ಮಣಿಪಾಲ್/ ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಬೈಕ್ ಅಪಘಾತದಲ್ಲಿ ಯುವಕನೋರ್ವ ದಾರುಣವಾಗಿ ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ. 

ಇದನ್ನೂ ಓದಿ : ಶೃಂಗೇರಿ ಶಾರದೆಯ ದೇಗುಲಕ್ಕೆ ಭೇಟಿ ನೀಡಿದ ಭಾರತೀಯ ಸೇನೆಯ ಮೇಜರ್ ಜನರಲ್ ಜೆ.ವಿ ಪ್ರಸಾದ್

ಶೃಂಗೇರಿಯ ಮರಟೆ ಆಟೋ ಉಮೇಶ್ ಎಂಬುವವರ ಪುತ್ರ ಪ್ರಜ್ವಲ್ ಬೈಕ್ ಅವಘಡದಲ್ಲಿ ದುರ್ಮರಣವನ್ನಪ್ಪಿದ್ದಾರೆ. ಶೃಂಗೇರಿಯ ಮೆಣಸೆ ಸಮೀಪದ ಶಿಡ್ಲೆ ನಿವಾಸಿ ಪ್ರಜ್ವಲ್ ನಿಟ್ಟೆಯಲ್ಲಿ ಎರಡನೇ ವರ್ಷದ ಬಿಕಾಂ ಪದವಿಯನ್ನು ಓದುತ್ತಿದ್ದರು, ಮಣಿಪಾಲದ ಬಳಿ ನಡೆದ ರಸ್ತೆ ಅಪಘಾತದಲ್ಲಿ ಪ್ರಜ್ವಲ್ ಕೊನೆಯುಸಿರೆಳೆದಿದ್ದು ಕುಟುಂಬವನ್ನು ತೀವ್ರತರವಾದ ಶೋಕ ಆವರಿಸಿದೆ.

ಉಮೇಶ್ ದಂಪತಿಗಳ ಏಕೈಕ ಪುತ್ರನಾಗಿದ್ದ ಪ್ರಜ್ವಲ್ ಈ ಅವಘಡದಲ್ಲಿ ಮೃತಹೊಂದಿರುವುದು ಇಡೀ ಪರಿವಾರವನ್ನು ದುಃಖದ ಮಡುವಿಗೆ ಕೊಂಡೊಯ್ದಿದೆ. ಸಂಸಾರದ ಸಂಪೂರ್ಣ ಜವಾಬ್ದಾರಿಯನ್ನು ಹೊತ್ತು ಕುಟುಂಬಕ್ಕೆ ಆಧಾರವಾಗಬೇಕಿದ್ದ ಯುವಕನು ಕ್ರೂರ ವಿಧಿಯಾಟಕ್ಕೆ ಬಲಿಯಾಗಿದ್ದಾನೆ. 

ಕುಟುಂಬಸ್ಥರು, ಸ್ಥಳೀಯರು ಹಾಗೂ ಮೃತ ಪ್ರಜ್ವಲ್ ನ ಗೆಳೆಯರು ಅತೀವ ದುಃಖವನ್ನು ವ್ಯಕ್ತಪಡಿಸಿದ್ದಾರೆ.