ಚಿಕ್ಕಮಗಳೂರು :(ನ್ಯೂಸ್ ಮಲ್ನಾಡ್ ವರದಿ) ಜನತಾ ಪಾರ್ಟಿಯ ಜಿಲ್ಲಾಧ್ಯಕ್ಷರಾಗಿ ಶೃಂಗೇರಿ ಮೂಲದ ರಜಿತ್ ಗೌಡ ಬೇಸೂರು ನೇಮಕಗೊಂಡಿದ್ದಾರೆ.
ಬಿ.ಟಿ ಲಲಿತಾ ನಾಯಕ್ ಅವರ ನೇತೃತ್ವದ ಜನತಾ ಪಾರ್ಟಿಯ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಶೃಂಗೇರಿ ಮೂಲದ ರಜಿತ್ ಗೌಡ ಬೇಸೂರು ನ್ನು ರಾಜ್ಯಾಧ್ಯಕ್ಷರಾದ ಬಿ.ಟಿ ಲಲಿತಾನಾಯಕ್ ನೇಮಕ ಮಾಡಿದ್ದಾರೆ. ಸದಸ್ಯತ್ವ ಅಭಿಯಾನದ ಸಂಪೂರ್ಣ ಜವಾಬ್ದಾರಿ ಹಾಗೂ ಪಕ್ಷದ ಸಂಘಟನಾತ್ಮಕ ಪಕ್ಷ ನಿಷ್ಠೆಯಿಂದ ನಿರ್ವಹಿಸುವಂತೆ ಹಾಗೂ ಪಕ್ಷವನ್ನು ಸಶಕ್ತಗೊಳಿಸುವಂತೆ ಸೂಚಿಸಿದ್ದಾರೆ.
ಕಳೆದ ಕೆಲವು ತಿಂಗಳಿಂದ ‘ತುಂಗಾ ನದಿ ಉಳಿಸಿ’ ಎಂಬ ಜನಾಂದೋಲನ ಅಭಿಯಾನ ಪ್ರಾರಂಭಿಸುವುದರ ಮೂಲಕ ರಜಿತ್ ಗೌಡ ಬೇಸೂರು ಹಾಗೇ ತಳಕಾನೆ ರಾಜೇಂದ್ರ ಗುರುತಿಸಿಕೊಂಡಿದ್ದರು.
ಕಳೆದ ನಾಲ್ಕೈದು ವರ್ಷಗಳ ಕಾಲ ರಾಜಕೀಯದಿಂದ ದೂರವಿದ್ದ ಶೃಂಗೇರಿಯ ತಳಕಾನೆ ರಾಜೇಂದ್ರರವರು ಇತ್ತೀಚಿಗಷ್ಟೇ ಬೆಂಗಳೂರಿನಲ್ಲಿ ಮಾಜಿ ಸಚಿವರಾದ ಬಿ ಟಿ ಲಲಿತಾ ನಾಯ್ಕ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ 'ಜನತಾ ಪಾರ್ಟಿ' ಸೇರುವ ಮೂಲಕ ರಾಜ್ಯ ರಾಜಕೀಯಕ್ಕೆ ಪ್ರವೇಶ ಮಾಡಿದ್ದರು.




0 Comments