ಕಳಸ : (ನ್ಯೂಸ್ ಮಲ್ನಾಡ್ ವರದಿ) ಸ್ನೇಹಿತರೊಂದಿಗೆ ಪ್ರವಾಸಕ್ಕೆ ಆಗಮಿಸಿದ್ದ ಯುವಕ ಕಳಸದ ಹೇಮಾವತಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ.
ಇದನ್ನೂ ಓದಿ : N.R PURA : ನಿಯಂತ್ರಣ ತಪ್ಪಿ ಹೊಂಡಕ್ಕೆ ಉರುಳಿದ ಬೈಕ್ ; ಸ್ಥಳದಲ್ಲೇ ಬೈಕ್ ಸವಾರ ಸಾವು| ಕಳಸ ಮೂಲದ ಚಾಲಕನಿಗೆ ಮೃತ್ಯುವಾದ ಹೆಲ್ಮೆಟ್
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಂಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಳ್ಳೋಡಿ ಸೋಮಾವತಿ ನದಿಯ ದೊಡ್ಡಹೊಳೆ ಎಂಬಲ್ಲಿ ಈಜಲು ತೆರಳಿದ್ದ ಯುವಕ ನೀರುಪಾಲಾಗಿದ್ದಾನೆ. ಸ್ನೇಹಿತರೊಂದಿಗೆ ಶನಿವಾರ ಚಾರಣಕ್ಕೆಂದು ಬಂದಿದ್ದ ಆಂಧ್ರಪ್ರದೇಶದ ಸಿಕಂದರಾಬಾದ್ ನ ಅಮೀರ್ ಪೇಟೆಯ 25 ವರ್ಷ ಪ್ರಾಯದ ಯುವಕ ಪ್ರಣಯ್ ಮೃತ ದುರ್ದೈವಿ.
ಮುಳ್ಳೋಡಿ ಪ್ರದೇಶಕ್ಕೆ ಬಂದು ಸ್ನೇಹಿತರೊಂದಿಗೆ ಚಾರಣ ಮುಗಿಸಿ ಭಾನುವಾರ ತೆರಳುವ ಸಮಯದಲ್ಲಿ ಓರ್ವ ಗೆಳೆಯ ನಾಪತ್ತೆಯಾದಾಗ ಉಳಿದ ಸ್ನೇಹಿತರು ಎಲ್ಲೆಡೆ ಹುಡುಕಿದ್ದಾರೆ. ಈ ವೇಳೆಯಲ್ಲಿ ಆತನ ಮೊಬೈಲ್ ಫೋನ್ ನದಿಯ ಪಕ್ಕದಲ್ಲಿ ದೊರೆತ ಕಾರಣ ಆತ ನೀರಿಗೆ ಬಿದ್ದಿರುವುದು ತಿಳಿದಿದೆ.
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಕುದುರೆಮುಖ ಪೊಲೀಸರು ಆತನ ಶವವನ್ನು ಪತ್ತೆಮಾಡುವ ಕಾರ್ಯವನ್ನು ಆರಂಭಿಸಿ ಮೃತದೇಹವನ್ನು ಹೊರತೆಗೆದಿದ್ದಾರೆ. ಈ ಸಂಬಂಧ ಕುದುರೆಮುಖ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಸಂಬಂಧ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.
ಶಿವಮೊಗ್ಗ : ಏರ್ಪೋರ್ಟ್ ನಿರ್ಮಾಣದ ವೇಳೆ ಅವಘಡ ; ರೋಡ್ ರೋಲರ್ ಹರಿದು ಕಾರ್ಮಿಕನ ದುರ್ಮರಣ :
ಶಿವಮೊಗ್ಗ : ರೋಡ್ ರೋಲರ್ ಚಾಲಕನ ನಿಯಂತ್ರಣ ತಪ್ಪಿ ಕಾರ್ಮಿಕನ ಮೇಲೆ ಹರಿದ ಪರಿಣಾಮ ಕಾರ್ಮಿಕ ಸಾವನ್ನಪ್ಪಿರುವ ದುರ್ಘಟನೆ ಶಿವಮೊಗ್ಗದಲ್ಲಿ ನಡೆದಿದೆ.
ಶಿವಮೊಗ್ಗದ ಸೋಗಾನೆಯಲ್ಲಿ ನಡೆಯುತ್ತಿರುವ ವಿಮಾನ ನಿಲ್ದಾಣದ ಕೆಲಸದಲ್ಲಿ ತೊಡಗಿಕೊಂಡಿದ್ದ ಕಾರ್ಮಿಕ ಕಾಮಗಾರಿ ನಡೆಸುವಾಗ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.
ಮೃತ ವ್ಯಕ್ತಿಯನ್ನು ಹಾವೇರಿ ಜಿಲ್ಲೆಯ ಮಲ್ಲಿಕಾರ್ಜುನ್ ಹರಿಜನ ಎಂದು ಗುರುತಿಸಲಾಗಿದೆ. ನೆಲ ಸಮತಟ್ಟು ಮಾಡುವ ಸಣ್ಣ ರೋಲರ್ ಕಾರ್ಮಿಕನ ಮೈಮೇಲೆ ಹರಿದು ದುರ್ಘಟನೆ ಸಂಭವಿಸಿದೆ ಹಾಗೂ ರೋಡ್ ರೋಲರ್ ಚಾಲನೆ ಮಾಡುತ್ತಿದ್ದ ಬಿಹಾರ ಮೂಲದ ಚಾಲಕನ ನಿರ್ಲಕ್ಷ್ಯವೇ ಈ ಘಟನೆಗೆ ಮುಖ್ಯ ಕಾರಣ ಎನ್ನಲಾಗಿದೆ.
ಘಟನಾ ಸಂಬಂಧ ಮೃತನ ಪೋಷಕರು ಶಿವಮೊಗ್ಗದ ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು ಪೊಲೀಸರು ಈ ಸಂಬಂಧ ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ.




0 Comments