ಸಾಗರ : (ನ್ಯೂಸ್ ಮಲ್ನಾಡ್ ವರದಿ) ಅನಾರೋಗ್ಯದ ನಿಮಿತ್ತ ಇಲ್ಲಿನ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದ ಸುಮಾರು 14 ಮಕ್ಕಳು ಭಾನುವಾರ ಸಂಜೆ ದಿಢೀರನೆ ಅಸ್ವಸ್ಥತರಾಗಿದ್ದು, ಇಂಜೆಕ್ಷನ್ ನ ಅಡ್ಡ ಪರಿಣಾಮವು ಇದಕ್ಕೆ ಕಾರಣ ಎನ್ನಲಾಗುತ್ತಿದೆ.
ಸಾಗರದ ಆಸ್ಪತ್ರೆಗೆ ದಾಖಲಾಗಿದ್ದ ಮಕ್ಕಳಿಗೆ ರೋಗ ನಿರೋಧಕ ಇಂಜೆಕ್ಷನ್ ನೀಡಿದ ಕೆಲ ಸಮಯದಲ್ಲಿ ಅತಿಯಾದ ಚಳಿ ಹಾಗೂ ಉಸಿರಾಟದ ತೊಂದರೆ ಕಾಣಿಸಿಕೊಂಡಿದ್ದು ಪೋಷಕರ ಆತಂಕಗೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಆಸ್ಪತ್ರೆಯ ಆಡಳಿತ ಮಂಡಳಿ ಯಾವ ಕಾರಣಕ್ಕಾಗಿ ಮಕ್ಕಳು ಅಸ್ವಸ್ಥರಾಗಿದ್ದಾರೆ ಎಂಬುದನ್ನು ಪರಿಶೀಲಿಸಲಾಗುತ್ತಿದ್ದು. ಅಸ್ವಸ್ಥರಾಗಿರುವ ಮಕ್ಕಳ ಪೈಕಿ ಹೆಚ್ಚಿನ ಚಿಕಿತ್ಸೆಗಾಗಿ ನಾಲ್ವರನ್ನು ಶಿವಮೊಗ್ಗದ ಆಸ್ಪತ್ರೆಗೆ ಕಳಿಸಲಾಗಿದ್ದು.
ಸಧ್ಯ ಯಾವುದೇ ಮಕ್ಕಳಿಗೂ ಪ್ರಾಣಾಪಾಯವಿಲ್ಲ ಎಂದು ಖಚಿತಪಡಿಸಿದ್ದಾರೆ.
ಕಳಸ : ನಿವೇಶನ ರಹಿತರಿಗೆ ನಿವೇಶನ ಹಾಗೂ ಹಕ್ಕುಪತ್ರಗಳನ್ನು ನೀಡುವಂತೆ ಆಗ್ರಹಿಸಿ ಅನಿರ್ಧಿಷ್ಟಾವಧಿ ಅಮರಣಾಂತ ಸತ್ಯಾಗ್ರಹ
ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಕುಂಬಳಡಿಕೆಯಲ್ಲಿ ಟೆಂಟ್ ನಲ್ಲಿ ವಾಸಿಸುತ್ತಿರುವ ವಸತಿರಹಿತರು ಹಕ್ಕು ಪತ್ರಗಳು ದೊರೆಯುವವರೆಗೂ ಹೋರಾಟ ನಡೆಸುವ ಎಚ್ಚರಿಕೆಯನ್ನು ಸರ್ಕಾರಕ್ಕೆ ನೀಡಿದ್ದಾರೆ.
