ಮೂಡಿಗೆರೆ : (ನ್ಯೂಸ್ ಮಲ್ನಾಡ್ ವರದಿ) ತುಂಡಾಗಿ ಬಿದ್ದಿದ್ದ ವಿದುತ್ ತಂತಿಯೊಂದನ್ನು ಸ್ಪರ್ಶಿಸಿ ದನ ಕಾಯುತ್ತಿದ್ದ ವ್ಯಕ್ತಿ ಹಾಗೂ ಎರಡು ದನಗಳು ಅಸುನೀಗಿರುವ ದುರ್ಘಟನೆ ನಡೆದಿದೆ. 



ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿಳಗಲಿ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು ಈ ಅವಘಡದಲ್ಲಿ ದನ ಮೇಯಿಸುತ್ತಿದ್ದ 55 ವರ್ಷ ಪ್ರಾಯದ ವ್ಯಕ್ತಿ ತಿಮ್ಮಪ್ಪ ದಾರುಣವಾಗಿ ಅಂತ್ಯ ಕಂಡಿದ್ದಾರೆ. ವ್ಯಕ್ತಿಯೊಂದಿಗೆ ಎರಡು ದನಗಳು ಕೂಡ ದಾರುಣವಾಗಿ ಅಂತ್ಯ ಕಂಡಿದೆ. 

ಘಟನೆಯ ಕುರಿತು ಮೆಸ್ಕಾಂ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಮೃತರ ಸಂಬಂಧಿಕರು ಹಾಗೂ ಸ್ಥಳೀಯರು ಈ ಘಟನೆಗೆ ನೇರ ಕಾರಣ ಮೆಸ್ಕಾಂ ಎಂದು ಆರೋಪಿಸಿದ್ದಾರೆ. ಈ ಘಟನೆಯು ಮೂಡಿಗೆರೆಯ ಬಾಳೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. 

ಸೂಕ್ತ ಪರಿಹಾರವನ್ನು ಮೃತರ ಕುಟುಂಬಕ್ಕೆ ಒದಗಿಸಬೇಕು ಹಾಗೂ ಮುಂದಿನ ದಿನಗಳಲ್ಲಿ ಈ ರೀತಿಯ ಯಾವುದೇ ಘಟನೆಗಳು ನಡೆಯದಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ತನು ಕೊಟ್ಟಿಗೆಹಾರ, ವರದಿಗಾರರು