ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ವೃದ್ದರೋರ್ವರು ಮನೆಯಿಂದ ಕಾಣೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಇದನ್ನೂ ಓದಿ : ಚಾಕುವಿನಿಂದ ಇರಿದು ಯುವಕನ ಬರ್ಬರ ಹತ್ಯೆ
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಹೊರವಲಯದ ಆನೆಗುಂದ ನಿವಾಸಿಯಾದ ಶ್ರೀ ರಂಗೇಗೌಡ ಎಂಬುವವರು ನಿನ್ನೆ ಸಂಜೆಯ ವೇಳೆಗೆ ಮನೆಯಿಂದ ಹೊರಬಂದವರು ಮರಳಿ ಮನೆಗೆ ಬಾರದೇ ಕಾಣೆಯಾಗಿದ್ದಾರೆ. ಇವರಿಗೆ ಮರೆತುಹೋಗುವ ಕಾಯಿಲೆಯಿದ್ದು ಯಾರಾದರೂ ಇವರನ್ನು ಕಂಡಲ್ಲಿ ಕುಟುಂಬಸ್ಥರಿಗೆ ತಿಳಿಸಬೇಕೆಂದು ಸಂಬಂಧಿಕರು ಕೋರಿದ್ದಾರೆ.
ರಂಗೇಗೌಡ ಅವರಿಗೆ 80 ವರ್ಷ ಪ್ರಾಯವಾಗಿದ್ದು, ಪಂಚೆ ಹಾಗೂ ಪೂರ್ಣತೋಳಿನ ತಿಳಿನೀಲಿ ಬಣ್ಣದ ಶರ್ಟನ್ನು ಧರಿಸಿರುತ್ತಾರೆ, ಬಿಳಿ ಬಣ್ಣದವರಾಗಿದ್ದು ತಲೆಗೂದಲು ಇರುವುದಿಲ್ಲ ಹಾಗೂ ಅವರ ಶರ್ಟಿನ ಕಾಲರ್ ಮೇಲೆ ಮಾರ್ಕರ್ ನಿಂದ ಮೊಬೈಲ್ ನಂಬರ್ ಬರೆಯಲಾಗಿದೆ ಎಂಬ ಮಾಹಿತಿಯನ್ನು ಕುಟುಂಬದ ಸದಸ್ಯರು ತಿಳಿಸಿದ್ದಾರೆ.
ಈ ವ್ಯಕ್ತಿಯನ್ನು ಯಾರಾದರೂ ಕಂಡಲ್ಲಿ ಅವರ ಸಂಬಂಧಿಕರ ಈ ಮೊಬೈಲ್ ನಂಬರ್ ಗಳಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಕುಟುಂಬಸ್ಥರು ಕೋರಿದ್ದಾರೆ. ಮೊಬೈಲ್ ಸಂಖ್ಯೆ : 8073825319 ಮತ್ತು 9481394940




0 Comments