ಇದನ್ನೂ ಓದಿ : ಉದ್ಯಮಿ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್ ಶೆಟ್ಟಿ ಕಾರ್ ಅಪಘಾತ
ಚಿಕ್ಕಮಗಳೂರಿನ ಖಾಸಗೀ ಹೋಟೆಲೊಂದರಲ್ಲಿ ನಡೆಯುತ್ತಿದ್ದ ಕ್ರೈಸ್ತ ಧರ್ಮದ ಬೋಧನೆಯ ಸಂದರ್ಭದಲ್ಲಿ ದಾಳಿ ನಡೆಸಿರುವ ಬಜರಂಗದಳದ ಕಾರ್ಯಕರ್ತರು, ಅಮಾಯಕರನ್ನು ಗುರಿಯಾಗಿಸಿಕೊಂಡು ಇಲ್ಲಿಗೆ ಕರೆದುಕೊಂಡು ಬಂದು ಅಕ್ರಮವಾಗಿ ಮತಾಂತರ ನಡೆಸಲಾಗುತ್ತಿದೆ ಎಂಬ ಆರೋಪವನ್ನು ಮಾಡಿದ್ದಾರೆ.
ದಾಳಿ ನಡೆಸಿರುವ ಕಾರ್ಯಕರ್ತರು ಧರ್ಮದ ಕುರಿತಾಗಿ ಬೋಧನೆ ನಡೆಸುತ್ತಿದ್ದವರನ್ನು ಈ ಸ್ಥಳದಲ್ಲಿ ಯಾವರೀತಿಯಾಗಿ ಬೋಧನೆ ನಡೆಸುತ್ತಿದ್ದೀರಿ ಇದಕ್ಕೆ ಅನುಮತಿ ನೀಡಿದವರಾರು ಈ ಕುರಿತು ಮಾಹಿತಿ ನೀಡುವಂತೆ ಪ್ರಶ್ನಿಸಿದ್ದಾರೆ.
ಬಜರಂಗದಳದ ಕಾರ್ಯಕರ್ತರು ಹಾಗೂ ಕ್ರೈಸ್ತ ಧರ್ಮೀಯರ ನಡುವೆ ತೀವ್ರ ವಾಗ್ವಾದ ಉಂಟಾಗಿತ್ತು, ನಂತರದಲ್ಲಿ ಸ್ಥಳಕ್ಕಾಗಮಿಸಿದ ಚಿಕ್ಕಮಗಳೂರು ನಗರ ಠಾಣೆಯ ಪೊಲೀಸರು ಸ್ಥಳಕ್ಕಾಗಮಿಸಿ ಶಾಂತಿ ಕಾಪಾಡುವತ್ತ ಕಾರ್ಯ ನಿರ್ವಹಿಸಿದರು.
ಈ ಖಾಸಗೀ ಹೋಟೆಲಿಗೆ ಅಮಾಯಕರನ್ನು ಕರೆತಂದು ಅಕ್ರಮವಾಗಿ ಮತಾಂತರ ಮಾಡಲಾಗುತ್ತಿದೆ ಎಂದು ಭಜರಂಗದಳವು ತೀವ್ರ ಆರೋಪವನ್ನು ಮಾಡಿದೆ.




0 Comments