ಚಿಕ್ಕಮಗಳೂರು ತಾಲೂಕಿನ ಬಾಳೆಹೊನ್ನೂರು ಸಂಗಮೇಶ್ವರಪೇಟೆ ಸಮೀಪದ ಹೊಸಪೇಟೆ ನಿವಾಸಿ ಶಶಿಕಿರಣ್ (22) ಎಂಬ ಯುವಕನು ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಖಾಂಡ್ಯ ವಲಯದ ಅರಣ್ಯವೀಕ್ಷಕರಾಗಿ ಶಶಿಕಿರಣ್ ಅವರು ಕಾರ್ಯನಿರ್ವಹಿಸುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ. ಊರಿನ ಜನರೊಡನೆ ಉತ್ತಮ ಹಾಗೂ ಆತ್ಮೀಯ ಬಾಂಧವ್ಯವನ್ನು ಶಶಿಕಿರಣ್ ಹೊಂದಿದ್ದರು ಎನ್ನಲಾಗಿದೆ.
ಮೃತ ಶಶಿಕಿರಣ್ ತಂದೆ ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದು, ಕುಟುಂಬಕ್ಕೆ ಆಸರೆಯಾಗಿ ನಿಲ್ಲಬೇಕಿದ್ದ ಯುವಕನನ್ನು ಕಳೆದುಕೊಂಡ ಕುಟುಂಬಸ್ಥರು ಅತೀವವಾದ ಬೇಸರವನ್ನು ವ್ಯಕ್ತಪಡಿಸಿದ್ದಾರೆ. ಮೃತ ಶಶಿಕಿರಣ್ ಅವರನ್ನು ನೆನೆದು ಸ್ನೇಹಿತರು ಹಾಗೂ ಪರಿಚಯಸ್ಥರು ಕಂಬನಿ ಮಿಡಿದಿದ್ದಾರೆ.
ಈ ಸಂಬಂಧ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




0 Comments