ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಯ ಬಸ್ಟಾಂಡ್ ಸಮೀಪದಲ್ಲಿ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಶವ ಪತ್ತೆಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಬಸ್ ನಿಲ್ದಾಣದ ಎದುರು ಭಾಗದಲ್ಲಿರುವ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ, ಅಂದಾಜು 75 ವರ್ಷ ಪ್ರಾಯದ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
ಇದನ್ನೂ ಓದಿ : ಕೊಪ್ಪ : ಬಸ್ ಇಳಿಯಲು ತಡವಾದ ಕಾರಣಕ್ಕೆ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಕೆ.ಎಸ್.ಆರ್.ಟಿ.ಸಿ ಬಸ್ ನಿರ್ವಾಹಕ
ಮೃತ ವ್ಯಕ್ತಿಯು ಹೋಟೆಲೊಂದರಲ್ಲಿ ಕೆಲಸ ಮಾಡಿಕೊಂಡಿದ್ದರು ಎನ್ನಲಾಗಿದೆ, ಕಳೆದ ಮೂರ್ನಾಲ್ಕು ದಿನಗಳಿಂದ ಕೆಲಸಕ್ಕೂ ಕೂಡ ತೆರಳಿರಲಿಲ್ಲ ಎನ್ನಲಾಗಿದೆ. ಮನೆಯ ಸಮೀಪ ವಾಸನೆ ಬಂದ ಪರಿಣಾಮ ಸ್ಥಳೀಯರು ತೆರಳಿ ನೋಡಿದಾಗ ವ್ಯಕ್ತಿಯು ಸಾವನ್ನಪ್ಪಿರುವುದು ಬೆಳಕಿಗೆ ಬಂದಿದೆ.
ಮೃತ ವ್ಯಕ್ತಿಯ ಸಂಬಂಧಿಕರು ಕೂಡ ಆಗಮಿಸಿದ್ದು ಶವ ತೆಗೆದುಕೊಂಡಕೊಂಡು ಹೋಗಲಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಶೃಂಗೇರಿ ಠಾಣೆಯ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಯಾವುದೇ ಪ್ರಕರಣ ದಾಖಲಾಗಿಲ್ಲ.
ರೈತ ಚಳುವಳಿಯ ನಾಯಕ ಆರ್. ಆರ್ ಮಹೇಶ್ ನಿಧನ
ಚಿಕ್ಕಮಗಳೂರು : ಅನಾರೋಗ್ಯದ ಕಾರಣದಿಂದಾಗಿ ರೈತ ಚಳುವಳಿಯ ನಾಯಕರಾಗಿದ್ದ ಆರ್.ಆರ್ ಮಹೇಶ್ ಅವರು ನಿನ್ನೆ ನಿಧನ ಹೊಂದಿದ್ದಾರೆ.
ರೈತ ಚಳುವಳಿಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ರೈತರ ಹಿತಕ್ಕಾಗಿ ಒಂದಿಲ್ಲೊಂದು ಕಾಯಕಗಳಲ್ಲಿ ಮಗ್ನರಾಗಿರುತ್ತಿದ್ದ ಆರ್. ಆರ್ ಮಹೇಶ್ (46) ಅನಾರೋಗ್ಯ ಹೊಂದಿ ಆಸ್ಪತ್ರೆಗೆ ದಾಖಲಾಗಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದ್ದಾರೆ.
ಮೃತ ಮಹೇಶ್ ಗ್ರಾಮ ಪಂಚಾಯಿತಿ ಸದಸ್ಯರಾಗಿಯೂ ಕೂಡ ಜನಪರ ಕಾಳಜಿಯನ್ನು ಹೊಂದಿ ಕೆಲಸ ಮಾಡಿದ್ದಾರೆ, ಅಪಾರವಾದ ಸ್ನೇಹಿತವರ್ಗ, ಕುಟುಂಬಸ್ಥರು ಹಾಗೂ ಪತ್ನಿಯನ್ನು ಮಹೇಶ್ ಅಗಲಿದ್ದು ಇಂದು ಹೊಸಕೋಟೆ ರಾಮನ ಹಳ್ಳಿಯಲ್ಲಿ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.



0 Comments