ಕೊಪ್ಪ / ಬೆಂಗಳೂರು : (ನ್ಯೂಸ್ ಮಲ್ನಾಡ್ ವರದಿ) ತನ್ನ ಪುಟ್ಟ ಮಕ್ಕಳೊಂದಿಗೆ ಕೆ.ಎಸ್.ಆರ್.ಟಿ.ಸಿ ಬಸ್ಸಿನಲ್ಲಿ ತೆರಳುತ್ತಿದ್ದ ಮಹಿಳೆಯ ಮೇಲೆ ಬಸ್ ಕಂಡಕ್ಟರ್ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಿಂದ ಬೆಂಗಳೂರಿನ ಯಶವಂತಪುರಕ್ಕೆ ಕೆ.ಎಸ್. ಆರ್.ಟಿ.ಸಿ ರಾಜಹಂಸ ಬಸ್ಸಿನ ಮೂಲಕ ತೆರಳುತ್ತಿದ್ದ ಸಿರಾಜ್ ಉನ್ನೀಸಾ ಎಂಬ ಮಹಿಳೆಯ ಮೇಲೆ ಬೆಳಗ್ಗಿನ ಜಾವ ಬಸ್ ನಿರ್ವಾಹಕ ರವಿಕುಮಾರ್ ಹಲ್ಲೆ ಮಾಡಿದ್ದಾರೆ ಎಂಬ ಆರೋಪವನ್ನು ಹಲ್ಲೆಗೀಡಾದ ಮಹಿಳೆ ಮಾಡಿದ್ದಾರೆ.
ಇದನ್ನೂ ಓದಿ : ಬಾಳೆಹೊನ್ನೂರು : ಬುದ್ಧಿ ಹೇಳಿದವನಿಗೆ ಕತ್ತಿ, ದೊಣ್ಣೆಯಿಂದ ಹಲ್ಲೆ ನಡೆಸಿದ ಮೂವರು ಕಾರ್ಮಿಕರು
ಮಹಿಳೆ ಬಸ್ಸಿನಿಂದ ಇಳಿಯುವ ಸಂದರ್ಭದಲ್ಲಿ ಆಕೆಯ ಬಳಿ ಲಗೇಜ್ ಹಾಗೂ ಪುಟ್ಟ ಮಕ್ಕಳು ಮಲಗಿದ್ದ ಕಾರಣ ಮತ್ತು ಸೀಟಿನ ಕೆಳಭಾಗದಲ್ಲಿ ಅವರ ಚಪ್ಪಲಿಗಳು ಸಿಲುಕಿಕೊಂಡಿದ್ದರಿಂದ ಇಳಿಯುವುದು ತಡವಾಗಿದೆ ಈ ಸಂದರ್ಭದಲ್ಲಿ ಕಂಡಕ್ಟರ್ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ ಎಂಬುದಾಗಿ ನೊಂದ ಮಹಿಳೆ ಆರೋಪಿಸಿದ್ದಾರೆ.
ಬಸ್ಸಿನಿಂದ ಕೆಳಗೆ ಇಳಿದು ತಮ್ಮ ಬಸ್ಸಿನ ಡಿಕ್ಕಿಯಲ್ಲಿಟ್ಟಿದ್ದ ತಮ್ಮ ಲಗೇಜ್ ನ್ನು ಪಡೆದುಕೊಳ್ಳುವ ವೇಳೆಯಲ್ಲಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಬಸ್ಸಿನ ಮೇಲೆ ಹತ್ತಿ ಬೂಟು ಕಾಲಿನಿಂದ ಆಕೆಯ ಹೊಟ್ಟೆಗೆ ಒದ್ದು ಆಕೆಯ ಮುಖಕ್ಕೂ ಒದ್ದಿದ್ದಾನೆ ಎಂದು ಹಲ್ಲೆಗೀಡಾದ ಮಹಿಳೆ ತಿಳಿಸಿದ್ದಾರೆ.
ಘಟನೆ ನಡೆಯುತ್ತಿದ್ದಂತೆಯೆ ಆಟೋ ಚಾಲಕರು, ಹೂ ವ್ಯಾಪಾರಿಗಳು ಸ್ಥಳಕ್ಕೆ ಬಂದು ಬಸ್ಸನ್ನು ಬದಿಗೆ ಹಾಕಿಸಿದರು ಈ ಸಂದರ್ಭದಲ್ಲಿ ನಾನು ನಿರ್ವಾಹಕನ ಬಳಿಯಿದ್ದ ಟಿಕೆಟ್ ಮಿಷನ್ ಅನ್ನು ಕಿತ್ತುಕೊಂಡೆ ನಂತರದಲ್ಲಿ ಪೊಲೀಸರು ಆಗಮಿಸಿದಾಗ ಅವರಿಗೆ ನೀಡಿರುವುದಾಗಿ ತಿಳಿಸಿದರು.
ಒಬ್ಬಂಟಿಯಾಗಿ ಮಹಿಳೆಯರು ಪ್ರಯಾಣ ನಡೆಸುವುದು ಸುರಕ್ಷಿತವೇ? ಮಹಿಳೆ ಪ್ರಶ್ನೆ
ಇಂತಹ ಒರಟಾಗಿ ವ್ಯವಹರಿಸುವ, ತಾಳ್ಮೆಯೇ ಇಲ್ಲದ ನಿರ್ವಾಹಕರು ಇರುವಾಗ ಒಬ್ಬಂಟಿ ಮಹಿಳೆಯರು ಮಕ್ಕಳೊಂದಿಗೆ ಪ್ರಯಾಣ ಮಾಡಲು ಭಯವಾಗುತ್ತದೆ, ಈ ಘಟನೆ ನಡೆಯುವವರೆಗೂ ನಾನು ಕೆ.ಎಸ್.ಆರ್.ಟಿ.ಸಿ ಬಸ್ ಸಂಚಾರ ಸುರಕ್ಷಿತ ಎಂದೆನಿಸಿಕೊಂಡಿದ್ದೆ, ಆದರೆ ಈ ಘಟನೆಯ ಬಳಿಕ ಬಸ್ಸಿನಲ್ಲಿ ಸಂಚಾರ ನಡೆಸುವುದು ಅತ್ಯಂತ ಕಷ್ಟಕರವಾಗಿದೆ ಎಂಬ ಭಾವನೆಯನ್ನು ಹಲ್ಲೆಗೀಡಾದ ಮಹಿಳೆ ವ್ಯಕ್ತಪಡಿಸಿದ್ದಾರೆ.
ಘಟನಾ ಸಂಬಂಧ ಬೆಂಗಳೂರಿನ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಸಂಬಂಧ ತನಿಖೆ ಆರಂಭಿಸಿದ್ದಾರೆ. ಸಂಪೂರ್ಣ ತನಿಖೆಯ ನಂತರ ಈ ಕುರಿತಾದ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.
ಘಟನೆಗೆ ಸಂಬಂಧಿಸಿದಂತೆ ವಿಭಾಗೀಯ ನಿಯಂತ್ರಣಾಧಿಕಾರಿಗಳು ಮಹಿಳೆಯ ಮೇಲೆ ಹಲ್ಲೆ ನಡೆಸಿದ ಬಸ್ ನಿರ್ವಾಹಕನನ್ನು ಸಸ್ಪೆಂಡ್ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.





0 Comments