ಚಿಕ್ಕಮಗಳೂರು ಜಿಲ್ಲೆಯ ಧಾರ್ಮಿಕ ಕ್ಷೇತ್ರವಾದ ಶೃಂಗೇರಿ ಶಾರದಾ ಪೀಠದ ಭೋಜನ ಶಾಲೆಯಲ್ಲಿರುವ ಊಟದ ಸ್ಟೀಲ್ ಪ್ಲೇಟ್ ಗಳನ್ನು ಜೋಡಿಸಿಟ್ಟಿರುವ ಕುರಿತು ಆಶ್ಚರ್ಯ ವ್ಯಕ್ತಪಡಿಸಿ ಟ್ವಿಟರ್ ಖಾತೆಯ ಮೂಲಕ ಮಾಡಿರುವ ಟ್ವೀಟ್ ಒಂದನ್ನು ಆನಂದ್ ಮಹೀಂದ್ರಾ ಅವರು ಶೇರ್ ಮಾಡಿ ಈ ಜೋಡಣೆಯು ಕಲೆ, ನಿಖರತೆ ಹಾಗೂ ಕ್ರಿಯಾತ್ಮಕತೆಯ ಮಿಶ್ರಣವಾಗಿದೆ. ಇದನ್ನು ನೋಡಿ ಬೆರಗಾದೆನು ಎಂದು ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ.
ಆನಂದ್ ಮಹೀಂದ್ರಾ ಮುಂಬೈ ಮೂಲದ ಬಿಲಿಯನೇರ್ ಉದ್ಯಮಿ. ಮಹೀಂದ್ರಾ ಗ್ರೂಪ್ ನ ಅಧ್ಯಕ್ಷರು. ಸಮಾಜದ ಅನೇಕ ವಲಯಗಳ ಜನರ ಕಷ್ಟಗಳಿಗೆ ಆನಂದ್ ಮಹೀಂದ್ರಾ ನೆರವಾಗುವ ಮೂಲಕ ಅವರ ಕಷ್ಟಕ್ಕೆ ಸ್ಪಂದನೆ ನೀಡಿದ್ದಾರೆ. ಇದೀಗ ಅವರು ಮಾಡಿರುವ ಒಂದು ಟ್ವೀಟ್ ಅನೇಕ ಕಡೆಗಳಲ್ಲಿ ವೈರಲ್ ಆಗುತ್ತಿದ್ದು, ಶೃಂಗೇರಿ ಶ್ರೀ ಮಠದಲ್ಲಿ ಸುಂದರವಾಗಿ ಜೋಡಿಸಿಟ್ಟಿರುವ ಪ್ಲೇಟ್ ಗಳ ಕುರಿತು ಅವರವರ ಆಲೋಚನಾ ದೃಷ್ಟಿಗೆ ಬಂದಂತೆ ಜನರು ಬರೆದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ.





0 Comments