ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಇಂದು ಎಸ್ಸೆಸೆಲ್ಸಿ ಫಲಿತಾಂಶ ಹೊರಬಿದ್ದಿದ್ದು ಕಳೆದ ವರ್ಷಗಳಲ್ಲಿ ತಲೆದೋರಿದ್ದ ಕೊರೋನ ವೈರಸ್‌ನ ಯಾವುದೇ ಅಡೆತಡೆಗಳಿಲ್ಲದೇ ಈ ಬಾರಿ ವಿದ್ಯಾರ್ಥಿಗಳು ಪರೀಕ್ಷೆಯನ್ನು ಎದುರಿಸಿ ಉತ್ತೀರ್ಣರಾಗಿದ್ದಾರೆ.
ಇದನ್ನೂ ಓದಿ : ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಮಹಿಳೆ : ಕಾಫಿ ತೋಟದಲ್ಲಿ ಶವ ಪತ್ತೆ
ಈ ಬಾರಿ ಚಿಕ್ಕಮಗಳೂರು ಜಿಲ್ಲೆಯ ಅನೇಕ ವಿದ್ಯಾರ್ಥಿಗಳು 625 ಅಂಕಗಳಿಗೆ 625 ಪಡೆಯುವ ಮೂಲಕ ಸಾಧನೆಯನ್ನು ಮಾಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ದರ್ಶಿನಿ ಪ್ರೌಢಶಾಲೆಯ ವಿದ್ಯಾರ್ಥಿನಿ ಶಮ ಹಾಗೂ ಅನ್ನಪೂರ್ಣ 625 ಅಂಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಒಟ್ಟಾರೆ
ಶೃಂಗೇರಿ ತಾಲೂಕಿನಲ್ಲಿ ಈ ಬಾರಿ ಎಸ್ಸೆಸೆಲ್ಸಿಯಲ್ಲಿ ಶೇಕಡಾ 91% ರಷ್ಟು ಫಲಿತಾಂಶ ದಾಖಲಾಗಿದೆ.
ನೋ ಫೇಲ್ ಸಾಧನೆ: ಸತತ 6ನೇ ವರ್ಷ ಯಾವುದೇ ವಿದ್ಯಾರ್ಥಿಗಳು ಅನುತ್ತೀರ್ಣಗೊಳ್ಳದೆ ಶೃಂಗೇರಿಯ ಜ್ಞಾನ ಭಾರತಿ ವಿದ್ಯಾಕೇಂದ್ರವು ದಾಖಲೆಯ ಫಲಿತಾಂಶ ನೀಡಿದೆ.
ಕೊಪ್ಪ ತಾಲೂಕಿನ ಕಮ್ಮರಡಿ ಸರ್ಕಾರಿ ಶಾಲೆಯ ವಿದ್ಯಾರ್ಥಿನಿ ಆಕೃತಿ ಎಸ್.ಎಸ್ ಕೂಡ 625 ಕ್ಕೆ 625 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಸಾಧನೆ ಮಾಡಿದ್ದಾಳೆ. ಅಂತೆಯೇ ಕೊಪ್ಪದ ವೆಂಕಟೇಶ್ವರ ವಿದ್ಯಾ ಮಂದಿರದ ವಿದ್ಯಾರ್ಥಿನಿ ಜ್ಙಾನವಿ ಕೂಡ 625 ಕ್ಕೆ 625 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಪೋಷಕರಿಗೆ ಹಾಗೂ ಓದಿದ ಶಾಲೆಗೆ ಕೀರ್ತಿ ತಂದಿದ್ದಾಳೆ.
ಆಲ್ದೂರಿನ ಪೂರ್ಣಪ್ರಜ್ಙಾ ಶಾಲೆಯ ಚರಿತಾ ಎಂ ಗೌಡ ಕೂಡ 625 ಕ್ಕೆ 625 ಅಂಕಗಳನ್ನು ತನ್ನದಾಗಿಸಿಕೊಂಡಿದ್ದಾಳೆ ಮತ್ತು ಚಿಕ್ಕಮಗಳೂರು ಜಿಲ್ಲೆಯ ಸಂತ ಮೇರಿ ಪ್ರೌಢಶಾಲೆಯ ಸುಚರಿತಾ 625 ಅಂಕಗಳನ್ನು ತಮ್ಮದಾಗಿಸಿಕೊಂಡಿದ್ದಾಳೆ.
ಈ ಬಾರಿ ಜಿಲ್ಲೆಗೆ ಶೇಕಡಾ 87.39 % ರಷ್ಟು ಫಲಿತಾಂಶ ಬಂದಿದ್ದು 12000 ವಿದ್ಯಾರ್ಥಿಗಳು ಈ ಬಾರಿ ಉತ್ತೀರ್ಣರಾಗಿದ್ದಾರೆ.
