ಕೊಡಗು : (ನ್ಯೂಸ್ ಮಲ್ನಾಡ್ ವರದಿ) ಹಣ ಪಡೆದುಕೊಂಡವರು ಹಿಂದಿರುಗಿಸಿ ನೀಡದ ಕಾರಣ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಶರಣಾಗಿರುವ ದುರ್ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ : ಮೂಡಿಗೆರೆ : ಕತ್ತಿಯಿಂದ ಕೈ ಕಡಿದು ಬಾಲಕಿಯ ಹತ್ಯೆಗೆ ಯತ್ನ

ಕೊಡಗು ಜಿಲ್ಲೆಯ ಕುಶಾಲನಗರ ರಾಧಾಕೃಷ್ಣ ಬಡಾವಣೆಯ ಸಮೀವುಲ್ಲಖಾನ್ ಎಂಬ ಮೊಬೈಲ್ ಅಂಗಡಿ ನಡೆಸುತ್ತಿದ್ದ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿರುವ ಮೃತ ದುರ್ದೈವಿ. ಮನೆಯಲ್ಲಿ ಯಾರೂ ಇಲ್ಲದವೇಳೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಸಮೀವುಲ್ಲಾ ಡೆತ್ ನೋಟನ್ನು ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ.

ಬರೆದಿರುವ ಡೆತ್‌ನೋಟ್‌ನಲ್ಲಿ ವ್ಯಕ್ತಿಯೋರ್ವ ಪಡೆದ ಹಣ ಹಿಂದಿರುಗಿಸದೇ ಇರುವುದು ಮೂಲ ಕಾರಣವೆಂದು ಬರೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಘಟನೆಯು ಪತ್ನಿ ಕೆಲಸಕ್ಕೆ ತೆರಳಿ ಮನೆಗೆ ಮರಳಿ ಬಂದಾಗ ಬೆಳಕಿಗೆ ಬಂದಿದ್ದು, ಯಾರಿಂದ ಎಷ್ಥು ಪ್ರಮಾಣದ ಹಣ ಬರಬೇಕಿದೆ ಎಂದು ಪೊಲೀಸರ ಸಂಪೂರ್ಣ ತನಿಖೆಯಿಂದಷ್ಥೆ ತಿಳಿಯಬೇಕಿದೆ.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದಿರುವ ಕುಶಾಲನಗರ ಠಾಣೆಯ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಈ ಪ್ರಕರಣದ ಹಿಂದಿರುವ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

ಐತಿಹಾಸಿಕ ಶ್ರೀ ಕೋಟೆ ಮಾರಿಕಾಂಬಾ ಜಾತ್ರೆಗೆ ಬ್ಯಾನರ್ ಅಳವಡಿಸಿ ಸ್ವಾಗತ ಕೋರಿದ ಮುಸ್ಲಿಮರು

ನರಸಿಂಹರಾಜಪುರ : ನರಸಿಂಹರಾಜಪುರದಲ್ಲಿ ನಡೆಯುವ ಐತಿಹಾಸಿಕ ಶ್ರೀ ಕೋಟೆ ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ಸ್ವಾಗತ ಕೋರುವ ಬ್ಯಾನರ್ ಗಳನ್ನು ಮುಸ್ಲಿಂಮರು ಅಳವಡಿಕೆ ಮಾಡಿ ಜಾತ್ರಾ ಮಹೋತ್ಸವಕ್ಕೆ ಶುಭಕೋರಿದ್ದಾರೆ.

ಎನ್.ಆರ್.ಪುರದಲ್ಲಿ ಇಂದಿನಿಂದ ಆರಂಭವಾಗಿರುವ ಐತಿಹಾಸಿಕ ಶ್ರೀ ಕೋಟೆ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವಕ್ಕೆ ಪಟ್ಟಣದ ಜಾಮೀಯ ಮಸೀದಿಯ ಅಧ್ಯಕ್ಷರು ಹಾಗೂ ಸದಸ್ಯರುಗಳು ಸೇರಿ ಜಾತ್ರೆಗೆ ಶುಭಕೋರಿ ಬ್ಯಾನರ್ ಹಾಕಿ ತನ್ಮೂಲಕ ಸಮಾಜದ ಸ್ವಾಸ್ಥ್ಯವನ್ನು ಹಾಗೂ ಎಲ್ಲರೂ ಒಂದೇ ಎಂಬ ಸೌಹಾರ್ದವನ್ನು ಮೆರೆದಿದ್ದಾರೆ. 

