ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಕಾಂಗ್ರೆಸ್ ಪಕ್ಷದವರಿಂದ ಹಿಂದೂ ಬ್ರಿಗೇಡ್ ಪದಾಧಿಕಾರಿಗಳು ಹಣ ಪಡೆದಿರುವ ಆರೋಪದ ಕುರಿತಾಗಿ ಇಂದು ಗಬ್ಬಾನೆಯ ದೇವಾಲಯದಲ್ಲಿ ಹಿಂದೂ ಬ್ರಿಗೇಡ್ ಪದಾಧಿಕಾರಿಗಳು ದೇವರ ಮುಂದೆ ಹರಕೆ ಹೇಳಿಕೊಂಡರು. 

ಇದನ್ನೂ ಓದಿ :  ಪೊಲೀಸರಿಗೆ ಸವಾಲೆಸೆದಿದ್ದ ನರಸಿಂಹರಾಜಪುರ ತಾಲೂಕು ಕಛೇರಿ ಸಿಬ್ಬಂದಿ ಅಂದರ್

ಕಳೆದ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್  ಶಾಸಕ ಟಿ.ಡಿ ರಾಜೇಗೌಡ ಅವರಿಂದ ಹಣ ಪಡೆದು ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್ ಜೀವರಾಜ್ ಸೋಲುವಂತೆ ಪ್ರವೀಣ್ ಖಾಂಡ್ಯ ಮಾಡಿದ್ದಾರೆ, ಮೂರು ಕೋಟಿ ಹಣ ಪಡೆದು ಕಾಂಗ್ರೆಸ್ ನ ಬೀ ಟೀಮ್ ಆಗಿದ್ದಾರೆ ಎಂಬ ಆರೋಪವನ್ನು ನಡೆಸಿದವರ ವಿರುದ್ಧವಾಗಿ ಇಂದು ದೇವರ ಮುಂದೆ ಹೇಳಿಕೆ ನೀಡಿದ್ದಾರೆ. 

ಆರೋಪ ಮಾಡಿದವರು ಗೈರು :

ನಾವು ಹಿಂದುತ್ವದ ಪರವಾಗಿ ಹಿಂದೂಗಳನ್ನು ಒಗ್ಗೂಡಿಸಿ ಕೆಲಸ ಮಾಡುತ್ತಿದ್ದೇವೆ, ರಾಷ್ಟ್ರೀಯ ಸ್ವಯಂಸೇವಕ ಸಂಘದ ನಿಷ್ಟಾವಂತ ಕಾರ್ಯಕರ್ತರಾದ ನಾವು ಧರ್ಮಕ್ಕಾಗಿ ಕೆಲಸ ಮಾಡುತ್ತಿದ್ದೇವೆ, ಹಣಕ್ಕಾಗಿ ನಾವು ಕೆಲಸ ಮಾಡುತ್ತಿದ್ದೇವೆ ಎಂದು  ಆರೋಪಿಸಿದವರನ್ನು ಇಂದು ದೇವರ ಮುಂದೆ ಬಂದು ನುಡಿಯುವಂತೆ ತಿಳಿಸಿದ್ದೆವು ಆದರೆ ಅವರು ದೇವಸ್ಥಾನಕ್ಕೆ ಬಂದಿಲ್ಲ ಎಂದರು. 

