ತೀರ್ಥಹಳ್ಳಿ : (ನ್ಯೂಸ್ ಮಲ್ನಾಡ್ ವರದಿ) ನೂತನ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯು ಸಂಪೂರ್ಣವಾಗಿ ಅದ್ವಾನಗಳನ್ನೇ ಸೃಷ್ಠಿಸಿದೆ. ಈ ಅದ್ವಾನವನ್ನು ಸರಿಪಡಿಸಬೇಕು ಮನುವಾದಿಗಳನ್ನು ಹೊರತುಪಡಿಸಿ ಉಳಿದವರಿಗೆ ಅವಮಾನಿಸಲಾಗಿದೆ ಎಂದು ಆರೋಪಿಸಿದರು.
ಇದನ್ನೂ ಓದಿ : ಮೂಡಿಗೆರೆ : ಕಾಲು ಜಾರಿ ಬಿದ್ದು ವ್ಯಕ್ತಿ ಸಾವು
ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯ ಕುಪ್ಪಳ್ಳಿಯಲ್ಲಿರುವ ರಾಷ್ಟ್ರಕವಿ ಕುವೆಂಪು ಅವರ ಮನೆಯ ಮುಂಭಾಗದಿಂದ ಆರಂಭವಾದ ಪಾದಯಾತ್ರೆಯ ಸಂದರ್ಭದಲ್ಲಿ ಮಾತನಾಡಿದ ಅವರು ಈ ನೂತನವಾಗಿ ಪರಿಷ್ಕರಣೆಗೊಂಡ ಪಠ್ಯಪುಸ್ತಕದಲ್ಲಿ ಮನುವಾದಿಗಳನ್ನು ಹೊರತುಪಡಿಸಿ ಉಳಿದೆಲ್ಲರಿಗೂ ಅವಮಾನಿಸಲಾಗಿದೆ. ಈ ಪಠ್ಯಪರಿಷ್ಕರಣೆಯಿಂದ ಉಂಟಾದ 500 ಕೋಟಿ ನಷ್ಟವನ್ನು ಶಿಕ್ಷಣ ಸಚಿವರು ಹಾಗೂ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯ ರೋಹಿತ್ ಚಕ್ರತೀರ್ಥ ಭರಿಸಲಿ ಎಂದರು.
ಇಂದು ಬೆಳಗ್ಗೆ ಕುಪ್ಪಳ್ಳಿಯಿಂದ ಆರಂಭಗೊಂಡ ಪಾದಯಾತ್ರೆಗೆ ಹಿರಿಯ ಸಂಗೀತ ನಿರ್ದೇಶಕ ಹಂಸಲೇಖ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ನಾಡಿನ ಕವಿ ಕುವೆಂಪು ಅಂದರೆ ಕನ್ನಡ, ಸಾಮಾಜಿಕ ಸುಧಾರಕ ಬಸವಣ್ಣ ಎಂದರೆ ನಮ್ಮ ನಾಡು ಕರ್ನಾಟಕ. ಇಂತಹ ಶ್ರೇಷ್ಟ ವ್ಯಕ್ತಿತ್ವ ಹೊಂದಿರುವ ವ್ಯಕ್ತಿಗಳಿಗೆ ಅವಮಾನವಾಗಿದೆ. ಇದನ್ನು ನಾವು ಎಂದಿಗೂ ಸಹಿಸಲು ಸಾಧ್ಯವಿಲ್ಲ. ನಮ್ಮ ನಾಡು ಹಾಗೂ ನಾಡಗೀತೆಗೆ ಅವಮಾನಮಾಡಲಾಗಿದೆ ಇದನ್ನು ಕನ್ನಡಿಗರು ಎಂದಿಗೂ ಸಹಿಸಲು ಸಾಧ್ಯವಿಲ್ಲ ಎಂದರು.
ಕೇವಲ ತೀರ್ಥಹಳ್ಳಿಯಲ್ಲಿ ಮಾತ್ರವಲ್ಲ ಇಡೀ ಕರ್ನಾಟಕದಲ್ಲಿ ಇದರ ವಿರುದ್ಧವಾಗಿ ನಿರಂತರ ಹೋರಾಟ ನಡೆಯಬೇಕಿದೆ ಅಂದು ಗೋಕಾಕ್ ಚಳುವಳಿ ನಡೆದಿತ್ತು ಇಂದು ಕುಪ್ಪಳ್ಳಿಯಲ್ಲಿ ರಣಕಹಳೆ ಮೊಳಗಿದೆ ಇದು ಇಡೀ ರಾಜ್ಯದಲ್ಲೂ ಹಬ್ಬಲಿದೆ ಎಂದರು.
ಈ ಪಾದಯಾತ್ರೆಯಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ಮುಖಂಡರು, ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.




0 Comments