ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಗೃಹ ಸಚಿವ ಆರಗಜ್ಞಾನೇಂದ್ರ ಅವರು ಕೂಡಲೇ ಅವರ ಸ್ಥಾನಕ್ಕೆ ರಾಜೀನಾಮೆ ನೀಡಿ ಅವರ ಇಲಾಖೆಯಲ್ಲಿ ನಡೆದ ದೊಡ್ಡ ಮಟ್ಟದ ಹಗರಣದಲ್ಲಿ ಭಾಗಿಯಾದ ಆರೋಪಿಗಳಿಗೆ ಶಿಕ್ಷೆ ಜಾರಿಯಾಗುವಂತೆ ನೋಡಿಕೊಳ್ಳಬೇಕು ಅವರು ರಾಜೀನಾಮೆ ನೀಡಿದರೆ ಮಾತ್ರ ಪ್ರಾಮಾಣಿಕ ತನಿಖೆ ನಡೆಯುತ್ತದೆ ಎಂದರು.

ಇದನ್ನೂ ಓದಿ : ಎಸ್.ಕೆ.ಬಾರ್ಡರ್ : ಕೆ ಕೆ ಬಿ ಬಸ್ ಹಾಗೂ ಲಾರಿ ನಡುವೆ ರಸ್ತೆ ಅಪಘಾತ

ಈ ಕುರಿತು ಮಾತನಾಡಿದ ಅವರು ಬಿಜೆಪಿ ಸರ್ಕಾರ ಕೋಮು ಸೌಹಾರ್ದ ಕಪಡುವುದನ್ನು ಬಿಟ್ಟು ಕೇವಲ ಪ್ರಚೋದನೆಗಳಿಗೆ ಜನರನ್ನು ಒಳಪಡಿಸಿ ಆಡಳಿತ ನಡೆಸುತ್ತಿದೆ. ಕಾಂಗ್ರೆಸ್ ಪಕ್ಷ ಮಾತ್ರ ದೇಶದ ಸರ್ವ ಜನಾಂಗದವರನ್ನು ಒಗ್ಗೂಡಿಸಿ ಆಡಳಿತ ನಡೆಸಲು ಶಕ್ತವಾಗಿದೆ ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಬಿಜೆಪಿ ಸರ್ಕಾರವು ವಿಫಲವಾಗಿದೆ ಎಂದರು.

ಅಭ್ಯರ್ಥಿಗಳು ಈ ಕೆಳಕಂಡ ಲಿಂಕ್ ಮೂಲಕ ರಿಜಿಸ್ಟರ್ ಆಗಬಹುದು : https://forms.gle/PvypXpJerzDzsrfE9

ಕೋಮುಗಳ ನಡುವೆ ವಿಷಬೀಜ ಬಿತ್ತಿ ಮತ ಪಡೆಯುವುದು ಇವರ ರಾಜಕೀಯ ಲಾಭವಾಗಿದೆ, ನ್ಯಾಯಯುತವಾಗಿ ಚುನಾವಣೆ ಎದುರಿಸಿದಲ್ಲಿ ಬಿಜೆಪಿ ಜನರಿಂದ ತಿರಸ್ಕೃತಗೊಳ್ಳಲಿದೆ ಎಂದು ವಾಗ್ದಾಳಿ ನಡೆಸಿದರು. ಅಧಿಕಾರದಲ್ಲಿದ್ದು ಎಲ್ಲಾವರ್ಗದ, ಎಲ್ಲಾ ಜಾತಿಯ, ಧರ್ಮದ ಜನರನ್ನು ಒಂದು ಉತ್ತಮ ಹಾದಿಯೆಡೆಗೆ ಕೊಂಡೊಯ್ಯುವುದನ್ನು ಬಿಟ್ಟು ಧರ್ಮಾಧಾರಿತ ರಾಜಕಾರಣ ಬಿಜೆಪಿ ನಡೆಸುತ್ತಿದೆ ಎಂದರು. 

ಪ್ರಸ್ತುತ ಬೆಳಕಿಗೆ ಬಂದಿರುವ ಪಿಎಸೈ ನೇಮಕಾತಿ ಹಗರಣದಲ್ಲಿ ಗೃಹ ಸಚಿವರ ಮೇಲೂ ಆರೋಪ ಕೇಳಿ ಬಂದಿದೆ, ಈ ನಿಟ್ಟಿನಲ್ಲಿ ಅವರು ರಾಜೀನಾಮೆ ನೀಡಿ ಕೂಲಂಕುಷ ತನಿಖೆ ನಡೆಸಲು ಅಧಿಕಾರಿಗಳಿಗೆ ಮುಕ್ತ ಅವಕಾಶ ನೀಡಬೇಕು, ಅವರು ಆ ಸ್ಥಾನದಿಂದ ಕೆಳಗಿಳಿದರೆ ತನಿಖೆ ನಡೆಸಲು ಯಾವುದೇ ಅಡೆತಡೆಗಳು ಉಂಟಾಗುವುದಿಲ್ಲ ಎಂದರು. 

ಈ ಸಂದರ್ಭದಲ್ಲಿ ಕೊಪ್ಪ ಬ್ಲಾಕ್  ಕಾಂಗ್ರೆಸ್ ನ ಅಧ್ಯಕ್ಷರಾದ ಸುಧೀರ್ ಕುಮಾರ್ ಮೂರೊಳ್ಳಿ, ಎಸ್. ವಿಶ್ವನಾಥ್ ಶೆಟ್ಟಿ, ನುಗ್ಗಿ ಮಂಜುನಾಥ್, ನಾರ್ವೆ ಅಶೋಕ್, ಪ್ರಶಾಂತ್, ಅನಿಲ್ ಹೊಸಕೊಪ್ಪ ಸೇರಿದಂತೆ ಅನೇಕರು ಇದ್ದರು.