ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ತ್ರೈಮಾಸಿಕ ನಿರ್ವಹಣೆಯ ಹಿನ್ನೆಲೆ ವಿದ್ಯುತ್ ನಿಲುಗಡೆಯಾಗುವ ಕುರಿತು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ : ಬೈಕ್ ಸವಾರನನ್ನು ಬೆನ್ನಟ್ಟಿದ ಕಾಡಾನೆ ; ಸ್ಥಳೀಯರಲ್ಲಿ ಮೂಡಿದ ಆತಂಕ

ಮಲೆನಾಡು ಭಾಗದಲ್ಲಿ ಕಳೆದ ಕೆಲ ದಿನಗಳಿಂದ ಸುರಿದ ಭಾರೀ ಮಳೆಯ ಪರಿಣಾಮ 66ಕೆವಿ ಆಲ್ದೂರು ಹಾಗೂ ಬಾಳೆಹೊನ್ನೂರಿನ ಲೈನ್ ಪಾಲ್ಟ್ ಆಗಿದ್ದು ಅದನ್ನು ಸರಿಪಡಿಸುವ ಸಲುವಾಗಿ ದಿನಾಂಕ 24.05.2022 ರ ಮಂಗಳವಾರದಂದು ಬೆಳಿಗ್ಗೆ 09 ರಿಂದ ಸಂಜೆ 05 ಗಂಟೆಯವರೆಗೆ 66/33/11 ಕೆವಿ.ವಿವಿ ಕೇಂದ್ರ ಬಾಳೆಹೊನ್ನೂರಿನಿಂದ ಹೊರಹೊಮ್ಮುವ ವಿದ್ಯುತ್ ಫೀಡರ್‌ಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂಬ ಮಾಹಿತಿಯನ್ನು ಕುರಿತು ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಮಾಹಿತಿ ನೀಡಿದ್ದಾರೆ.

ಬಾಳೆಹೊನ್ನೂರು, ಕಳಸ, ಶೃಂಗೇರಿ, ಜಯಪುರ, ಮಾಗುಂಡಿ, ಗಡಿಗೇಶ್ವರ ಮತ್ತು ಕಡಬಗೆರೆ ಪಟ್ಟಣ ಮತ್ತು ಗ್ರಾಮೀಣ ಫೀಡರ್‌ಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. ಇದು 2022 - 2023 ನೇ ಸಾಲಿನ ಮೊದಲನೇ ತ್ರೈಮಾಸಿಕ ನಿರ್ವಹಣೆಯಾಗಿದೆ.