ಮೂರು ವರ್ಷಕ್ಕೊಮ್ಮೆ ನಡೆಯುವ  ಮಾರಿಕಾಂಬಾ ಜಾತ್ರಾ ಮಹೋತ್ಸವವು ಕಳೆದೆರಡು ವರ್ಷಗಳಿಂದ ಕೊರೋನಾ ಕಟ್ಟುನಿಟ್ಟಿನ ಕ್ರಮಗಳಿಂದ ಆಚರಿಸಲಾಗದ ಕಾರಣ, ಈ ಬಾರಿ ಅತ್ಯಂತ ವಿಜೃಂಭಣೆಯಿಂದ ಮೂರುದಿನಗಳ ಕಾಲ ಹಿಂದಿನ ಸಂಪ್ರದಾಯದಂತೆ ಪೂಜಾವಿಧಿ ವಿಧಾನಗಳೊಂದಿಗೆ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಜಾತ್ರಾ ಮಹೋತ್ಸವ ಜರುಗಲಿದೆ ಎಂದು ಜಾತ್ರಾಮಹೋತ್ಸವ ಸಮಿತಿ ಅಧ್ಯಕ್ಷ ಪಿ.ಆರ್ ಸದಾಶಿವ ತಿಳಿಸಿದರು.

ಕೆಳದಿ ಅರಸರ ಕಾಲದಿಂದಲೂ ಕೂಡ ಶ್ರೀ ಕೋಟೆ ಮಾರಿಕಾಂಬಾ ದೇವಿ ಜಾತ್ರಾ ಮಹೋತ್ಸವವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಇಂದುಬೆಳಗ್ಗೆ ಪಟ್ಟಣದ 21 ದೇವಾಲಯಗಳಿಗೆ ಹಣ್ಣುಕಾಯಿಗಳನ್ನು ನೀಡಿ, ವಿಶೇಷ ಪೂಜೆ ಸಲ್ಲಿಸಿ, ದೇವರ ಆಶೀರ್ವಾದದೊಂದಿಗೆ ಮಾರಿಕಾಂಬಾ ದೇವಿ ಗದ್ದುಗೆಗೆ ವಿಶೇಷ ಪೂಜೆಯನ್ನು ಸಲ್ಲಿಸಿದ ದೇವಸ್ಥಾನದ ಮಂಡಳಿಯವರು ಹಾಗೂ ಭಕ್ತಾದಿಗಳು, ಎಲ್ಲಾ ಸಮುದಾಯದವರೊಂದಿಗೆ ಭವ್ಯ ಮೆರವಣಿಗೆಯೊಂದಿಗೆ ಸುಂಕದಕಟ್ಟೆಗೆ ತೆರಳಿ, ದೇವಿಯ ವಿಗ್ರಹಕ್ಕೆ ವಿಶೇಷ ಪೂಜೆಯನ್ನು ನೆರವೇರಿಸಿ, ದೇವಿ ವಿಗ್ರಹಕ್ಕೆ ದೃಷ್ಠಿ ಬೊಟ್ಟನ್ನು ಇಡುವ ಕಾರ್ಯ ಮುಗಿಸಿಕೊಂಡು, ವಿಶ್ವ ಕರ್ಮ ಸಮುದಾಯದವರ ಪೂಜೆಯನ್ನು ಮುಗಿಸಿ, ಮೆರವಣಿಗೆಯೊಂದಿಗೆ  ಅಗ್ರಹಾರದ ಉಮಾಮಹೇಶ್ವರ ಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿ ದೇವಿ ವಿಗ್ರಹಕ್ಕೆ ಪ್ರಾಣ ಶಕ್ತಿ ತುಂಬಿ, ಬ್ರಾಹ್ಮಣ ಸಮುದಾಯದವರಿಂದ ವಿಶೇಷ ಪೂಜೆಯನ್ನು ದೇವಿಗೆ ಸಲ್ಲಿಸಿ ಮಧ್ಯಾಹ್ನದಿಂದ ಸಂಜೆಯವರೆಗೂ ಮಡಿಲಕ್ಕಿ ತುಂಬುವ ಕಾರ್ಯಕ್ರಮ ನಡೆಯುತ್ತಿದ್ದು ರಾತ್ರಿ 10 ಗಂಟೆಗೆ ದೇವಿಯ ವಿಗ್ರಹದ ಭವ್ಯ ಮೆರವಣಿಗೆ ನಡೆಯಲಿದೆ.

ಜಾತ್ರೆಯ ನಿಮಿತ್ತ ಅತ್ಯಂತ ಸಡಗರ ಹಾಗೂ ಸಂಭ್ರಮದಿಂದ ಜನರು ತಯಾರಿ ನಡೆಸಿದ್ದು ಹಬ್ಬದ ಸಂಭ್ರಮ ಎಲ್ಲೆಡೆ ಮನೆ ಮಾಡಿದೆ. ಕಳೆದ ವರ್ಷಗಳಲ್ಲಿ ಜಾತ್ರೆ ಆಚರಿಸಲು ಕಠಿಣ ನಿಯಮಾವಳಿಗಳು ಇದ್ದ ಕಾರಣ ಈ ಬಾರಿ ಯಾವುದೇ ತೊಡಕುಗಳಿಲ್ಲದೆ ಜಾತ್ರೆ ನಡೆಯಲಿದೆ .