ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿ ಶ್ರೀ ಮಠಕ್ಕೆ ಭೇರಿನೀಡಿದ ಮೇಜರ್ ಜನರಲ್ ಜೆ.ವಿ ಪ್ರಸಾದ್  ಶಾರದಾಂಬೆಯ ದರ್ಶನ ಪಡೆದರು.

ಪ್ರಸ್ತುತ ಮೇಜರ್ ಜನರಲ್ ಜೆ ವಿ ಪ್ರಸಾದ್ ಭಾರತೀಯ ಸೇನೆಯಲ್ಲಿ Karnataka & Kerala Sub Area GOC (General Officer Commanding) ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಧಾರ್ಮಿಕ ಕ್ಷೇತ್ರವಾದ ಶೃಂಗೇರಿಗೆ ಕುಟುಂಬ ವರ್ಗದವರೊಂದಿಗೆ ಭೇಟಿ ನೀಡಿದ ಅವರು ಶೃಂಗೇರಿ ಶಾರದಾಂಬೆಯ ದರ್ಶನ ಹಾಗೂ ಜಗದ್ಗುರುಗಳ ದರ್ಶನವನ್ನು ಪಡೆದರು. 

ಶೃಂಗೇರಿ ಹಾಗೂ ಕೊಪ್ಪ ತಾಲೂಕಿನ ಹರಿಹರಪುರ ಶ್ರೀ ಮಠಕ್ಕೆ ಭೇಟಿ ನೀಡಿ ದೇವರ ದರ್ಶನವನ್ನು ಪಡೆದರು. ಈ ಸಂದರ್ಭದಲ್ಲಿ ಅವರೊಂದಿಗೆ ಶೃಂಗೇರಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರಾದ ರವಿ ಬಿ.ಎಸ್ ಹಾಗೂ ಠಾಣೆಯ ಸಿಬ್ಬಂದಿಗಳು ಇದ್ದರು. 

ಪರಮಪೂಜ್ಯ ಜಗದ್ಗುರುಗಳ ವಿಜಯಯಾತ್ರೆ : 

ದಕ್ಷಿಣಾಮ್ನಾಯ ಶೃಂಗೇರಿ ಶಾರದಾ ಪೀಠದ ಜಗದ್ಗುರು ಶ್ರೀ ಶ್ರೀ ವಿಧುಶೇಖರ ಭಾರತೀ ಮಹಾಸ್ವಾಮಿಗಳು ಧರ್ಮ ಜಾಗೃತಿಯ ಸಲುವಾಗಿ ಕೈಗೊಂಡಿರುವ ವಿಜಯಯಾತ್ರೆಯು ಬೆಂಗಳೂರನ್ನು ತಲುಪಿದ್ದು ಅಪಾರವಾದ ಭಕ್ತವೃಂದ ಶ್ರೀಗಳಿಗೆ ಭಕ್ತಿಯಿಂದ ಅದ್ಧೂರಿ ಸ್ವಾಗತವನ್ನು ಬೆಂಗಳೂರು ನಗರದಲ್ಲಿ ಕೋರಿದರು. 

ಈ ಸಂದರ್ಭದಲ್ಲಿ ಅನುಗ್ರಹ ಭಾಷಣ ಮಾಡಿದ ಪೂಜ್ಯ ಶ್ರೀಗಳು ಧರ್ಮ ಹಾಗೂ ಸಂಸ್ಕೃತಿಯನ್ನು ಕಾಪಾಡುವ ನಿಟ್ಟಿನಲ್ಲಿ ಸರ್ವರೂ ವ್ಯವಹರಿಸಬೇಕಿದೆ ನಾಡಿನ ಸಮಸ್ತರಿಗೂ ಒಳಿತಾಗಲಿ ಎಂದು ಆಶೀರ್ವದಿಸಿದರು.