ಹಾಸನ : (ನ್ಯೂಸ್ ಮಲ್ನಾಡ್ ವರದಿ) ಹಾಸನದಲ್ಲಿ ಕಾಡಾನೆಗಳ ದಾಂಧಲೆ ಮುಂದುವರೆದಿದ್ದು ಆನೆಯು ಬೆಳೆನಾಶ ಹಾಗೂ ಬೈಕ್ ನ್ನು ಜಖಂಗೊಳಿಸಿರುವ ಘಟನೆ ನಡೆದಿದೆ.
ಇದನ್ನೂ ಓದಿ : ತೀರ್ಥಹಳ್ಳಿ : ಗದ್ದೆ ಹೊಂಡಕ್ಕೆ ಬಿದ್ದು ದುರ್ಮರಣವನ್ನಪ್ಪಿದ ರೈತ
ಹಾಸನದ ಹೊರವಲಯವಾದ ಅರಕಲಗೂಡು ತಾಲೂಕಿನ ಮರಿಯಾನಗರದಲ್ಲಿ ಆನೆಗಳು ದಾಂಧಲೆಯನ್ನು ನಡೆಸಿದೆ. ಮನೆಯ ಬಳಿಯೇ ಏಳು ಕಾಡಾನೆಗಳು ಗುಂಪಿನಲ್ಲಿ ಅತ್ತಿಂದಿತ್ತ ಓಡಾಡುತ್ತಾ ಮನೆಯ ಹೊರಗಿದ್ದ ಬೈಕ್ ನ್ನು ಜಖಂಗೊಳಿಸಿದೆ. ಆನೆಯ ಹಾವಳಿಗೆ ನಿಯಂತ್ರಣವೇ ಇಲ್ಲದಂತಾಗಿದೆ ಎಂದು ಸಾರ್ವಜನಿಕರು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.
ಇದಲ್ಲದೇ ಹಾಸನದ ಸರೋಜಮ್ಮ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಬೆಳೆದಿದ್ದ ಶುಂಠಿ ಮತ್ತು ಕ್ಯಾನೆ ಬೆಳೆಯನ್ನು ಆನೆಯು ತುಳಿದು ಹಾಳು ಮಾಡಿದೆ. ಈ ಸಂಬಧ ಆನೆಯ ಉಪಟಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಕಡಿವಾಣ ಹಾಕಬೇಕು ಹಾಗೂ ಸೂಕ್ತ ಪರಿಹಾರ ಒದಗಿಸಬೇಕೆಂದು ಸಾರ್ವಜನಿಕರು ಹಾಗೂ ಬೆಳೆಹಾನಿಗೀಡಾದವರು ಆಗ್ರಹಿಸಿದ್ದಾರೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಪರಿಹಾರದ ಕುರಿತಾಗಿ ಸರ್ಕಾರಕ್ಕೆ ಮನವಿ ಸಲ್ಲಿಸುವ ಭರವಸೆ ನೀಡಿದ್ದಾರೆ.
ಅಕ್ರಮ ಮದ್ಯ ಮಾರಾಟ ನಡೆಸುತ್ತಿದ್ದ ವ್ಯಕ್ತಿ ಸೆರೆ
ಮೂಡಿಗೆರೆ : ಅಕ್ರಮವಾಗಿ ಮದ್ಯ ಮಾರಾಟ ನಡೆಸುತ್ತಿದ್ದ ಆರೋಪಿಯನ್ನು ಕಾರ್ಯಾಚರಣೆಯ ಮೂಲಕ ದಾಳಿ ಮದ್ಯ ಹಾಗೂ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಬಾಳೂರು ಠಾಣೆಯ ನೂತನ ಸಬ್ ಇನ್ಸ್ಪೆಕ್ಟರ್ ಸಿ.ಸಿ.ಪವನ್ ಕುಮಾರ್ ಮತ್ತು ಠಾಣೆಯ ಪೋಲಿಸರು ದಾಳಿ ನಡೆಸಿದ್ದು ಸಾವಿರಾರು ರೂಪಾಯಿ ಬೆಲೆ ಬಾಳುವ ಅಕ್ರಮ ಮದ್ಯವನ್ನು ಆರೋಪಿಯಿಂದ ವಶಕ್ಕೆ ಪಡೆದಿದ್ದಾರೆ.
ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಈಶ್ವರ್ ಎಂಬ ಆರೋಪಿಯನ್ನು ಬಂಧಿಸಿರುವ ಬಾಳೂರು ಪೊಲೀಸರು ಆತನಿಂದ 27,000 ರೂಪಾಯಿಯ ಮೌಲ್ಯದ 768 ಟೆಟ್ರಾ ಪ್ಯಾಕ್, 69.12 ಲೀಟರ್, ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಈತನು ಹ್ಯಾಂಡ್ ಪೋಸ್ಟ್ ಬಳಿ ದಿನಸಿ ಅಂಗಡಿಯಲ್ಲಿ ಅಕ್ರಮ ಮದ್ಯ ಮಾರುತ್ತಿದ್ದ ಎನ್ನಲಾಗಿದೆ.
ಘಟನೆಯ ಸಂಬಂಧ ಮೂಡಿಗೆರೆ ತಾಲೂಕಿನ ಬಾಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಈ ಕಾರ್ಯಾಚರಣೆಯಲ್ಲಿ ಬಾಳೂರು ಠಾಣಾ ಸಬ್ ಇನ್ಸ್ಪೆಕ್ಟರ್ ಪವನ್ ಕುಮಾರ್, ಪೊಲೀಸರಾದ ಅನಿಲ್ ಕುಮಾರ್, ಪ್ರವೀಣ್, ವಸಂತ್, ಮತ್ತು ಅನಿಲ್ ಇದ್ದರು.



0 Comments