ಇಂದು ಕಳಸದ ತಾಲೂಕು ಕಛೇರಿ ಎದುರು ಪ್ರತಿಭಟಿಸಿದ ನಿವೇಶನರಹಿತರು ಮಾವಿನಕೆರೆ ಗ್ರಾಮದ 153 ರಲ್ಲಿ ಅತಿವೃಷ್ಟಿ ಸಂತ್ರಸ್ತರಿಗೆ ನಿವೇಶನ ಒದಗಿಸುವ ಸಲುವಾಗಿ ಜಾಗವನ್ನು ಮಂಜೂರು ಮಾಡಲಾಗಿತ್ತು. ಈ ಸರ್ವೇ ನಂಬರ್ ನ ಉಳಿಕೆ ಭೂಮಿಯಲ್ಲಿ ಸುತ್ತಮುತ್ತಲಿನ ನಿವೇಶನರಹಿತರು ಟೆಂಟ್ ನಿರ್ಮಾಣ ಮಾಡಿಕೊಂಡು ವರ್ಷಗಳೇ ಉರುಳಿದ್ದರೂ ಶಾಸಕರಿಂದ ಸ್ಥಳೀಯ ಜನಪ್ರತಿನಿಧಿಗಳವರೆಗೂ ಭರವಸೆಗಳು ಲಭಿಸಿದೆ ಆದರೆ ಈಡೇರಿಲ್ಲ ಎಂದರು.
ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸುತ್ತಾರೆ, ಜಾಗಕ್ಕೆ ಹಕ್ಕುಪತ್ರ ನೀಡುವ ಭರವಸೆಯನ್ನು ನೀಡುತ್ತಾರೆ ಆದರೆ ಉತ್ತಮ ರೀತಿಯ ಬೆಳವಣಿಗೆಗಳು ಕಾಣುತ್ತಿಲ್ಲ, ಮಕ್ಕಳು, ಮಹಿಳೆಯರು ಸೇರಿದಂತೆ ವೃದ್ದರು ಇಲ್ಲಿ ವಾಸಿಸುತ್ತಾರೆ ಆದರೆ ಕುಡಿಯುವ ನೀರು, ವಿದ್ಯುತ್ ಸಂಪರ್ಕವಿಲ್ಲ ಇದರಿಂದಾಗಿ ತೀವ್ರತರಹವಾದ ಸಮಸ್ಯೆಗಳು ಎದುರಾಗಿದೆ. ಸರ್ಕಾರ ನಮ್ಮ ಸಮಸ್ಯೆಯನ್ನು ಕೇಳುತ್ತಿಲ್ಲ, ಚುನಾವಣೆಯ ಸಂದರ್ಭದಲ್ಲಿ ಮಾತ್ರ ಮತಯಾಚಿಸಲು ಬರುತ್ತಾರೆ ನಮಗೆ ನ್ಯಾಯ ದೊರಕಬೇಕು - ಕುಸುಮಾ, ನಿವಾಸಿ
ಕಳೆದ 3 ವರ್ಷದಿಂದ ಕುಂಬಳಡಿಕೆಯ ಸರ್ವೇ ನಂಬರ್ 153 ರಲ್ಲಿ ವಸತಿರಹಿತರು ಟೆಂಟ್ ಗಳನ್ನು ನಿರ್ಮಾಣ ಮಾಡಿಕೊಂಡು ವಾಸಮಾಡುತ್ತಿದ್ದು ಹಕ್ಕುಪತ್ರ ನೀಡುವ ಹಾಗೂ ನಿವೇಶನ ರಹಿತರಿಗೆ ನಿವೇಶನ ಒದಗಿಸುವ ಆಶ್ವಾಸನೆಗಳು ಹಾಗೆಯೇ ಉಳಿದಿದೆ ಹೊರತು ಯಾವುದೇ ಪ್ರಕ್ರಿಯೆಗಳು ಮುಂದುವರೆದಿಲ್ಲ ಎಂದು ನಿವೇಶನರಹಿತರು ತಮ್ಮ ಅಳಲನ್ನು ವ್ಯಕ್ತಪಡಿಸಿದರು ಹಕ್ಕುಪತ್ರ ಹಾಗೂ ನಿವೇಶನರಹಿತರಿಗೆ ನಿವೇಶನ ದೊರೆಯುವವರೆಗೂ ನಿರಂತರ ಹೋರಾಟ ನಡೆಸುವ ಎಚ್ಚರಿಕೆಯನ್ನು ಈ ಸಂದರ್ಭದಲ್ಲಿ ನೀಡಿದರು.






0 Comments