ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಪ್ರೇಮಿಸಿದ ಹುಡುಗಿ ವಿವಾಹಕ್ಕೆ ನಿರಾಕರಣೆ ಮಾಡಿದಕ್ಕಾಗಿ ಯುವಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.

ಇದನ್ನೂ ಓದಿ : N.R PURA : ನಿಯಂತ್ರಣ ತಪ್ಪಿ ಹೊಂಡಕ್ಕೆ ಉರುಳಿದ ಬೈಕ್; ಸ್ಥಳದಲ್ಲೇ ಕಳಸ ಮೂಲದ ವ್ಯಕ್ತಿ ಸಾವು | ಚಾಲಕನಿಗೆ ಮೃತ್ಯುವಾದ ಹೆಲ್ಮೆಟ್

ಚಿಕ್ಕಮಗಳೂರು ಜಿಲ್ಲೆಯ ನರಸಿಂಹರಾಜಪುರ ತಾಲೂಕಿನ ಮುತ್ತಿನಕೊಪ್ಪ ಸಮೀಪದ ಶಂಕರಪುರದ ಚೇತನ್ (31) ಆತ್ಮಹತ್ಯೆಗೆ ಶರಣಾದ ಮೃತ ದುರ್ದೈವಿ. ಗಾನವಿ ಎಂಬ ಯುವತಿ ಹಾಗೂ ಚೇತನ್ ಕಳೆದ ಒಂಬತ್ತು ವರ್ಷಗಳಿಂದ ಪ್ರೇಮಿಸುತ್ತಿದ್ದು ಗಾನವಿ ಮದುವೆಗೆ ನಿರಾಕರಿಸಿದ್ದಾಳೆ, ನನ್ನಿಂದ ನಾಲ್ಕು ಲಕ್ಷ ಹಣವನ್ನು ಪಡೆದಿದ್ದಾಳೆ ಎಂಬುದಾಗಿ ಮೃತ ಚೇತನ್ ವಾಯ್ಸ್ ಮೆಸೇಜ್ ನ ಮೂಲಕ ಸಂಬಂಧಿಕರಿಗೆ ತಿಳಿಸಿದ್ದಾರೆ. 

ಈ ಕುರಿತು ಸಂಬಂಧಿಕರಿಗೆ ವಾಯ್ಸ್ ಮೆಸೇಜ್ ಮಾಡಿರುವ ಚೇತನ್ ನನ್ನ ಸಾವಿಗೆ ನ್ಯಾಯ ದೊರೆಯಬೇಕಾದರೆ ಗಾನವಿಗೆ ಶಿಕ್ಷೆಯಾಗಬೇಕು, ನನ್ನ ಚಿತೆಗೆ ಗಾನವಿ ಅಗ್ನಿಸ್ಪರ್ಶ ಮಾಡಬೇಕು, ಆಕೆ ಬರುವವರೆಗೆ ನನ್ನ ಶರೀರವನ್ನು ಕೆಳಗಿಳಿಸಬೇಡಿ ಎಂಬುದಾಗಿ ತಿಳಿಸಿದ್ದಾರೆ ಹಾಗೂ ಡೆತ್ ನೋಟ್ ಕೂಡ ಬರೆದಿದ್ದಾರೆ ಎನ್ನಲಾಗಿದೆ. 

ಘಟನೆಯು ನರಸಿಂಹರಾಜಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಚೇತನ್ ಆತ್ಮಹತ್ಯೆಯ ಕುರಿತು ಗೆಳೆಯರು ಹಾಗೂ ಕುಟುಂಬವರ್ಗ ಅತೀವ ಬೇಸರವನ್ನು ವ್ಯಕ್ತಪಡಿಸಿದೆ.