ಕೊಡಗು : (ನ್ಯೂಸ್ ಮಲ್ನಾಡ್ ವರದಿ) ಮತಾಂತರ ಮಾಡಲು ಯತ್ನಿಸುತ್ತಿದ್ದ ಇಬ್ಬರನ್ನು ಬಜರಂಗದಳದ ಕಾರ್ಯಕರ್ತರು ಸೆರೆ ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಮಡಿಕೇರಿಯ ಪೊನ್ನಂಪೇಟೆ ತಾಲೂಕಿನ ಮಂಚಳ್ಳಿಯಲ್ಲಿ ದಂಪತಿಗಳು ಮತಾಂತರ ಮಾಡಲು ಯತ್ನಿಸುತ್ತಿದ್ದ ದಂಪತಿಗಳನ್ನು ಮಾಹಿತಿಯ ಮೇರೆಗೆ ಬಜರಂಗದಳದ ಕಾರ್ಯಕರ್ತರು ದಾಳಿ ನಡೆಸಿ ಪೊಲೀಸರಿಗೊಪ್ಪಿಸಿದ್ದಾರೆ. ಕೇರಳ ಮೂಲದ ಮಾನಂದವಾಡಿ ಕುರಿಯಚ್ಚನ್ ಬಂಧಿತ ಆರೋಪಿ. ಈತ ಪಣಿ ಎರವರ ಮುತ್ತ ಎಂಬುವವರನ್ನು ಮತಾಂತರ ಮಾಡಲು ಯತ್ನಿಸಿದಾಗ ಬಜರಂಗದಳದ ಕಾರ್ಯಕರ್ತರ ಬಳಿ ಸಿಕ್ಕಿ ಹಾಕಿಕೊಂಡಿದ್ದಾನೆ.
ಇದನ್ನೂ ಓದಿ : ಸಾರ್ವಜನಿಕರಿಗೆ ನಕಲಿ ರಶೀದಿ ನೀಡುತ್ತಿದ್ದ ಡಾಟಾ ಎಂಟ್ರಿ ಆಪರೇಟರ್ ಪೊಲೀಸರ ಬಲೆಗೆ
ಘಟನೆಯ ಸಂಬಂಧ ಕುಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಈ ಸಂಬಂಧ ಮಾಹಿತಿ ಕಲೆಹಾಕುತ್ತಿದ್ದಾರೆ.
ನಿನ್ನೆಯಷ್ಥೇ ಮತಾಂತರ ನಿಷೇಧ ಕಾಯ್ದೆ ಸುಗ್ರೀವಾಜ್ಞೆಗೆ ರಾಜ್ಯಪಾಲರಾದ ಥಾವರ ಚಂದ್ ಗೆಹ್ಲೋಟ್ ಅಂತಿಮ ಮುದ್ರೆಯನ್ನು ಹಾಕಿ ಅಂಗೀಕರಿಸಿದ್ದರು. ಇದರ ಅನುಸಾರ ಆಮಿಷಗಳಿಗೊಳಪಡಿಸಿ ಹಣ ನೀಡಿ ಅಥವಾ ಬೆರಾವುದೇ ರೀತಿಯಲ್ಲಿ ಒಂದು ಧರ್ಮದಿಂದ ಇನ್ನೊಂದು ಧರ್ಮಕ್ಕೆ ಮತಾಂತರ ಮಾಡುವುದು ನಿಷಿದ್ಧ ಹಾಗೂ ಬಲವಂತವಾಗಿ ಯಾರಾದರೂ ಈ ರೀತಿಯ ಕೃತ್ಯಗಳಲ್ಲಿ ಭಾಗಿಯಾದಲ್ಲಿ ಅಂತಹವರ ಮೇಲೆ 25,000 ರೂಪಾಯಿಗಳ ದಂಡದೊAದಿಗೆ 03 - 05 ವರ್ಷದ ಅವಧಿಯ ವರೆಗೆ ಸಜೆ ವಿಧಿಸಬಹುದು.
ಬಾಳೆಹೊನ್ನೂರು ಸಮೀಪ ರಸ್ತೆಗುರುಳಿದ ಬೃಹದಾಕಾರದ ಮರ ಹಾಗೂ ವಿದ್ಯುತ್ ಕಂಬ ; ರಸ್ತೆ ಸಂಚಾರಕ್ಕೆ ಅಡ್ಡಿ
ಬಾಳೆಹೊನ್ನೂರು : ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಭಾರೀ ಗಾತ್ರದ ಮರಗಳು ಹಾಗೂ ವಿದ್ಯುತ್ ಕಂಬ ಉರುಳಿ ಸಂಚಾರಕ್ಕೆ ಅಡ್ಡಿ ಉಂಟಾಗಿರುವ ಘಟನೆ ಬಾಳೆಹೊನ್ನೂರಿನಲ್ಲಿ ಸಂಭವಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡಬಗೆರೆ ಹಾಗೂ ಬಾಳೆಹೊನ್ನೂರು ಮಾರ್ಗದಲ್ಲಿ ಬೃಹದಾಕಾರದ ಮರಗಳ ಮೇಲೆ ವಿದ್ಯುತ್ ಕಂಬ ರಸ್ತೆಗೆ ಅಡ್ಡಲಾಗಿ ಉರುಳಿರುವ ಪರಿಣಾಮ ರಸ್ತೆ ಸಂಚಾರಕ್ಕೆ ಅಡ್ಡಿಯಾಗಿದೆ.
ಈ ಘಟನೆಯಿಂದಾಗಿ ವಾಹನಚಾಲನೆ ಮಾಡಲಾಗದೇ ಕಿಲೋಮೀಟರ್ ಗಟ್ಟಲೆ ವ್ಯಾಪ್ತಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತಿವೆ. ಪ್ರಸ್ತುತ ಸಿಬ್ಬಂದಿಗಳು ಹಾಗೂ ವಾಹನ ಸವಾರರು ಮರವನ್ನು ತೆರವುಗೊಳಿಸುವ ಕಾರ್ಯವನ್ನು ನಡೆಸುತ್ತಿದ್ದಾರೆ. ಬಹಳಷ್ಟು ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದು ಎರಡೂ ಸಾಲಿನಲ್ಲಿ ಪ್ರಯಾಣ ಮಾಡುವವರಿಗೆ ಈ ಘಟನೆಯಿಂದಾಗಿ ಸಂಚಾರ ಸಾಧ್ಯವಾಗುತ್ತಿಲ್ಲ.
ಕಳೆದ ಕೆಲ ದಿನಗಳಿಂದ ಈ ಭಾಗದಲ್ಲಿ ಸುರಿಯುತ್ತಿರುವ ಮಳೆಯು ಚಿಕ್ಕಮಗಳೂರು ಜಿಲ್ಲೆಯ ಹಲವೆಡೆಗಳಲ್ಲಿ ಅವಾಂತರ ಸೃಷ್ಟಿಸಿದ್ದು ಜನ ಸಾಮಾನ್ಯರನ್ನು ವಿವಿಧ ಸಮಸ್ಯೆಗೀಡುಮಾಡಿದೆ.



0 Comments