಡಿದಾಗ ಕಂಚಿನ ಮೂರ್ತಿ, ಗಂಟೆಗಳು,ಕತ್ತಿ ಮರದ ಕೆಳಗೆ ಪತ್ತೆಯಾಗಿ ಅಚ್ಚರಿ ಮೂಡಿಸಿದೆ.
ಚಾರ್ಮಾಡಿ ಘಾಟ್ ನ ಅಲೆಕಾಡು ಇತಿಹಾಸ ಪ್ರಸಿದ್ಧ ಕ್ಷೇತ್ರ, ಮೂಲವಿಗ್ರಹ ಆಲೇಖಾನ್ ಎಸ್ಟೇಟ್ ನ ಮರವೊಂದರ ಬುಡದಲ್ಲಿ ಪತ್ತೆಯಾಗಿರುವುದು ದೈವದ ನುಡಿಯಂತೆ ನಡೆದಿದೆ ಎಂದು ಭಕ್ತರು ಗುಳಿಗ ದೈವದ ಶಕ್ತಿಯನ್ನು ಭಕ್ತಿ ಭಾವದಿಂದ ಸ್ಮರಿಸುತ್ತಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಲೆಕಾಡು ಗುಳಿಗ ಕ್ಷೇತ್ರದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷರಾದ ಚನ್ನಕೇಶವ ಎಂ.ಜೆ. ಆಲೆಕಾನ್ ನಲ್ಲಿ ಶ್ರೀಗುಳಿಗ ದೈವದ ನುಡಿಯಂತೆ ಮೂಲವಿಗ್ರಹ ಪತ್ತೆಯಾಗಿದ್ದು ವಿಗ್ರಹವನ್ನು ಪ್ರತಿಷ್ಠಾಪಿಸುವ ಬಗ್ಗೆ ಮುಂದಿನ ದೈವ ದರ್ಶನದ ಹೇಳಿಕೆಯಂತೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಈ ಕುರಿತು ಮಾತನಾಡಿದ ಬಣಕಲ್ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಸತೀಶ್ ಮತ್ತಿಕಟ್ಟೆ, ನೂರಾರು ವರ್ಷಗಳ ಇತಿಹಾಸವಿರುವ ಈ ಕ್ಷೇತ್ರದಲ್ಲಿ ಚಾಮುಂಡೇಶ್ವರಿ, ಗುಳಿಗ ದೈವ , ಬಬ್ಬುಸ್ವಾಮಿ ಮುಂತಾದ ದೈವಗಳ ಪೂಜೆ ವಿಧಿವಿಧಾನದ ಮೂಲಕ ನಡೆಯುತ್ತಿದ್ದು ಈಗ ಮೂಲವಿಗ್ರಹ ಸಿಕ್ಕಿರುವುದು ಕ್ಷೇತ್ರದ ಮಹಿಮೆಯನ್ನು ಕಣ್ಮುಂದೆ ತಂದಿದೆ ಎಂದರು.
ತನು ಕೊಟ್ಟಿಗೆಹಾರ, ವರದಿಗಾರರು




0 Comments