ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಪತಿ ಪತ್ನಿಯ ನಡುವೆ ಉಂಟಾದ ಕಲಹದ ಕಾರಣ ಪತಿಯೇ ಪತ್ನಿಯ ಮೇಲೆ ಬಂದೂಕಿನಿಂದ ಗುಂಡು ಹೊಡೆದು ಆಕೆಯ ಹತ್ಯೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.

 ಇದನ್ನೂ ಓದಿ :  ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ನವವಿವಾಹಿತೆ

ಚಿಕ್ಕಮಗಳೂರಿನ ಮುಳ್ಳಯ್ಯನಗಿರಿ ರಸ್ತೆಯಲ್ಲಿರುವ ಹಾಗಲಖಾನ್ ಎಸ್ಟೇಟ್‌ನಲ್ಲಿ ಇಬ್ರಾಹಿಂ ಎಂಬಾತ ಪತ್ನಿಯೊಂದಿಗೆ ಕೆಲಸ ಮಾಡುತ್ತಿದ್ದ. ಮಂಗಳವಾರ ರಾತ್ರಿಯ ಸಮಯದಲ್ಲಿ ಪತಿ ಪತ್ನಿಯರ ನಡುವೆ ಕಲಹ ಉಂಟಾಗಿದೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಮದ್ಯ ಸೇವಿಸಿದ್ದ ಪತಿ ಇಬ್ರಾಹಿಂ ಕುಡಿತದ ಮತ್ತಿನಲ್ಲಿ ಪತ್ನಿ ವೈಮುನಿಸ್ಸಾಳ ಮೇಲೆ ಬಂದೂಕಿನಿಂದ ಗುಂಡು ಹಾರಿಸಿ ಆಕೆಯನ್ನು ಹತ್ಯೆ ಮಾಡಿದ್ದಾನೆ. 

ಈ ದಂಪತಿಗಳು ಕಿತ್ತಳೆ ಹಣ್ಣುಗಳನ್ನು ಕಾಯುವ ಕೆಲಸವನ್ನು ಹಾಗಲಖಾನ್ ಎಸ್ಟೇಟ್ನಲ್ಲಿ ಮಾಡುತ್ತಿದ್ದರು ಎನ್ನಲಾಗಿದೆ. ಕಲಹ ಉಂಟಾದ ಪರಿಣಾಮ ಕುಡಿತದ ಮತ್ತಿನಲ್ಲಿ ಬಂದೂಕಿನಿಂದ ಪತ್ನಿಯನ್ನು ಪತಿಯೇ ಹತ್ಯೆ ಮಾಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. 

ಘಟನೆಯ ಕುರಿತು ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಡಿ.ವೈ.ಎಸ್ಪಿ ಡಿ.ಟಿ ಪ್ರಭು, ಸರ್ಕಲ್ ಇನ್ಸ್ಪೆಕ್ಟರ್ ಸತ್ಯನಾರಾಯಣ ಘಟನಾ ಸ್ಥಳಕ್ಕೆ ತೆರಳಿ ಸ್ಥಳ ಪರಿಶೀಲನೆ ನಡೆಸಿದ್ದಾರೆ.

ಕಿಡಿಗೇಡಿಗಳಿಂದ ತೊಂದರೆ ಹಿನ್ನೆಲೆ ; ಗನ್ ಮ್ಯಾನ್ ನಿಯೋಜನೆ ಮಾಡುವಂತೆ ಕೋರಿದ ಚಿಕ್ಕಮಗಳೂರು ನಗರಸಭಾಧ್ಯಕ್ಷ

ಚಿಕ್ಕಮಗಳೂರು :  ಚಿಕ್ಕಮಗಳೂರು ನಗರಸಭಾ ಅಧ್ಯಕ್ಷರಾದ ವರಸಿದ್ಧಿ ವೇಣುಗೋಪಾಲ್ ಅವರು ಸುರಕ್ಷತೆ ಹಾಗೂ ಭದ್ರತೆಯ ದೃಷ್ಟಿಯಿಂದಾಗಿ ಪೊಲೀಸ್ ವರಿಷ್ಠಾಧಿಕಾರಿಗಳಲ್ಲಿ ಗನ್ ಮ್ಯಾನ್  ನಿಯೋಜನೆ ಮಾಡಬೇಕೆಂದು ಪತ್ರದ ಮುಖಾಂತರ ಕೋರಿದ್ದಾರೆ. 

ನಾನು ಚಿಕ್ಕಮಗಳೂರು ನಗರದ ಪ್ರಥಮ ಪ್ರಜೆಯಾಗಿದ್ದೇನೆ, ಕೆಲ ಕಿಡಿಗೇಡಿಗಳು ತೊಂದರೆ ನೀಡುತ್ತಿದ್ದಾರೆ, ಹಾಗೂ ಅನೇಕ ಬಾರಿ ಅವರನ್ನು ಹಿಂಬಾಲಿಸಿ ಛಾಯಾಚಿತ್ರಗಳನ್ನು ತೆಗೆದು ವಾಟ್ಸಪ್ ನಲ್ಲಿ ಹರಿಬಿಡುತ್ತಿರುವ ಕಾರಣ ಸುರಕ್ಷತೆ ನೀಡಿ ಭದ್ರತೆಯ ದೃಷ್ಟಿಯಿಂದ ಗನ್ ಮ್ಯಾನ್ ನ್ನು ನಿಯೋಜಿಸಬೇಕೆಂದು ಕೋರಿದ್ದಾರೆ. 

ವರಸಿದ್ಧಿ ವೇಣುಗೋಪಾಲ್ ಅವರು ಚಿಕ್ಕಮಗಳೂರು ನಗರಸಭಾ ಅಧ್ಯಕ್ಷರಾಗಿ ಅಧಿಕಾರವನ್ನು ವಹಿಸಿಕೊಂಡ ಬಳಿಕದಲ್ಲಿ ಅನೇಕ ರೀತಿಯ ವಿವಾದಗಳು ನಗರಸಭೆಯಲ್ಲಿ ಭುಗಿಲೆದ್ದಿತ್ತು. ಕಿಡಿಗೇಡಿಗಳು ತೊಂದರೆ ಕೊಡುತ್ತಿರುವುದು ಗಮನಕ್ಕೆ ಬಂದಿರುವ ಕಾರಣ ಅವರ ಸುರಕ್ಷತೆ ಹಾಗೂ ಭದ್ರತೆಯ ಸಲುವಾಗಿ ಓರ್ವ ಪೊಲೀಸ್ ಗನ್ ಮ್ಯಾನ್ ನ್ನು  ನಿಯೋಜನೆ ಮಾಡಿಕೊಡಬೇಕೆಂದು ವರಸಿದ್ಧಿ ವೇಣುಗೋಪಾಲ್ ಅವರು ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳನ್ನು ಕೋರಿದ್ದಾರೆ. 

ತನು ಕೊಟ್ಟಿಗೆಹಾರ, ವರದಿಗಾರರು