ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಗಾಂಜಾ ಪ್ರಕರಣದಲ್ಲಿ ಬಂಧಿಸಲ್ಪಟ್ಟು ವಿಚಾರಣೆಗೊಳಗಾಗಿದ್ದ ಖೈದಿಯೋರ್ವ ಪೊಲೀಸರ ಕಣ್ತಪ್ಪಿಸಿ ಎಸ್ಕೇಪ್ ಆಗಿರುವ ಘಟನೆ ನಡೆದಿದೆ.

ಗಾಂಜಾ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಂಧಿಸಲ್ಪಟ್ಟಿದ್ದ ಚಿಕ್ಕಮಗಳೂರು ಜಿಲ್ಲೆಯ ಕಡೂರು ಮೂಲದ ಧನರಾಜ್ ಅನಾರೋಗ್ಯದ ನಿಮಿತ್ತ ಚಿಕ್ಕಮಗಳೂರಿನ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ. 

ಇದನ್ನೂ ಓದಿ : ಶೃಂಗೇರಿ : ಬಸ್ಟಾಂಡ್ ಸಮೀಪ ಕೊಳೆತ ಸ್ಥಿತಿಯಲ್ಲಿ ವ್ಯಕ್ತಿಯ ಶವಪತ್ತೆ

ಈ ಮಧ್ಯೆ ಆಸ್ಪತ್ರೆ ಸಿಬ್ಬಂದಿಗಳು ಹಾಗೂ ಪೊಲೀಸರ ಕಣ್ತಪ್ಪಿಸಿ ಚಿಕಿತ್ಸೆಗೆ ದಾಖಲಾಗಿದ್ದ ಕೊಠಡಿಯಿಂದ ಪರಾರಿಯಾಗಿದ್ದಾನೆ. ಈ ಸಂಬಂಧ ನಿಯೋಜಿಸಿದ್ದ ಇಬ್ಬರನ್ನು ಪೊಲೀಸ್ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದು ಆರೋಪಿಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಆರಂಭವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಕೊಪ್ಪ : ಬಸ್ ಇಳಿಯಲು ತಡವಾದ ಕಾರಣಕ್ಕೆ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಕೆ.ಎಸ್.ಆರ್.ಟಿ.ಸಿ ಬಸ್ ನಿರ್ವಾಹಕ

ಕೊಪ್ಪ / ಬೆಂಗಳೂರು :  ತನ್ನ ಪುಟ್ಟ ಮಕ್ಕಳೊಂದಿಗೆ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ತೆರಳುತ್ತಿದ್ದ ಮಹಿಳೆಯ ಮೇಲೆ ಬಸ್ ಕಂಡಕ್ಟರ್ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಿಂದ ಬೆಂಗಳೂರಿನ ಯಶವಂತಪುರಕ್ಕೆ ಕೆ.ಎಸ್. ಆರ್.ಟಿ.ಸಿ ಬಸ್ಸಿನ ಮೂಲಕ ತೆರಳುತ್ತಿದ್ದ ಸಿರಾಜ್ ಉನ್ನೀಸಾ ಎಂಬ ಮಹಿಳೆಯ ಮೇಲೆ ಬೆಳಗ್ಗಿನ ಜಾವ ಬಸ್ ನಿರ್ವಾಹ ರವಿಕುಮಾರ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪವನ್ನು ಹಲ್ಲೆಗೀಡಾದ ಮಹಿಳೆ ಮಾಡಿದ್ದಾರೆ.

ಮಹಿಳೆ ಬಸ್ಸಿನಿಂದ ಇಳಿಯುವ ಸಂದರ್ಭದಲ್ಲಿ ಆಕೆಯ ಬಳಿ ಲಗೇಜ್ ಹಾಗೂ ಪುಟ್ಟ ಮಕ್ಕಳು ಮಲಗಿದ್ದ ಕಾರಣ ಮತ್ತು ಸೀಟಿನ ಕೆಳಭಾಗದಲ್ಲಿ ಅವರ ಚಪ್ಪಲಿಗಳು ಸಿಲುಕಿಕೊಂಡಿದ್ದರಿಂದ ಇಳಿಯುವುದು ತಡವಾಗಿದೆ ಈ ಸಂದರ್ಭದಲ್ಲಿ ಕಂಡಕ್ಟರ್ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂಬುದಾಗಿ ನೊಂದ ಮಹಿಳೆ ಆರೋಪಿಸಿದ್ದಾರೆ.

