ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ದಕ್ಷಿಣ ಭಾರತದ ಚಿರಾಪುಂಜಿ ಎಂದೇ ಪ್ರಖ್ಯಾತಿ ಪಡೆದಿದ್ದ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಆಗುಂಬೆಯಲ್ಲಿ ಮಳೆ ಪ್ರಮಾಣ ಕಡಿಮೆಯಾಗಿದ್ದು, ಉಡುಪಿ ಜಿಲ್ಲೆ ರಾಜ್ಯದಲ್ಲೇ ಅತಿ ಹೆಚ್ಚು ಮಳೆ ಬೀಳುವ ಪ್ರದೇಶವಾಗಿದೆ.
ಈ ಕುರಿತು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಕೆಎಸ್‌ಡಿಎಂಎ ವರದಿ ನೀಡಿದ್ದು 2015 ಮತ್ತು 2021ರ ನಡುವಿನ ಏಳು ವರ್ಷಗಳಲ್ಲಿ 5 ಬಾರಿ ಉಡುಪಿ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಹೆಚ್ಚು ಮಳೆ ಪ್ರಮಾಣ ದಾಖಲಾಗಿದೆ.
ಇದನ್ನೂ ಓದಿ : ಕಾಫಿನಾಡಿನಲ್ಲಿ ಮಾರಕಾಸ್ತ್ರಗಳ ಸದ್ದು ; ಬೈಕ್ ಚಾಲನೆ ಮಾಡುತ್ತಿದ್ದಾತನನ್ನು ಕಡಿದು ಎಸ್ಕೇಪ್ ಆದ ದುಷ್ಕರ್ಮಿಗಳು
ಅಂಕಿ-ಅಂಶಗಳ ಪ್ರಕಾರ ಉಡುಪಿ ಜಿಲ್ಲೆಯ ಬೈರಂಪಳ್ಳಿಯಲ್ಲಿ 2016ರಲ್ಲಿ ಅತೀ ಹೆಚ್ಚು 5,916 ಮಿ. ಮೀ. ಪ್ರಮಾಣದ ಮಳೆ ದಾಖಲಾಗಿದೆ. 2017ರಲ್ಲಿ ಕಾರ್ಕಳ ತಾಲೂಕಿನ ಶಿರಾಳುವಿನಲ್ಲಿ 6,936 ಮಿ. ಮೀ. ಮಳೆಯಾಗಿದೆ. ಶಿವಮೊಗ್ಗ ಜಿಲ್ಲೆಯ ಆಗುಂಬೆಯಲ್ಲಿ 2016ರಲ್ಲಿ 5,524 ಮಿ.ಮೀ. ಮತ್ತು 2017ರಲ್ಲಿ 5,345 ಮಿ.ಮೀ. ಮಳೆಯೊಂದಿಗೆ ಅಗ್ರಸ್ಥಾನ ಪಡೆದಿತ್ತು.
ಆದರೆ 2019ರಲ್ಲಿ ಉಡುಪಿಯ ಹೆಬ್ರಿಯ ದಾಖಲೆ ಪ್ರಮಾಣದ 9,340 ಮಿ. ಮೀ. ಮಳೆಯೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. 2020ರಲ್ಲಿ ಇನ್ನಂಜೆಯಲ್ಲಿ 7,988 ಮಿ. ಮೀ. ಮಳೆ ಪ್ರಮಾಣ ದಾಖಲಾಗುವ ಮೂಲಕ ಅಗ್ರಸ್ಥಾನ ಪಡೆದಿದೆ. ಈ ವರ್ಷಗಳಲ್ಲೂ ಆಗುಂಬೆಯಲ್ಲಿ ಬಿದ್ದ ಮಳೆ ಪ್ರಮಾಣ ಕಡಿಮೆಯಾಗಿತ್ತು. 2015 ರಿಂದ 2021ರ ನಡುವೆ ಕಳೆದ 7 ವರ್ಷಗಳಲ್ಲಿ ಆಗುಂಬೆಗಿಂತ ಹುಲಿಕಲ್‌ನಲ್ಲಿ ಹೆಚ್ಚು ಮಳೆಯಾಗಿದೆ.
ಈ ಮೂಲಕ ಕರ್ನಾಟಕದ ಚಿರಾಪುಂಜಿ ಎಂಬ ಸ್ಥಾನವನ್ನು ಪಡೆದಿದ್ದ ಶಿವಮೊಗ್ಗ ಜಿಲ್ಲೆಯ ಆಗುಂಬೆ ತನ್ನ ಸ್ಥಾನವನ್ನು ಉಡುಪಿಗೆ ಬಿಟ್ಟುಕೊಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಬಸ್ಸು ಹಾಗೂ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ; ಸ್ಥಳದಲ್ಲೇ ಕಾರು ಚಾಲಕನ ದುರ್ಮರಣ
ತರೀಕೆರೆ : ಬಸ್ ಹಾಗೂ ಓಮಿನಿ ಕಾರಿನ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಓಮಿನಿ ಕಾರಿನ ಚಾಲಕ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿರುವ ದುರ್ಘಟನೆ ತರೀಕೆರೆಯಲ್ಲಿ ನಿನ್ನೆ ನಡೆದಿದೆ.
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಎಂ.ಸಿ ಹಳ್ಳಿಯ ಜಿಲ್ಲಾ ಗಡಿಯಲ್ಲಿ ಖಾಸಗೀ ಬಸ್ಸು ಹಾಗೂ ಓಮಿನಿ ಕಾರಿನ ನಡುವೆ ಸಂಭವಿಸಿದ ಈ ರಸ್ತೆ ಅಪಘಾತದಲ್ಲಿ ಓಮಿನಿ ಕಾರನ್ನು ಚಾಲನೆ ಮಾಡುತ್ತಿದ್ದ ಚಾಲಕ ಸ್ಥಳದಲ್ಲೇ ದುರ್ಮರಣವನ್ನಪ್ಪಿದ್ದಾನೆ. ಮೃತ ವ್ಯಕ್ತಿಯನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ನಿವಾಸಿ (42) ವರ್ಷ ಪ್ರಾಯದ ಮೂರ್ತಿ ಎಂದು ಗುರುತಿಸಲಾಗಿದೆ.
ಭದ್ರಾವತಿಯಿಂದ ತರೀಕೆರೆಯ ಸಂಬಂಧಿಕರ ಮನೆಗೆ ತೆರಳುವ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಅಪಘಾತದ ತೀವ್ರತೆಗೆ ಓಮಿನಿ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದ್ದು ಚಾಲಕ ದಾರುಣವಾಗಿ ಅಂತ್ಯ ಕಂಡಿದ್ದಾನೆ. ಅಪಘಾತ ಸಂಭವಿಸಿದ ಸ್ಥಳಕ್ಕೆ ಪೊಲೀಸರು ತೆರಳಿ ಪರಿಶೀಲನೆ ನಡೆಸಿ ಘಟನಾ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಭೀಕರ ರಸ್ತೆ ಅಪಘಾತದಲ್ಲಿ ವ್ಯಕ್ತಿಯನ್ನು ಕಳೆದುಕೊಂಡಿರುವ ಕುಟುಂಬಸ್ಥರು ಹಾಗೂ ಅವರ ಪರಿಚಯಸ್ಥರು ಅತೀವವಾದ ನೋವನ್ನು ವ್ಯಕ್ತಪಡಿಸಿದ್ದಾರೆ.




0 Comments