ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಶೃಂಗೇರಿಯ ಮೂರು ಬೇರೆ ಬೇರೆ ಸ್ಥಳಗಳಲ್ಲಿ ಸರಣಿ ಕಳ್ಳತನ ಪ್ರಕರಣ ಸಂಭವಿಸಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಮೇಲ್ ನೆಮ್ಮಾರಿನ ರತ್ನಾಕರ ಎಂಬುವವರ ಮನೆಗೆ ನುಗ್ಗಿದ ಕಳ್ಳ ಮನೆಯ ಬೀಗವನ್ನು ತೆರೆದು ಗಾಡ್ರೇಜ್ ನಲ್ಲಿರಿಸಿದ್ದ ಹಣ ಹಾಗೂ ಚಿನ್ನದ ಕಿವಿಯೋಲೆಯನ್ನು ಎಗರಿಸಿದ್ದಾನೆ. ಮನೆಯ ನಿವಾಸಿಗಳು ಕಾರ್ಯಕ್ರಮಕ್ಕೆ ತೆರಳಿದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿರುವ ಕಳ್ಳರು ಹಣ ಹಾಗೂ ಬಂಗಾರವನ್ನು ಎಗರಿಸಿ ಎಸ್ಕೇಪ್ ಆಗಿದ್ದಾರೆ.
ಮೂಡಿಗೆರೆ : ಕೊಳೆತ ಸ್ಥಿತಿಯಲ್ಲಿ ಅಪರಿಚಿತ ವ್ಯಕ್ತಿಯ ಶವ ಪತ್ತೆ
ಕಾರ್ಯಕ್ರಮಕ್ಕೆ ತೆರಳಿದ್ದ ಮನೆಯವರು ಮರಳಿ ಮನೆಗೆ ಬಂದು ನೋಡಿದಾಗ ಬಾಗಿಲ ಬೀಗ ತೆರೆದಿರುವುದು ಕಂಡುಬರುತ್ತದೆ, ನಂತರದಲ್ಲಿ ಒಳಪ್ರವೇಶಿಸಿ ನೋಡಿದಾಗ ಮನೆಯ ಗಾಡ್ರೇಜ್ ನ್ನು ತೆರೆದು ಸಂಪೂರ್ಣವಾಗಿ ಮನೆಯನ್ನು ಹುಡುಕಿ ಮನೆಯಲ್ಲಿರಿಸಿದ್ದ 60 ಸಾವಿರ ನಗದು ಹಾಗೂ ಬಂಗಾರದ ಕಿವಿಯೋಲೆಯನ್ನು ಕಳ್ಳರು ಕದ್ದಿರುವುದು ಮನೆಯವರ ಗಮನಕ್ಕೆ ಬಂದಿರುತ್ತದೆ. ಈ ಕುರಿತಾಗಿ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಸಂಬಂಧ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಶೃಂಗೇರಿ ಪಟ್ಟಣದಲ್ಲಿರುವ ಕನ್ಯಾಕುಮಾರಿ ಲಾಡ್ಜ್ ನಲ್ಲಿ ಕಳ್ಳತನ ನಡೆಸಿ ಎಸ್ಕೇಪ್ ಆಗಲು ಯತ್ನಿಸಿದ ಓರ್ವ ಆರೋಪಿಯನ್ನು ಸೆರೆ ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಶೃಂಗೇರಿ ಪಟ್ಟಣದಲ್ಲಿರುವ ಕನ್ಯಾಕುಮಾರಿ ಲಾಡ್ಜ್ ನಲ್ಲಿದ್ದವರ ಬ್ಯಾಗ್ ಒಂದನ್ನು ಕಳ್ಳತನ ಮಾಡಿ ಮಂಗಳೂರು ಬಸ್ಸಿನಲ್ಲಿ ಬೇರೆಡೆಗೆ ಪ್ರಯಾಣ ಮಾಡಲು ಯತ್ನಿಸುತ್ತಿದ್ದ ಓರ್ವ ವ್ಯಕ್ತಿಯನ್ನು ಬಂಧಿಸುವಲ್ಲಿ ಶೃಂಗೇರಿ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಬಂಧಿತನಿಂದ ವ್ಯಾನಿಟಿ ಬ್ಯಾಗ್ ನ್ನು ವಶಕ್ಕೆ ಪಡೆದ ಪೊಲೀಸರು ಸಂಬಂಧ ಪಟ್ಟವರಿಗೆ ಮರಳಿ ನೀಡಿದ್ದಾರೆ. ಆರೋಪಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ.
ಶೃಂಗೇರಿಯ ಮೆಣಸೆ ಕಿಸಾನ್ ರೈಸ್ ಮಿಲ್ ಪಕ್ಕದಲ್ಲಿರಿಸಿದ್ದ 20 ಕ್ವಿಂಟಾಲ್ ಎಲೆಕ್ಟ್ರಿಕ್ ವೈರ್, ಟಿ.ಸಿ ಉಪಕರಣಗಳು ಸೇರಿದಂತೆ ಹತ್ತು ಲಕ್ಷ ಮೌಲ್ಯದ ವಸ್ತುಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಈ ಕುರಿತು ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಸ್ಥಳ ಮಹಜರು ನಡೆಸಿ ಈ ಸಂಬಂಧ ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದಾರೆ.
ಶೃಂಗೇರಿಗೆ ಆಗಮಿಸುತ್ತಿರುವ ಪ್ರವಾಸಿಗರ ಸಂಖ್ಯೆಯೂ ಹೆಚ್ಚಿದ್ದು ತಮ್ಮ ವಸ್ತುಗಳನ್ನು ಹಾಗೂ ಒಡವೆಯನ್ನು ಸುರಕ್ಷಿತವಾಗಿಟ್ಟುಕೊಳ್ಳುವಂತೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದು ಶೃಂಗೇರಿಯ ಸಾರ್ವಜನಿಕರು ಕೂಡ ತಮ್ಮ ವಸ್ತುಗಳ ಮೇಲೆ ಹೆಚ್ಚಿನ ಗಮನ ನೀಡಿ ಸುರಕ್ಷಿತವಾಗಿಟ್ಟುಕೊಳ್ಳುವಂತೆ ಹಾಗೂ ಹೆಚ್ಚಿನ ಗಮನವಹಿಸುವಂತೆ ತಿಳಿಸಿದ್ದಾರೆ.





0 Comments