ಬಾಳೆಹೊನ್ನೂರು : (ನ್ಯೂಸ್ ಮಲ್ನಾಡ್ ವರದಿ) ಮಲೆನಾಡು ಭಾಗದ ಅನೇಕ ಕಡೆಗಳಲ್ಲಿ ಕಾಡಾನೆ ಹಾವಳಿಯು ಹೆಚ್ಚಾಗಿದ್ದು ನಿನ್ನೆ ಬಾಳೆಹೊನ್ನೂರಿನಲ್ಲಿ ಹಗಲಿನ ವೇಳೆಯಲ್ಲೇ ಆನೆ ಪ್ರತ್ಯಕ್ಷವಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಹೋಬಳಿಯ ಮೇಲ್ಪಾಲ್ ಕಾಫಿ ತೋಟದಲ್ಲಿ ಆನೆ ಹಾಡಹಗಲೇ ಕಾಣಿಸಿಕೊಂಡಿದೆ. ಈ ಭಾಗದ ರೈತರು ಬೆಳೆದ ಬೆಳೆಯನ್ನು ಆನೆಯಿಂದ ಸಂರಕ್ಷಿಸಿಕೊಳ್ಳಲು ಹರಸಾಹಸ ಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಆನೆಯನ್ನು ಮರಳಿ ಕಾಡಿಗಟ್ಟಲು ಸ್ಥಳೀಯರೇ ಪ್ರಯತ್ನ ನಡೆಸಿದ್ದಾರೆ ಆದರೆ ಆನೆಯು ತೋಟದಿಂದ ಅರಣ್ಯಕ್ಕೆ ತೆರಳದೆ ಬೇರೆ ಬೇರೆ ತೋಟಗಳಿಗೆ ನುಗ್ಗಿ ಬೆಳೆನಾಶ ಮಾಡುತ್ತಿದೆ.
ಇದನ್ನೂ ಓದಿ : ಗುಂಡೇಟಿಗೆ ಬಲಿಯಾದ ಗಂಡಾನೆ ; ತೋಟದಲ್ಲಿ ಆನೆಯ ಶವಪತ್ತೆ
ಆನೆಯು ಈಗಾಗಲೇ ತುಪ್ಪೂರು, ಕಾಡುಸಿಗಸೇ, ಅರಳೀಕೊಪ್ಪ, ಅಮಟೆಕೊಪ್ಪ,ಕುಂಜಳ್ಳಿ ಸೇರಿದಂತೆ ಈ ಭಾಗದ ಅನೇಕ ಕಡೆಗಳಲ್ಲಿ ಆನೆಯು ದಾಳಿ ನಡೆಸಿ ಬೆಳೆನಾಶ ಮಾಡಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾಡಾನೆಯನ್ನು ಮರಳಿ ಕಾಡಿಗಟ್ಟಲು ಪ್ರಯತ್ನಿಸುತ್ತಿದ್ದಾರೆ. ಆನೆಯ ಭಯದಿಂದಾಗಿ ತೋಟದಲ್ಲಿ ಕೆಲಸ ಮಾಡುವ ಕೃಷಿಕರು ಆತಂಕದಲ್ಲಿ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ಮಲೆನಾಡು ಭಾಗದ ಅನೇಕ ಕಡೆಗಳಲ್ಲಿ ಆನೆಗಳು ಕಾರ್ಮಿಕರನ್ನು ಬಲಿ ಪಡೆದುಕೊಂಡಿರುವ ಅನೇಕ ನಿದರ್ಶನಗಳಿದ್ದು ಕಾರ್ಮಿಕರಿಗೆ ಆನೆಯಿಂದ ಯಾವುದೇ ರೀತಿಯ ತೊಂದರೆ ಉಂಟಾಗದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ನಿಗಾವಹಿಸಿ ಆನೆಯನ್ನು ಕಾಡಿಗಟ್ಟುವ ಕಾರ್ಯವನ್ನು ಶೀಘ್ರವಾಗಿ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಹರಿಹರಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಶರೀಫ್ ಬಿಜೆಪಿಯಿಂದ ಉಚ್ಛಾಟನೆ
