ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಆಸ್ಪತ್ರೆ ಸಿಬ್ಬಂದಿಗಳ ಹಾಗೂ ಪೊಲೀಸರ ಕಣ್ಣು ತಪ್ಪಿಸಿ ಆಸ್ಪತ್ರೆಯಿಂದ ಎಸ್ಕೇಪ್ ಆಗಿದ್ದ ಗಾಂಜಾ ಪ್ರಕರಣದ ವಿಚಾರಣಾಧೀನ ಖೈದಿಯನ್ನು ಪೊಲೀಸರು ಕಾರ್ಯಾಚರಣೆಯ ಮೂಲಕ ಸೆರೆ ಹಿಡಿದಿದ್ದಾರೆ.
ಚಿಕ್ಕಮಗಳೂರಿನ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಯಲ್ಲಿ ಆರೋಗ್ಯ ಸಮಸ್ಯೆಯ ಕುರಿತಾಗಿ ದಾಖಲಾಗಿದ್ದ ಗಾಂಜಾ ಪ್ರಕರಣದ ವಿಚಾರಣಾಧೀನ ಖೈದಿ, ಎರಡು ದಿನಗಳ ಹಿಂದಷ್ಟೇ ಶೌಚಾಲಯದ ನೇಪಹೇಳಿ ಆಸ್ಪತ್ರೆ ಸಿಬ್ಬಂದಿಗಳ ಹಾಗೂ ಪೊಲೀಸರ ಕಣ್ಣು ತಪ್ಪಿಸಿ ಎಸ್ಕೇಪ್ ಆಗಿದ್ದ.
ಇದನ್ನೂ ಓದಿ : ಕೊಪ್ಪ : ಅಗ್ನಿ ಅವಘಡ ; ಎರಡು ಹಸುಗಳು ದುರ್ಮರಣ
ಈ ನಂತರದಲ್ಲಿ ಆತನಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದರು. ಈ ಕಾರ್ಯಾಚರಣೆಯನ್ನು ಕೈಗೆತ್ತಿಕೊಂಡಿದ್ದ ಕಡೂರು ಪೊಲೀಸ್ ಠಾಣಾ ಪಿಎಸೈ ರಮ್ಯಾ ಹಾಗೂ ಸಿಬ್ಬಂದಿಗಳು ಆರೋಪಿಯನ್ನು ಹೆಡೆಮುರಿಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
ಎಸ್ಕೇಪ್ ಆಗಿದ್ದ ಗಾಂಜಾ ಪ್ರಕರಣದ ಖೈದಿಯು ಶಿವಮೊಗ್ಗ ಜಿಲ್ಲೆಯ ಕುಂಸಿ ಅರಣ್ಯ ಪ್ರದೇಶದಲ್ಲಿರುವುದನ್ನು ಪತ್ತೆ ಮಾಡಿದ ಪಿಎಸೈ ರಮ್ಯಾ ಹಾಗೂ ಠಾಣಾ ಸಿಬ್ಬಂದಿಗಳು ಆತನನ್ನು ಕಾರ್ಯಾಚರಣೆಯ ಮೂಲಕ ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಮೂಲಕ ಎಸ್ಕೇಪ್ ಆಗಿದ್ದಾತನನ್ನು ಮರಳಿ ತಮ್ಮ ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ
ತನು ಕೊಟ್ಟಿಗೆಹಾರ, ವರದಿಗಾರರು




0 Comments