ಬಿಜೆಪಿಯ ಸಿದ್ಧಾಂತ ಹಾಗೂ ಸಂಘ ಪರಿವಾರದ ಕಾರ್ಯಕರ್ತರ ಶ್ರಮ ಯಾವುದೇ ಕಾರಣಕ್ಕೂ ವ್ಯರ್ಥವಾಗಬಾರದು, ಈ ನಿಟ್ಟಿನಲ್ಲಿ ನಾವು ಶ್ರಮವಹಿಸಿ ಕೆಲಸ ಮಾಡುತ್ತಿದ್ದೇವೆ. ಯಾರು ತಪ್ಪು ಕೆಲಸ ಮಾಡುತ್ತಿದ್ದಾರೆ ಯಾರು  ಅಸತ್ಯವನ್ನು ಎಲ್ಲೆಡೆ ನುಡಿಯುತ್ತಿದ್ದಾರೆ ಅವರಿಗೆ ದೇವರು ಶಿಕ್ಷಿಸಲಿ, ಒಂದು ವೇಳೆ ನಮ್ಮ ತಪ್ಪಿದ್ದಲ್ಲಿ ನಮ್ಮನ್ನೂ ಶಿಕ್ಷಿಸಲಿ ಎಂದು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿ ಪ್ರಸಾದ ಸ್ವೀಕರಿಸಿರುವುದಾಗಿ ಹಿಂದೂ ಬ್ರಿಗೇಡ್ ನ ಪದಾಧಿಕಾರಿಗಳು ತಿಳಿಸಿದ್ದಾರೆ.

ಕಳಸ : ಈಜಲು ತೆರಳಿದ್ದ ಯುವಕ ನೀರುಪಾಲು

ಕಳಸ :  ಸ್ನೇಹಿತರೊಂದಿಗೆ ಪ್ರವಾಸಕ್ಕೆ ಆಗಮಿಸಿದ್ದ ಯುವಕ ಕಳಸದ ಹೇಮಾವತಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ದುರ್ಘಟನೆ ಸಂಭವಿಸಿದೆ.

ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಸಂಸೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಳ್ಳೋಡಿ ಸೋಮಾವತಿ ನದಿಯ ದೊಡ್ಡಹೊಳೆ ಎಂಬಲ್ಲಿ ಈಜಲು ತೆರಳಿದ್ದ ಯುವಕ ನೀರುಪಾಲಾಗಿದ್ದಾನೆ. ಸ್ನೇಹಿತರೊಂದಿಗೆ ಶನಿವಾರ ಚಾರಣಕ್ಕೆಂದು ಬಂದಿದ್ದ ಆಂಧ್ರಪ್ರದೇಶದ ಸಿಕಂದರಾಬಾದ್ ನ ಅಮೀರ್ ಪೇಟೆಯ 25 ವರ್ಷ ಪ್ರಾಯದ ಯುವಕ ಪ್ರಣಯ್ ಮೃತ ದುರ್ದೈವಿ.

ಮುಳ್ಳೋಡಿ ಪ್ರದೇಶಕ್ಕೆ ಬಂದು ಸ್ನೇಹಿತರೊಂದಿಗೆ ಚಾರಣ ಮುಗಿಸಿ ಭಾನುವಾರ ತೆರಳುವ ಸಮಯದಲ್ಲಿ ಓರ್ವ ಗೆಳೆಯ ನಾಪತ್ತೆಯಾದಾಗ ಉಳಿದ ಸ್ನೇಹಿತರು ಎಲ್ಲೆಡೆ ಹುಡುಕಿದ್ದಾರೆ. ಈ ವೇಳೆಯಲ್ಲಿ ಆತನ ಮೊಬೈಲ್ ಫೋನ್ ನದಿಯ ಪಕ್ಕದಲ್ಲಿ ದೊರೆತ ಕಾರಣ ಆತ ನೀರಿಗೆ ಬಿದ್ದಿರುವುದು ತಿಳಿದಿದೆ. 

ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಧಾವಿಸಿದ ಕುದುರೆಮುಖ ಪೊಲೀಸರು ಆತನ ಶವವನ್ನು ಪತ್ತೆಮಾಡುವ ಕಾರ್ಯವನ್ನು ಆರಂಭಿಸಿ ಮೃತದೇಹವನ್ನು ಹೊರತೆಗೆದಿದ್ದಾರೆ. ಈ ಸಂಬಂಧ ಕುದುರೆಮುಖ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಸಂಬಂಧ ಹೆಚ್ಚಿನ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ.