ಕೊಡಗು : (ನ್ಯೂಸ್ ಮಲ್ನಾಡ್ ವರದಿ) ನಾಡಿಗೆ ಬಂದಿದ್ದ ಕಾಡಾನೆಯೊಂದನ್ನು ಮರಳಿ ಕಡಿಗಟ್ಟುವ ಕಾರ್ಯಾಚರಣೆ ನಡೆಯುವ ವೇಳೆಯಲ್ಲಿ ಅನೆಯೊಂದು ದಾರುಣವಾಗಿ ಮೃತಪಟ್ಟ ದುರ್ಘಟನೆ ಸಂಭವಿಸಿದೆ. 

ಇದನ್ನೂ ಓದಿ : ಮನೆಯಿಂದ ನಾಪತ್ತೆಯಾಗಿದ್ದ ವ್ಯಕ್ತಿ ಸ್ಮಶಾನದಲ್ಲಿ ಶವವಾಗಿ ಪತ್ತೆ

ಮಡಿಕೇರಿ ತಾಲೂಕಿನ ಮರಂದೋಡ ಗ್ರಾಮದಲ್ಲಿ ಈ ದುರ್ಘಟನೆ ಸಂಭವಿಸಿದ್ದು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿವರ್ಗ ಸಾರ್ವಜನಿಕರ ಸಹಕಾರದೊಂದಿಗೆ ಕಾಡಾನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆಯನ್ನು  ಆರಂಭಿಸಿ ಕಾರ್ಯಾಚರಣೆ ನಡೆಸುತ್ತಿದ್ದರು. 

ಮಧ್ಯಾಹ್ನದ ವೇಳೆಯಲ್ಲಿ ಗೋಚರಿಸಿದ ಒಂಟಿ ಸಲಗವನ್ನು ಸೆರೆ ಹಿಡಿಯುವ ಸಲುವಾಗಿ ಬಂದೂಕಿನಿಂದ ಅರವಳಿಕೆ ಮದ್ದನ್ನು ಹಾರಿಸಲಾಯಿತು. ಈ ಸಮಯದಲ್ಲಿ ಕುಸಿದು ಬಿದ್ದ ಆನೆ ಮೃತಪಟ್ಟಿದೆ. 

ಈ ದುರ್ಘಟನೆಗೆ ಅರವಳಿಕೆ ಮದ್ದಿನ ಓವರ್ ಡೋಸ್ ಅಥವಾ ಹೃದಯಾಘಾತ ಸಂಭವಿಸಿ ಸಾವನ್ನಪ್ಪಿರಬಹುದೆಂದು  ಅಂದಾಜಿಸಲಾಗಿದೆ. ಘಟನಾ ಸಂಬಂಧ ಅಧಿಕಾರಿಗಳು ಆನೆಯ ಮರಣೋತ್ತರ ಪರೀಕ್ಷೆ ನಡೆಸಿ ಆನೆಯ ಸಾವಿಗೆ ನಿಖರ ಕಾರಣಗಳೇನು ಎಂಬ ಕುರಿತು  ಮಾಹಿತಿಯನ್ನು ನೀಡುವುದಾಗಿ ತಿಳಿಸಿದ್ದಾರೆ. 

ಈ ಭಾಗದ ಅನೇಕ ಕಾರ್ಮಿಕರನ್ನು ಆನೆ ದಾಳಿ ನಡೆಸಿ ಬಲಿ ಪಡೆದುಕೊಂಡಿದೆ. ಅನೇಕ ರೈತರ ತೋಟಗಳಿಗೆ ನುಗ್ಗಿ ಅವರು ಬೆಳೆದ ಬೆಳೆಯನ್ನು ನಾಶಪಡಿಸಿದೆ. ಈ ನಿಟ್ಟಿನಲ್ಲಿ ಆನೆಯನ್ನು ಕಾಡಿಗಟ್ಟುವ ಕಾರ್ಯಾಚರಣೆಯು ನಡೆಯುತ್ತಿತ್ತು.