ಬಸ್ಸಿನಿಂದ ಕೆಳಗೆ ಇಳಿದು ತಮ್ಮ ಬಸ್ಸಿನ ಡಿಕ್ಕಿಯಲ್ಲಿಟ್ಟಿದ್ದ ತಮ್ಮ ಲಗೇಜ್ ನ್ನು ಪಡೆದುಕೊಳ್ಳುವ ವೇಳೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಸ್ಸಿನ ಮೇಲೆ ಹತ್ತಿ ಬೂಟು ಕಾಲಿನಿಂದ ಆಕೆಯ ಹೊಟ್ಟೆಗೆ ಒದ್ದು ಆಕೆಯ ಮುಖಕ್ಕೂ ಒದ್ದಿದ್ದಾನೆ ಎಂದು ಹಲ್ಲೆಗೀಡಾದ ಮಹಿಳೆ ತಿಳಿಸಿದ್ದಾರೆ. 

ಘಟನೆ ನಡೆಯುತ್ತಿದ್ದಂತೆಯೆ ಆಟೋ ಚಾಲಕರು, ಹೂ ಮಾರುವವರು ಸ್ಥಳಕ್ಕೆ ಬಂದು ಬಸ್ಸನ್ನು ಬದಿಗೆ ಹಾಕಿಸಿದರು ಈ ಸಂದರ್ಭದಲ್ಲಿ ನಾನು ನಿರ್ವಾಹಕನ ಬಳಿಯಿದ್ದ ಮಿಷನ್ ಅನ್ನು ಕಿತ್ತುಕೊಂಡೆ ನಂತರದಲ್ಲಿ ಪೊಲೀಸರು ಆಗಮಿಸಿದಾಗ ಅವರಿಗೆ ನೀಡಿರುವುದಾಗಿ ತಿಳಿಸಿದರು.

ಒಬ್ಬಂಟಿಯಾಗಿ ಮಹಿಳೆಯರು ಪ್ರಯಾಣ ನಡೆಸುವುದು ಸುರಕ್ಷಿತವೇ ಎಂಬ ಪ್ರಶ್ನೆ :

ಇಂತಹ ಒರಟಾಗಿ ವ್ಯವಹರಿಸುವ, ತಾಳ್ಮೆಯೇ ಇಲ್ಲದ ನಿರ್ವಾಹಕರು ಇರುವಾಗ ಒಬ್ಬಂಟಿ ಮಹಿಳೆಯರು ಮಕ್ಕಳೊಂದಿಗೆ ಪ್ರಯಾಣ ಮಾಡಲು ಭಯವಾಗುತ್ತದೆ, ಈ ಘಟನೆ ನಡೆಯುವವರೆಗೂ ನಾನು ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಸುರಕ್ಷಿತ ಎಂದೆನಿಸಿಕೊಂಡಿದ್ದೆ, ಆದರೆ ಈ ಘಟನೆಯ ಬಳಿಕ ಬಸ್ಸಿನಲ್ಲಿ ಸಂಚಾರ ನಡೆಸುವುದು ಅತ್ಯಂತ ಕಷ್ಟಕರವಾಗಿದೆ ಎಂಬ ಭಾವನೆಯನ್ನು ಹಲ್ಲೆಗೀಡಾದ ಮಹಿಳೆ ವ್ಯಕ್ತಪಡಿಸಿದ್ದಾರೆ.

ಘಟನಾ ಸಂಬಂಧ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಸಂಬಂಧ ತನಿಖೆ ಆರಂಭಿಸಿದ್ದಾರೆ. ಸಂಪೂರ್ಣ ತನಿಖೆಯ ನಂತರ ಈ ಕುರಿತಾದ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.