ಕಡೂರು : (ನ್ಯೂಸ್ ಮಲ್ನಾಡ್ ವರದಿ) ಅಕ್ರಮವಾಗಿ ಆಟೋರಿಕ್ಷಾದ ಮೂಲಕ ಶ್ರೀಗಂಧಧ ಮರದ ತುಂಡುಗಳನ್ನು ಸಾಗಾಟ ನಡೆಸುತ್ತಿದ್ದವರನ್ನು ಪತ್ತೆಮಾಡಿ ಮರದ ತುಂಡುಗಳನ್ನು ವಶಕ್ಕೆ ಪಡೆದುಕೊಳ್ಳುವಲ್ಲಿ ಕಡೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಜೋಡಿಹೋಚಿಹಳ್ಳಿ ಗೇಟ್ ಬಳಿಯಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುವ ಸಂದರ್ಭದಲ್ಲಿ ಆಟೋರಿಕ್ಷಾದ ಮೂಲಕ ಬಂದ ಮೂವರು ಪೊಲೀಸರನ್ನು ಕಂಡು ಆಟೋವನ್ನು ಅಲ್ಲೇ ಬಿಟ್ಟು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.
ಇದನ್ನೂ ಓದಿ : ನಾಲ್ಕು ಮಕ್ಕಳಿಗೆ ಜನ್ಮ ನೀಡಿದ ಮಹಿಳೆ, ಅದರಲ್ಲೂ ಲಿಂಗ ಸಮಾನತೆ
ಪೊಲೀಸರು ಆಟೋವನ್ನು ಪರಿಶೀಲನೆ ನಡೆಸಿದಾಗ ಅದರಲ್ಲಿದ್ದ 70 ಕೆ.ಜಿ ತೂಕದ 15 ಶ್ರೀಗಂಧದ ತುಂಡುಗಳು ಪತ್ತೆಯಾಗಿದೆ. ಆಟೋರಿಕ್ಷಾವನ್ನು ಹಾಗೂ ಶ್ರೀಗಂಧದ ತುಂಡುಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಮೂವರು ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ. ಅಂದಾಜು ಒಂದು ಲಕ್ಷ ಮೌಲ್ಯದ ಶ್ರೀ ಗಂಧದ ತುಂಡುಗಳು ಈ ಕಾರ್ಯಾಚರಣೆಯಲ್ಲಿ ಪೊಲೀಸರಿಗೆ ದೊರೆತಿದೆ.
ಘಟನೆಯ ಕುರಿತು ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಸಂಬಂಧ ತನಿಖೆ ಆರಂಭಿಸಿದ್ದಾರೆ.
ಅಕ್ರಮವಾಗಿ ಕಾಫಿ ತೋಟದಲ್ಲಿ ತಯಾರಿಸುತ್ತಿದ್ದ ಕಳ್ಳಭಟ್ಟಿ ಅಡ್ಡೆ ಮೇಲೆ ಪೊಲೀಸರ ದಾಳಿ
ಮೂಡಿಗೆರೆ : ಅಕ್ರಮವಾಗಿ ಕಳ್ಳಭಟ್ಟಿ ತಯಾರಿಸುತ್ತಿದ್ದ ಅಡ್ಡೆಯ ಮೇಲೆ ದಾಳಿ ಮಾಡಿರುವ ಪೊಲೀಸರು ಭಾರಿ ಪ್ರಮಾಣದ ಕೊಳೆ ನಾಶ ಮಾಡಿ ಕಳ್ಳಭಟ್ಟಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಖಚಿತ ಮಾಹಿತಿಯ ಮೇರೆಗೆ ಕಾರ್ಯಾಚರಣೆಗಿಳಿದ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸರು ಕಾಫಿ ತೋಟದಲ್ಲಿ ಅಕ್ರಮವಾಗಿ ತಯಾರಿಕೆ ನಡೆಸುತ್ತಿದ್ದ ಕಳ್ಳಭಟ್ಟಿಯನ್ನು ವಶಕ್ಕೆ ಪಡೆದಿದ್ದಾರೆ.
ಕಳ್ಳಭಟ್ಟಿ ತಯಾರಿಕೆಗಾಗಿ ತಯಾರಿಸಿದ 100 ಲಿಟರ್ ಕೊಳೆಯನ್ನು ನಾಶ ಮಾಡಿರುವ ಪೊಲೀಸರು, ಎರಡು ಲೀಟರ್ ಕಳ್ಳಭಟ್ಟಿಯನ್ನು ವಶಪಡಿಸಿಕೊಂಡಿದ್ದಾರೆ. ಈ ಕಳ್ಳಭಟ್ಟಿಯನ್ನು ತಯಾರಿ ಮಾಡುತ್ತಿದ್ದ ಕಾಳಿಕಟ್ಟೆ ವಾಸಿ ಸುರೇಶ್ ಪರಾರಿಯಾಗಿದ್ದಾನೆ.
ಈ ಕಾರ್ಯಾಚರಣೆಯಲ್ಲಿ ಮೂಡಿಗೆರೆಯ ಬಾಳೂರು ಠಾಣಾ ಸಬ್ ಇನ್ಸ್ಪೆಕ್ಟರ್ ಸಿಸಿ ಪವನ್ ಕುಮಾರ್, ಠಾಣೆಯ ಪೊಲೀಸರಾದ ಮಹೇಶ್, ವಸಂತ್, ಪ್ರವೀಣ್, ಮನು, ಸತೀಶ್, ಅಭಿಜಿತ್, ಓಂಕಾರ, ಹೇಮಂತ್, ಪ್ರದೀಪ್ ಭಾಗವಹಿಸಿದ್ದರು. ಘಟನೆಯ ಸಂಬಂಧ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಆರೋಪಿಯ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ತನು ಕೊಟ್ಟಿಗೆಹಾರ, ವರದಿಗಾರರು



0 Comments