ಕಳೆದ ಗ್ರಾಮ ಪಂಚಾಯಿತಿ ಚುನಾವಣೆ ನಂತರ ಬಿಜೆಪಿ ಸದಸ್ಯರ ಬೆಂಬಲದೊಂದಿಗೆ ಹರಿಹರಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದ ಬಿಜೆಪಿ ಬೆಂಬಲಿತ ಮೊಹಮ್ಮದ್ ಶರೀಫ್ ಅವರು ನೆನ್ನೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ದಿಢೀರ್ ಕಮಲಕ್ಕೆ ಗುಡ್ ಬೈ ಹೇಳಿ ಕಾಂಗ್ರೆಸ್ ಜೊತೆಗೆ ಸ್ನೇಹ ಚಾಚಿದ್ದರು. ಈ ಮೂಲಕ ಕಾಂಗ್ರೆಸ್ ಸದಸ್ಯರ ಬೆಂಬಲದೊಂದಿಗೆ ಪುನಃ ಹರಿಹರಪುರ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು
ಹರಿಹರಪುರ ಪಂಚಾಯಿತಿ ಯಲ್ಲಿ 5 ಬಿಜೆಪಿ ಬೆಂಬಲಿತ ಸದಸ್ಯರು ಹಾಗೂ 4 ಕಾಂಗ್ರೆಸ್ ಬೆಂಬಲಿತ ಸದಸ್ಯರಿದ್ದರು. ಈ ಹಿಂದೆ ಅಧ್ಯಕ್ಷರಾಗಿದ್ದ ಮೊಹಮ್ಮದ್ ಶರೀಫ್ ಅವರ ಅಧ್ಯಕ್ಷ ಅವಧಿ ಮುಗಿದ ನಂತರ ಬಿಜೆಪಿ ಬೆಂಬಲಿತ ವೆಂಕಟೇಶ್ ಎಂಬುವವರು ಅಧ್ಯಕ್ಷರಾಗಬೇಕಿತ್ತು, ಆದರೆ ನೆನ್ನೆ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ನಡೆದ ಈ ಬೆಳವಣಿಗೆಯಲ್ಲಿ ನಾಲ್ವರು ಕಾಂಗ್ರೆಸ್ ಬೆಂಬಲಿತ ಸದಸ್ಯರ ಬೆಂಬಲದೊಂದಿಗೆ ಮೊಹಮ್ಮದ್ ಶರೀಫ್ ಅವರು ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದರು. ಇದರಿಂದ ಬಿಜೆಪಿಗೆ ಮುಖಭಂಗವಾಗಿತ್ತು.
ಆದರೆ ಇದಕ್ಕೆ ನ್ಯೂಸ್ ಮಲ್ನಾಡ್ ಗೆ ಪ್ರತಿಕ್ರಿಯಿಸಿದ್ದ ಶರೀಫ್ ಅವರು ನಾನು ಎಂದೆಂದಿಗೂ ಬಿಜೆಪಿಯೇ, ಕಳೆದ 17 ವರ್ಷಗಳಿಂದ ಪಕ್ಷದಲ್ಲಿ ಇದ್ದೇನೆ ಮುಂದೆಯೂ ಇರುತ್ತೇನೆ. ನಾನು ಪಕ್ಷದ ಮುಖಂಡರಿಗೆ ಹೇಳಿಯೇ ಅಧ್ಯಕ್ಷೀಯ ಚುನಾವಣೆ ಸ್ಪರ್ಧಿಸಿದ್ದೆ ನನಗೆ ಕಾಂಗ್ರೆಸ್ ಸದಸ್ಯರು ಸ್ವಯಂ ಪ್ರೇರಿತರಾಗಿ ಬೆಂಬಲ ನೀಡಿದ್ದಾರೆ ಆ ಮೂಲಕ ಅಧ್ಯಕ್ಷನಾಗಿ ಆಯ್ಕೆಯಾಗಿದ್ದೇನೆ. ನಾನು ಪಕ್ಷವನ್ನು ಬಿಟ್ಟಿಲ್ಲ ಎಂದಿದ್ದರು. ಆದರೆ ಇಂದು ಬಿಜೆಪಿಯಿಂದ ಮೊಹಮ್ಮದ್ ಶರೀಫ್ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಿ ಆದೇಶಿಸಲಾಗಿದೆ.
ಬಿಜೆಪಿ ಮುಖಂಡರಾದ ಶೆಟ್ಟಿಗದ್ದೆ ರಾಮಸ್ವಾಮಿ ಹಾಗೂ ಸತೀಶ್ ಅದ್ದಡ ಅವರು ಇಂದು ಪತ್ರಿಕಾ ಹೇಳಿಕೆ ನೀಡಿದ್ದು ನಮ್ಮ ಪಕ್ಷದ ಅಧೀಕ್ಷಕ ಅಭ್ಯರ್ಥಿಯ ವಿರುದ್ಧ ಚಟುವಟಿಕೆ ನಡೆಸಿದ್ದು ಪಕ್ಷ ದ್ರೋಹದ ಆಧಾರದ ಮೇಲೆ ಉಚ್ಛಾಟನೆ ಮಾಡಲಾಗಿದೆ ಎಂದಿದ್ದಾರೆ




0 Comments