ಕೊಡಗು : (ನ್ಯೂಸ್ ಮಲ್ನಾಡ್ ವರದಿ) ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗಿಯಾದ ಹಿನ್ನೆಲೆ ಕೊಡಗು ಕಾಂಗ್ರೆಸ್ ಪಕ್ಷದಿಂದ ನಾಲ್ವರನ್ನು ಅಮಾನತುಗೊಳಿಸಿ ಆದೇಶವನ್ನು ಕಾಂಗ್ರೆಸ್ ಹೊರಡಿಸಿದೆ. 

 ಇದನ್ನೂ ಓದಿ :  ಚಿಕ್ಕಮಗಳೂರು : ಬಂದೂಕಿನಿಂದ ಗುಂಡು ಹಾರಿಸಿ ಪತ್ನಿಯನ್ನೇ ಹತ್ಯೆಗೈದ ಪತಿ

ಮಡಿಕೇರಿಯ ಗೋಣಿಕೊಪ್ಪ ನಗರ ಕಾಂಗ್ರೆಸ್ ಅಧ್ಯಕ್ಷರು ನೀಡಿದ ದೂರಿನ ಅನುಸಾರ ನಾಲ್ವರನ್ನು ಅಮಾನತುಗೊಳಿಸಲಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮ್ಮದ್ ಮಾಹಿತಿ ನೀಡಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರಾದ ಗೋಣಿಕೊಪ್ಪದ ಹೆಚ್.ಬಿ.ಮುರುಘ, ಹರಿದಾಸ್ ಮಣಿ , ತಂಬಿ ಹಾಗೂ ಶ್ರೀಜಾ ಮಣಿ ಅವರನ್ನು ಅಮಾನತುಗೊಳಿಸಿ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಆದೇಶಿಸಿದ್ದಾರೆ. ಮುಂದಿನ ಆದೇಶದವರೆಗೆ ಈ ನಾಲ್ವರು ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಂಡಿರುತ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ.


ಬುದ್ಧಿ ಹೇಳಿದವನಿಗೆ ಕತ್ತಿ, ದೊಣ್ಣೆಯಿಂದ ಹಲ್ಲೆ ನಡೆಸಿದ ಮೂವರು ಕಾರ್ಮಿಕರು

ಬಾಳೆಹೊನ್ನೂರು :   ಕೆಲಸ ಬಿಟ್ಟು ಹೋಗದಂತೆ ಬುದ್ದಿ ಹೇಳಿದ ಕಾರ್ಮಿಕನ ಮೇಲೆ ಸಹ ಕಾರ್ಮಿಕರು ಕತ್ತಿ, ದೊಣ್ಣೆಯಿಂದ ಹಲ್ಲೆ ಮಾಡಿ ಆತನನ್ನು  ಗಾಯಗೊಳಿಸಿರುವ ಘಟನೆ ಬಾಳೆಹೊನ್ನೂರಿನಲ್ಲಿ ವರದಿಯಾಗಿದೆ.

ಬಾಳೆಹೊನ್ನೂರಿನ ಬನ್ನೂರು ಶಿವಣ್ಣ ಗೌಡ ಎಂಬುವವರ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ನಾಲ್ವರು ಕಾರ್ಮಿಕರು ಅಂದಿನ ಕೆಲಸ ಮುಗಿಸಿ ರಾತ್ರಿ ಮದ್ಯಪಾನ ಮಾಡುವ ಸಂದರ್ಭದಲ್ಲಿ ಕಾರ್ಮಿಕನ ಮೇಲೆ ಹಲ್ಲೆಯಾಗಿರುವ ಕುರಿತು ಮಾಹಿತಿ ಲಭ್ಯವಾಗಿದೆ. 

ರಾತ್ರಿ ಮದ್ಯಪಾನ ಮಾಡುತ್ತಾ ಕುಳಿತಿದ್ದಾಗ ಮಣಿ, ಶಿವಕುಮಾರ್, ಕೃಷ್ಣ ಈ ತೋಟದ ಕೆಲಸ ಬಿಟ್ಟು ಬೇರೆ ಕಡೆಗೆ ಹೋಗೋಣ ಎಂದಿದ್ದಾರೆ. ಆದರೆ ಏಕಾಏಕಿ ಹೀಗೆ ಮಾಡುವುದು ಸಮಂಜಸವಲ್ಲ , ಕೆಲಸ ಬಿಡುವ ವಿಚಾರ ಮಾಲೀಕರಿಗೆ ತಿಳಿಸೋಣ ಎಂದು ಹಲ್ಲೆಗೀಡಾದ ರವಿ ಹೇಳಿದ್ದಾನೆ, ಇಷ್ಟಕ್ಕೇ ಕೋಪಗೊಂಡ ಮಣಿ, ಶಿವಕುಮಾರ್‌, ಕೃಷ್ಣ ಎಂಬ ಕಾರ್ಮಿಕರು ಕತ್ತಿ, ದೊಣ್ಣಿಯಿಂದ ರವಿ ಮೇಲೆ ಹಲ್ಲೆ ನಡೆಸಿದ್ದಾರೆ. 

ಗಾಯಾಳು ರವಿಗೆ ಬಾಳೆಹೊನ್ನೂರು ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಘಟನಾ ಸಂಬಂಧ ಬಾಳೆಹೊನ್ನೂರು ಠಾಣೆಯಲ್ಲಿ ದೂರು ದಾಖಲಾಗಿದೆ.