ಕೊಡಗು : (ನ್ಯೂಸ್ ಮಲ್ನಾಡ್ ವರದಿ) ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿದ್ಯುತ್ ತಗುಲಿದ ಪರಿಣಾಮ ವ್ಯಕ್ತಿಯೋರ್ವ ದುರ್ಮರಣವನ್ನಪ್ಪಿರುವ ಘಟನೆ ನಡೆದಿದೆ. 

ಕೊಡಗಿನ ಪಣಿಯರವರ ತೋಲ ಎಂಬ 38 ವರ್ಷ ಪ್ರಾಯದ ಕಾರ್ಮಿಕ ಕಾಫಿ ತೋಟದಲ್ಲಿ ಮರ ಕಡಿಯುತ್ತಿದ್ದ ವೇಳೆ ವಿದ್ಯುತ್ ತಂತಿ ಮರಕ್ಕೆ ತಗುಲಿದ ಪರಿಣಾಮ ಮರ ಕಡಿಯುತ್ತಿದ್ದ ಕಾರ್ಮಿಕ ಪಣಿಯರವರ ತೋಲ ಕೊನೆಯುಸಿರೆಳೆದಿದ್ದಾರೆ. 

ವಿರಾಜಪೇಟೆಯ ಅರ್ಜಿ ಗ್ರಾಮದ ತೋಟದಲ್ಲಿ ಮರ ಕಡಿಯುವಾಗ ಈ ಘಟನೆ ಸಂಭವಿಸಿದ್ದು, ವಿದ್ಯುತ್ ಶಾಕ್ ಗೆ ಒಳಪಟ್ಟ ಕಾರ್ಮಿಕ ಸಾವನ್ನಪ್ಪಿದ್ದಾನೆ. ಮಲೆನಾಡು ಭಾಗಗಳು ಸೇರಿದಂತೆ ಅನೇಕ ಕಡೆಗಳಲ್ಲಿ ತೋಟದ ಕೆಲಸ ಮಾಡುವಾಗ ಈ ರೀತಿಯ ಘಟನೆಗಳು ಸಂಭವಿಸುತ್ತಿದ್ದು ಏಣಿ ವಿದ್ಯುತ್ ವೈರ್ ಗಳಿಗೆ ತಗುಲಿ ಅನೇಕರು ಸಾವನ್ನಪ್ಪಿರುವ ನಿದರ್ಶನಗಳಿವೆ.

ಈ ನಿಟ್ಟಿನಲ್ಲಿ ತೋಟ ಹಾಗೂ  ಹೊರಾಂಗಣದಲ್ಲಿ ಕಾರ್ಯ ನಿರ್ವಹಿಸುವವರು ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಕೆಲಸ ಮಾಡುವಂತೆ ತಿಳಿಸಲಾಗಿದೆ.

ಅಭ್ಯರ್ಥಿಗಳು ಈ ಕೆಳಕಂಡ ಲಿಂಕ್ ಮೂಲಕ ರಿಜಿಸ್ಟರ್ ಆಗಬಹುದು :  https://forms.gle/PvypXpJerzDzsrfE9

ಹಾಸನ : ಮನೆ ಮುಂದೆ ನಿಲ್ಲಿಸಿದ್ದ ಸ್ಕಾರ್ಪಿಯೋ ಕಾರ್ ಕಳ್ಳತನ

ಮನೆಯ ಹೊರಭಾಗದಲ್ಲಿ ನಿಲ್ಲಿಸಿದ್ದ ಸ್ಕಾರ್ಪಿಯೋ ಕಾರನ್ನು ಕಳ್ಳರು ಕದ್ದೊಯ್ದಿರುವ ಘಟನೆ ಬೆಳಕಿಗೆ ಬಂದಿದೆ. 

ಹಾಸನದ ಕೆ.ಆರ್ ಪುರಂ ಬಡಾವಣೆಯಲ್ಲಿ ಈ ಘಟನೆ ನಡೆದಿದ್ದು ಕೆ.ಆರ್ ಪುರಂ ನ ರಾಮಚಂದ್ರೇಗೌಡ ಎಂಬುವವರು ಎಂದಿನಂತೆಯೇ ಮನೆಯ ಮುಂದೆ ತಮ್ಮ ಕಾರನ್ನು ನಿಲ್ಲಿಸಿ ಮನೆಗೆ ತೆರಳಿದ್ದು ಮಾರನೆಯ ದಿನ ನೋಡುವಾಗ ಕಾರು ನಾಪತ್ತೆಯಾಗಿದೆ. ಅವರು ಎಲ್ಲೆಡೆ ಹುಡುಕಿ ಎಲ್ಲೂ ಕಾರು ಪತ್ತೆಯಾಗದೇ ಇದ್ದಾಗ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.

ಮೂರು ಲಕ್ಷ ರೂಪಾಯಿ ಬೆಲೆ ಬಾಳುವ ಸ್ಕಾರ್ಪಿಯೋ ಕಾರನ್ನು ಕದ್ದಿರುವ ಕಳ್ಳರನ್ನು ಪತ್ತೆ ಹಚ್ಚಬೇಕೆಂದು ಹಾಗೂ ಕಾರನ್ನು ಕದ್ದಿರುವ ಕಳ್ಳರಿಗೆ ತಕ್ಕ ಶಿಕ್ಷೆ ನೀಡಬೇಕೆಂದು ರಾಮಚಂದ್ರೇಗೌಡ ಅವರು ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಹಾಸನದ ಬಡಾವಣೆ ಪೊಲೀಸ್ ಠಾಣೆಯ ಪೊಲೀಸರು ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿದ್ದು  ಆರೋಪಿಗಳನ್ನು ಸೆರೆ ಹಿಡಿಯುವ ಸಲುವಾಗಿ ಬಲೆ ಬೀಸಿದ್ದಾರೆ.