ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಮಾಜಿ ಸಚಿವೆ ಬಿ.ಟಿ ಲಲಿತಾ ನಾಯಕ್ ಅವರ ಜನತಾ ಪಾರ್ಟಿಯನ್ನು ತಲಕಾನೆ ರಾಜೇಂದ್ರ ಅವರು ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ.
ಇದನ್ನೂ ಓದಿ : ಶೃಂಗೇರಿ : ಚಾಲಕನ ನಿಯಂತ್ರಣ ತಪ್ಪಿ ಉರುಳಿದ ಟೆಂಪೋ ಟ್ರಾವೆಲರ್ ವಾಹನ; ಓರ್ವ ವ್ಯಕ್ತಿಯ ದುರ್ಮರಣ
ಕಳೆದ ನಾಲ್ಕೈದು ವರ್ಷಗಳಿಂದ ರಾಜಕೀಯ ಕ್ಷೇತ್ರದಿಂದ ದೂರ ಉಳಿದಿದ್ದ ತಲಕಾನೆ ರಾಜೇಂದ್ರ ಅವರು ಬೆಂಗಳೂರಿನ ಶಾಸಕರ ಭವನದಲ್ಲಿ ನಡೆದ ಜನತಾ ಪಾರ್ಟಿಯ ಸಭೆಯಲ್ಲಿ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷರಾದ ಬಿಟಿ ಲಲಿತಾ ನಾಯಕ್ ಅವರ ಸಮ್ಮುಖದಲ್ಲಿ ಸೇರ್ಪಡೆಗೊಂಡಿದ್ದಾರೆ.
ಸಮಾಜವಾದಿ ಮತ್ತು ರೈತಪರ ಪಕ್ಷದ ಸಿದ್ಧಾಂತವನ್ನು ಮೆಚ್ಚಿ ರಾಷ್ಟ್ರೀಯ ಪಕ್ಷವಾದ ಜನತಾ ಪಾರ್ಟಿಯನ್ನು ಸೇರಿದ್ದೇನೆ, ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಸಂಚರಿಸಿ ನೇಗಿಲು ಹೊತ್ತ ರೈತನ ಚಿಹ್ನೆ ಅಡಿಯಲ್ಲಿ ಪಕ್ಷ ಸಂಘಟನೆಯ ಕೆಲಸ ಮಾಡುವ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದೇನೆ - ಟಿ ಸಿ ರಾಜೇಂದ್ರ, ರಾಜ್ಯ ಪ್ರಧಾನ ಕಾರ್ಯದರ್ಶಿ, ಜನತಾ ಪಾರ್ಟಿ.
ರಾಜ್ಯ ರಾಜಕೀಯಕ್ಕೆ ಪ್ರವೇಶ ಪಡೆದುಕೊಂಡಿರುವ ಅವರು ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಂತೆಯೆ ಅವರಿಗೆ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕಮಾಡಿ, ರಾಜ್ಯಾದ್ಯಂತ ಪಕ್ಷ ಸಂಘಟನೆಗಾಗಿ ಕಾರ್ಯ ನಿರ್ವಹಿಸುವಂತೆ ಜವಾಬ್ದಾರಿಯನ್ನು ಲಲಿತಾ ನಾಯಕ್ ನೀಡಿದ್ದಾರೆ. ಸದಸ್ಯತ್ವ ಅಭಿಯಾನದ ಸಂಪೂರ್ಣ ಜವಾಬ್ದಾರಿಯೂ ಕೂಡ ಅವರದೇ ಆಗಿರುತ್ತದೆ ಎಂದು ಲಲಿತಾ ನಾಯಕ್ ಈ ಸಂದರ್ಭದಲ್ಲಿ ತಿಳಿಸಿದರು.
ಕಳೆದ ಅನೇಕ ವರ್ಷಗಳಿಂದ ಶೃಂಗೇರಿ ಕ್ಷೇತ್ರದ ರಾಜಕೀಯದಿಂದ ಹಿಂದೆ ಉಳಿದಿದ್ದ ತಲಕಾನೆ ಟಿ.ಸಿ ರಾಜೇಂದ್ರ ಅವರು ಇದೀಗ ರಾಜ್ಯ ರಾಜಕೀಯಕ್ಕೆ ಎಂಟ್ರಿ ನೀಡಿರುವುದು ಎಲ್ಲೆಡೆ ವ್ಯಾಪಕ ಚರ್ಚೆಯಲ್ಲಿದೆ. ಚುನಾವಣೆಗೆ ಕೆಲ ತಿಂಗಳುಗಳಿರುವ ಈ ಸಂದರ್ಭದಲ್ಲಿ ಇನ್ನೂ ಹೆಚ್ಚಿನ ಬದಲಾವಣೆಗಳು ಕ್ಷೇತ್ರದಲ್ಲುಂಟಾಗುವ ಸಾಧ್ಯತೆಗಳಿವೆ.




0 Comments