ಕೊಡಗು ಜಿಲ್ಲೆಯ ಫಲಿತಾಂಶ :
ಕೊಡಗು ಜಿಲ್ಲೆಯಲ್ಲಿ ಈ ಬಾರಿ 6700 ಜನ ವಿದ್ಯಾರ್ಥಿಗಳು ಎಸ್ಸೆಸೆಲ್ಸಿ ಪರೀಕ್ಷೆಯನ್ನು ಬರೆದಿದ್ದರು ಇದರಲ್ಲಿ 5803 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಕೊಡಗು ಜಿಲ್ಲೆಗೆ ಈ ಬಾರಿ 86.48 ರಷ್ಟು ಫಲಿತಾಂಶ ಬಂದಿದೆ. ಒಟ್ಟಾರೆ ಜಿಲ್ಲೆಯಲ್ಲಿ 3088 ಬಾಲಕಿಯರು ಹಾಗೂ 2715 ಬಾಲಕರು ಉತ್ತೀರ್ಣರಾಗಿದ್ದಾರೆ.
ಮಡಿಕೇರಿ ತಾಲೂಕಿನಲ್ಲಿ ಶೇಕಡಾ 90.60% ಫಲಿತಾಂಶ ಬಂದಿದ್ದು ಸೋಮವಾರಪೇಟೆ ತಾಲೂಕಿನ ಫಲಿತಾಂಶ ಶೇಕಡಾ 85.24 % ಆಗಿದೆ. ವಿರಾಜಪೇಟೆ ತಾಲೂಕಿನಲ್ಲಿ ಪರೀಕ್ಸೆಗೆ ಹಾಜರಾದ 2070 ವಿದ್ಯಾರ್ಥಿಗಳಲ್ಲಿ 1742 ಜನ ಉತ್ತೀರ್ಣರಾಗಿದ್ದಾರೆ. ಶೇಕಡಾ 84.20 ರಷ್ಟು ಫಲಿತಾಂಶವನ್ನು ವಿರಾಜಪೇಟೆ ತಾಲೂಕು ಪಡೆದುಕೊಂಡಿದೆ.
ಹಾಸನ ಜಿಲ್ಲೆಯ ಫಲಿತಾಂಶ :
ಹಾಸನದಲ್ಲಿ ಈ ಬಾರಿ 19 ಜನ ವಿದ್ಯಾರ್ಥಿಗಳು 625 ಕ್ಕೆ 625 ಅಂಕಗಳನ್ನು ಪಡೆದುಕೊಳ್ಳುವ ಮೂಲಕ ಹಾಸನ ಜಿಲ್ಲೆಯು 11 ನೇ ಸ್ಥಾನಕ್ಕೆ ಬರುವಲ್ಲಿ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದಾರೆ.
625 ಕ್ಕೆ 625 ಅಂಕ ಪಡೆದಿರುವ ಒಟ್ಟು 19 ಜನ ವಿದ್ಯಾರ್ಥಿಗಳಲ್ಲಿ 07 ಜನ ವಿದ್ಯಾರ್ಥಿಗಳು ವಿಜಯ ಆಂಗ್ಲ ಮಾಧ್ಯಮ ಶಾಲೆಯವರಾಗಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಪೋಷಕರು ಹಾಗೂ ಶಾಲಾ ಶಿಕ್ಷಕರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ಹಾಸನ ಜಿಲ್ಲೆಯು 11 ನೆಯ ಸ್ಥಾನಕ್ಕೆ ಬರುವಲ್ಲಿ ಸಹಕರಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಇಲಾಖೆಯ ಅಧಿಕಾರಿಗಳು ಹಾಗೂ ಶಾಲಾ ಆಡಳಿತ ಮಂಡಳಿ ಶುಭ ಹಾರೈಸಿ ಸಿಹಿ ತಿನ್ನಿಸಿ ಸಂಭ್ರಮಿಸಿದೆ.
ಶಿವಮೊಗ್ಗ ಜಿಲ್ಲೆಯ ಫಲಿತಾಂಶ :
ಶಿವಮೊಗ್ಗ ಜಿಲ್ಲೆಯ ವಿದ್ಯಾರ್ಥಿಗಳು ಈ ಬಾರಿ ಎದುರಿಸಿದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಅನುಗುಣವಾಗಿ ಜಿಲ್ಲೆಗೆ ಏ ಗ್ರೇಡ್ ಲಭಿಸಿದ್ದು ವಿದ್ಯಾರ್ಥಿಗಳ ಸಾಮರ್ಥ್ಯಕ್ಕನುಗುಣವಾಗಿ ಉತ್ತಮ ಅಂಕಗಳನ್ನು ಪಡೆದಿದ್ದಾರೆ.
ಅಂಕಿಅಂಶದ ಅನುಸಾರ ವಿದ್ಯಾರ್ಥಿಗಳು ಶೇಕಡ 75 ರಿಂದ ನೂರರ ಒಳಗೆ ಅಂಕಗಳನ್ನು ಪಡೆದಿದ್ದು ಶಾಲಾ ಶಿಕ್ಷಕರು ಹಾಗೂ ಪೋಷಕವೃಂದ ಮಕ್ಕಳನ್ನು ಅಭಿನಂದಿಸಿದ್ದಾರೆ.



0 Comments