ಶಿವಮೊಗ್ಗ :(ನ್ಯೂಸ್ ಮಲ್ನಾಡ್ ವರದಿ) ತಾಯಿಯು ತನ್ನಿಬ್ಬರು ಪುಟ್ಟ ಕಂದಮ್ಮಗಳಿಗೆ ನೇಣುಬಿಗಿದು ತಾನೂ ಕೂಡ ಆತ್ಮಹತ್ಯೆಗೆ ಶರಣಾಗಿರುವ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ : ಭೀಕರ ರಸ್ತೆ ಅಪಘಾತ ; ಶೃಂಗೇರಿ ಯುವಕನ ದುರ್ಮರಣ

ಶಿವಮೊಗ್ಗದ ಚೋರಡಿಯಲ್ಲಿ ಜ್ಯೋತಿ ಎಂಬ ವಿವಾಹಿತೆಯು ಎರಡು ಹಾಗೂ ಒಂದು ವರ್ಷದ ತನ್ನ ಪುಟ್ಟ ಕಂದಮ್ಮಗಳಿಗೆ ನೇಣು ಬಿಗಿದು ನಂತರದಲ್ಲಿ ಆಕೆಯು ಕೂಡ ನಿನ್ನೆ ಸಾವಿಗೆ ಶರಣಾಗಿದ್ದಾಳೆ. 

ಐದು ವರ್ಷಗಳ ಹಿಂದೆ ಮದುವೆಯಾಗಿದ್ದ ಜ್ಯೋತಿಯು ಯಾವ ಕಾರಣಕ್ಕಾಗಿ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಈವರೆಗೂ ತಿಳಿದುಬಂದಿಲ್ಲ, ಮೃತರನ್ನು ಜ್ಯೋತಿ (25) ಸಾನ್ವಿ (1) ಕುಶಾಲ್ (2) ಎಂದು ಗುರುತಿಸಲಾಗಿದೆ. 

ಘಟನೆಯ ಕುರಿತಂತೆ ಕುಂಸಿ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಸ್ಥಳ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪೊಲೀಸರು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿ


ದ್ದು ಆತ್ಮಹತ್ಯೆಗೆ ನಿಖರ ಕಾರಣಗಳೇನು ಎಂದು ಇನ್ನಷ್ಟೇ ತಿಳಿಯಬೇಕಿದೆ.

ಈ ಮನಕಲಕುವ ಘಟನೆಯನ್ನು ಕಂಡು ಅತೀವವಾದ ದುಃಖವನ್ನು ಮೃತರ ಸಂಬಂಧಿಕರು ಹಾಗೂ ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಪುಟ್ಟ ಮಕ್ಕಳನ್ನು ನೆನೆದು ಭಾವುಕರಾಗಿದ್ದಾರೆ.