ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಲೇಔಟ್ ನಿರ್ಮಾಣ ಮಾಡುವ ಸಲುವಾಗಿ ರೈತರೋರ್ವರ ಜಮೀನನ್ನು ಸಂಪೂರ್ಣವಾಗಿ ಹಾಳು ಮಾಡಿ ಬೆಳೆಯನ್ನು ಹಾಳುಮಾಡಿರುವ ಘಟನೆ ಕೊಪ್ಪದ ಅಸಗೋಡಿನಲ್ಲಿ ನಡೆದಿದೆ.
ಇದನ್ನೂ ಓದಿ : ಮಾಜಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಪುತ್ರಿಯ ಕಾರು ತಡೆದು ಕೊಲೆ ಬೆದರಿಕೆ ಹಾಕಿದ ದುಷ್ಕರ್ಮಿ ; ಹಲ್ಲೆಗೆ ಯತ್ನ
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಅಸಗೋಡು ಗ್ರಾಮ ಪಂಚಾಯತ್ ವ್ಯಾಪ್ತಿಯ ಸರ್ವೇ ನಂಬರ್ 252 ರಲ್ಲಿ ಅರವಿಂದ್ ಎಂಬುವವರು ಕೃಷಿ ಭೂಮಿಯನ್ನು ಹೊಂದಿದ್ದು ಅವರು ಈ ಜಮೀನಿನಲ್ಲಿ ಅಡಿಕೆ, ಕಾಳುಮೆಣಸು ಮುಂತಾದ ಕೃಷಿ ಬೆಳೆಗಳನ್ನು ಬೆಳೆಸಿರುತ್ತಾರೆ ಹಾಗೂ ಈ ಜಮೀನಿನ ಮೇಲ್ಭಾಗದಲ್ಲಿದ್ದ ಜಮೀನನ್ನು ಅದರ ಮಾಲಿಕರಾದ ಪ್ರಭಾಕರ್ ಎಂಬುವವರಿಂದ ಆನಂದ್ ಎಂಬುವವರು ಖರೀದಿ ಮಾಡಿರುತ್ತಾರೆ ನಂತರ ಆನಂದ್ ಇತರರ ಜಮೀನನ್ನು ಸಹ ಖರೀದಿಮಾಡಿ, ಲೆಔಟ್ ಆಗಿ ಪರಿವರ್ತನೆ ಮಾಡುವ ಸಲುವಾಗಿ ದೊಡ್ಡ ದೊಡ್ಡ ಯಂತ್ರಗಳ ಮೂಲಕ ಮಣ್ಣನ್ನು ಅಗೆದು ಅರವಿಂದ್ ಅವರು ತಮ್ಮ ಜಮೀನಿಗೆ ಹೋಗಿ ಬರಲೂ ಕೂಡ ಜಾಗವನ್ನು ಬಿಡದೆ ಅವರಿಗೆ ಸಮಸ್ಯೆ ಉಂಟುಮಾಡುತ್ತಿದ್ದಾರೆ ಹಾಗೂ ಈ ಲೇಔಟ್ ನಿರ್ಮಾಣದ ಕಾರ್ಯಗಳು ನಮ್ಮ ತೋಟದ ನಾಶಕ್ಕೆ ಕಾರಣವಾಗಿದೆ ಎಂಬ ಗಂಭೀರ ಆರೋಪವನ್ನು ಅರವಿಂದ್ ಮಾಡಿದ್ದಾರೆ.
ಜಾಗದ ಮಣ್ಣು ತೋಟಕ್ಕೆ ತುಂಬಿ ತೋಟದ ಫಸಲಿಗೆ ಅಡ್ಡಿ :
ಲೇಔಟ್ ಮಾಡುವ ಸಲುವಾಗಿ ದೊಡ್ಡ ದೊಡ್ಡ ಯಂತ್ರಗಳನ್ನು ಬಳಸಿಕೊಂಡು ನೆಲವನ್ನು ಅಗೆದ ಪರಿಣಾಮ ಮಳೆಗಾಲದ ಸಂದರ್ಭದಲ್ಲಿ ಅರವಿಂದ್ ಅವರ ತೋಟಕ್ಕೆ ಸಂಪೂರ್ಣವಾಗಿ ಮಣ್ಣು ತುಂಬುತ್ತಿದ್ದು 2019 ರಿಂದ ಈ ವರೆಗೆ ನಿರಂತರವಾಗಿ ಬೆಳೆನಾಶ ಹೊಂದಿರುವುದಾಗಿ ಅಸಗೋಡು ಅರವಿಂದ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ಮೂರು ವರ್ಷಗಳಿಂದ ಫಸಲು ನಾಶ ಹೊಂದುತ್ತಿದ್ದು, ಮರಗಳನ್ನಾದರು ಉಳಿಸಿಕೊಡಿ ಹಾಗೆಯೇ ತಮಗಾದ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಇಲಾಖೆಯ ಅಧಿಕಾರಿಗಳಲ್ಲಿ ಮನವಿ ಸಲ್ಲಿಸಿದ್ದಾರೆ.
ಈ ವರೆಗೆ ಗ್ರಾಮ ಪಂಚಾಯತ್ ಅಧಿಕಾರಿಗಳಿಂದ ಮೇಲಧಿಕಾರಿಗಳವರೆಗೂ ಈ ಸಮಸ್ಯೆಯನ್ನು ಪರಿಹರಿಸುವಂತೆ ಕೋರಿದರೂ ಕೂಡ ಯಾವುದೇ ಪ್ರಯೋಜನಗಳಾಗಿಲ್ಲ ತಮ್ಮ ಸಮಸ್ಯೆಗೆ ಇದುವರೆಗೆ ಯಾರಿಂದಲೂ ಸೂಕ್ತ ಪರಿಹಾರ ಲಭಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ 150ಕ್ಕೂ ಅಧಿಕ ಲೋಡುಗಳ ಮಣ್ಣು ಮಳೆಗಾಲದ ಸಂದರ್ಭದಲ್ಲಿ ಮಳೆ ನೀರಿನೊಂದಿಗೆ ಅಡಿಕೆ ತೋಟವನ್ನು ನುಗ್ಗಿ ಹೂಳುತುಂಬಿ ತೋಟಕ್ಕೆ ಹಾಗೂ ಬೆಳೆಗೆ ಹಾನಿಯಾಗಿರುತ್ತದೆ ಈ ಕುರಿತು ತಿಳಿಸಿದಾಗಲೂ ಸಹ ಅಧಿಕಾರಿಗಳು ಯಾವುದೇ ಕ್ರಮಗಳನ್ನು ಕೈಗೊಳ್ಳದೆ ಬೆಳೆ ಹಾನಿಗೆ ಕಾರಣರಾಗಿರುವುದಾಗಿ ತಿಳಿಸಿದ್ದು, ತ್ವರಿತಗತಿಯಲ್ಲಿ ಈ ಸಮಸ್ಯೆಗೆ ಪರಿಹಾರ ಒದಗಿಸಬೇಕು, ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸೂಕ್ತ ಕ್ರಮಕೈಗೊಂಡು ಅಡಿಕೆ ಮರಗಳನ್ನು ಉಳಿಸಿಕೊಡಬೇಕೆಂದು ಅವರು ಮನವಿ ಮಾಡಿದ್ದಾರೆ.





0 Comments