ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಎರಡು ಕಾರುಗಳ ನಡುವೆ ಮುಖಾಮುಖಿ ಭೀಕರ ರಸ್ತೆ ಅಪಘಾತ ಸಂಭವಿಸಿದ ಪರಿಣಾಮ ಗರ್ಭಿಣಿ ಮಹಿಳೆ ಹಾಗೂ ಆಕೆಯ ಗಂಡ ಸಾವನ್ನಪ್ಪಿರುವ ದುರ್ಘಟನೆ ವರದಿಯಾಗಿದೆ.
ಇದನ್ನೂ ಓದಿ : ಭೂಕುಸಿತ ಸಂಭವಿಸುವ ಭೀತಿ ಹಿನ್ನೆಲೆ ; ಮಳೆಗಾಲದಲ್ಲಿ ಮರಗಳ ಸಾಗಾಣಿಕೆಗೆ ತಡೆಯೊಡ್ಡುವಂತೆ ಸಾರ್ವಜನಿಕರ ಆಗ್ರಹ
ಶಿವಮೊಗ್ಗ ತಾಲೂಕಿನ ಬೇಡರ ಹೊಸಹಳ್ಳಿಯ ಕೆರೆ ಏರಿ ಮೇಲೆ ಈ ಭೀಕರ ಅಪಘಾತ ಸಂಭವಿಸಿದ್ದು ಒಮಿನಿ ಕಾರ್ ಹಾಗೂ ಐ ಟ್ವೆಂಟಿ ವಾಹನಗಳ ನಡುವೆ ಈ ಮುಖಾಮುಖಿ ಅಪಘಾತ ಸಂಭವಿಸಿದ್ದು, ಚನ್ನಗಿರಿ ಮೂಲದ ಆಂಬುಲೆನ್ಸ್ ವಾಹನದ ಚಾಲಕ ಧನಂಜಯ್ ಹಾಗೂ ಅವರ ಪತ್ನಿ ಎಂಟು ತಿಂಗಳ ಗರ್ಭಿಣಿಯಾಗಿದ್ದ ರೋಜಾ ಈ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ಐ ಟ್ವೆಂಟಿ ಕಾರಿನಲ್ಲಿ ಇಬ್ಬರು ಪ್ರಯಾಣ ನಡೆಸುತ್ತಿದ್ದು ಓಮಿನಿ ಕಾರಿನಲ್ಲಿ ಪ್ರಯಾಣ ನಡೆಸುತ್ತಿದ್ದವರು ಗಂಭೀರಗಾಯಗಳಿಗೆ ತುತ್ತಾಗಿದ್ದಾರೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ತಪಾಸಣೆಗಾಗಿ ಗರ್ಭಿಣಿ ರೋಜಾ ಹಾಗೂ ಚೇತನ ಅವರನ್ನು ಕರೆದುಕೊಂಡು ಹೋಗಿ ವಾಪಸ್ ಬರುವಾಗ ಈ ಅಪಘಾತ ಸಂಭವಿಸಿದೆ ಎನ್ನಲಾಗಿದೆ.
ಅಪಘಾತದ ಕುರಿತು ಶಿವಮೊಗ್ಗದ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತುಂಗಾ ನದಿಗೆ ಈಜಲು ತೆರಳಿದ್ದ ಯುವಕನ ದುರ್ಮರಣ :
ಶಿವಮೊಗ್ಗ : ನದಿಗೆ ಈಜಲೆಂದು ತೆರಳಿದ್ದ ಬಾಲಕನೋರ್ವ ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಬೆಳಕಿಗೆ ಬಂದಿದೆ.
ಶಿವಮೊಗ್ಗದ ಸೂಳೆಬೈಲ್ ನಿವಾಸಿ ರಿಹಾನ್ ಇತ್ತೀಚೆಗಷ್ಟೇ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಒಂದು ವಿಷಯದಲ್ಲಿ ಅನುತ್ತೀರ್ಣನಾಗಿದ್ದ. ಆತನಿಗೆ ಇಂದು ಪರೀಕ್ಷೆ ಇತ್ತು ಆದರೆ ವಿಧಿಯಾಟವೇ ಬೇರೆ ರೀತಿಯಲ್ಲಿ ನಡೆದಿದೆ.
ತನ್ನ ಸ್ನೇಹಿತರೊಂದಿಗೆ ಈಜಲು ಶಿವಮೊಗ್ಗ ನಗರದ ಹೊರವಲಯವಾದ ಪುಟ್ಟಪ್ಪನ ಕ್ಯಾಂಪ್ ಬಳಿ ತುಂಗಾನದಿಗೆ ಈಜಲು ತೆರಳಿದ್ದ ಅಬ್ದುಲ್ ರಿಹಾನ್ ಈಜುವ ಸಮಯದಲ್ಲಿ ನದಿಯ ಆಳವನ್ನು ಅರಿಯದೆ ಮುಳುಗಿದ್ದಾನೆ. ಈ ಸಮಯದಲ್ಲಿ ಆತನು ಮೇಲೆ ಬರಲಾಗುತ್ತಿಲ್ಲವೆಂದು ಸನ್ನೆ ಮಾಡುತ್ತಿದ್ದರೂ ಕೂಡ ಉಳಿದ ಗೆಳೆಯರು ಆತ ತಮಾಷೆ ಮಾಡುತ್ತಿದ್ದಾನೆಂದೆನಿಸಿ ಸುಮ್ಮನಾಗಿದ್ದಾರೆ.
ಕೆಲ ಸಮಯ ಕಳೆದರೂ ಕೂಡ ಆತ ಮೇಲೆ ಬಾರದೇ ಇರುವುದನ್ನು ಕಂಡ ಗೆಳೆಯರು ಆತಂಕದಿಂದ ಬಂದು ರಿಹಾನ್ ನ ಮನೆಯವರಿಗೆ ತಿಳಿಸಿದ್ದಾರೆ. ಕೂಡಲೇ ಕುಟುಂಬವರ್ಗದವರು ಪೊಲೀಸರಿಗೆ ಮಾಹಿತಿ ನೀಡಿ ಅಗ್ನಿಶಾಮಕದಳಕ್ಕೆ ತಿಳಿಸಿ ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ನದಿಯಲ್ಲಿ ಎಷ್ಟೇ ಹುಡುಕಿದರೂ ಕೂಡ ಆತನ ಮೃತದೇಹ ಪತ್ತೆಯಾಗಿಲ್ಲ.
ಘಟನಾ ಸಂಬಂಧ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಈ ಸಂಬಂಧ ಮಾಹಿತಿ ಕಲೆಹಾಕುತ್ತಿದ್ದಾರೆ. ಯುವಕನನ್ನು ಕಳೆದುಕೊಂಡ ಪೋಷಕರು ಅತೀವ ಬೇಸರವನ್ನು ವ್ಯಕ್ತಪಡಿಸಿದ್ದಾರೆ.






0 Comments