ಹಾಸನ / ಶಿವಮೊಗ್ಗ : (ನ್ಯೂಸ್ ಮಲ್ನಾಡ್ ವರದಿ) ಮದುವೆಯಾದ ಯುವತಿಯನ್ನು ಪರಿಚಯಸ್ಥ ಯುವಕನೋರ್ವ ಗಂಡನನ್ನು ಬಿಟ್ಟು ಬರುವಂತೆ ಕಿರುಕುಳ ನೀಡುತ್ತಿರುವ ಘಟನೆಯೊಂದು ಬೆಳಕಿಗೆ ಬಂದಿದೆ. ಆತನ ಕಾಟವನ್ನು ತಾಳಲಾರದೆ ಇದೀಗ ಯುವತಿ ಠಾಣೆ ಮೆಟ್ಟಿಲೇರಿದ್ದಾಳೆ.

ಇದನ್ನೂ ಓದಿ : NR PURA : ಭೀಕರ ರಸ್ತೆ ಅಪಘಾತ ; ಇಬ್ಬರು ಯುವಕರ ದುರ್ಮರಣ

ಶಿವಮೊಗ್ಗ ಮೂಲದ ವ್ಯಕ್ತಿಯನ್ನು ಏಳು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ನವವಿವಾಹಿತೆಗೆ ಆಕೆಯೊಂದಿಗೆ ಮದುವೆಗೂ ಮೊದಲು ಸಲುಗೆಯಿಂದಿದ್ದ ಪರಿಚಯಸ್ಥ ಯುವಕ, ಗಂಡನನ್ನು ಬಿಟ್ಟು ತನ್ನೊಂದಿಗಿರಲು ಹಾಸನಕ್ಕೆ ಬರುವಂತೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಾನೆ ಎಂದು ಯುವತಿಯು ಆರೋಪಿಸಿದ್ದಾಳೆ. 

ತನ್ನ ತಾಯಿಯಿಂದ ಪರಿಚಯವಾದ ಹಾಸನದ ಕೆಳವತ್ತಿ ಗಿರೀಶ್ ಆತ್ಮೀಯತೆಯಿಂದಿದ್ದ, ನಮ್ಮಿಬ್ಬರ ನಡುವೆಯಿದ್ದ ಸ್ನೇಹ ಸಲುಗೆಗೆ ತಿರುಗಿತ್ತು, ನಮ್ಮಿಬ್ಬರ ಫೋಟೋಗಳು ವಿನಿಮಯಗೊಂಡಿದ್ದವು. ಈ ಫೋಟೋಗಳನ್ನು ಹೊಂದಿರುವ ಗಿರೀಶ್ ಗಂಡನನ್ನು ತೊರೆದು ಹಾಸನಕ್ಕೆ ಬಾರದೇ ಹೋದಲ್ಲಿ ಗಂಡನಿಗೆ ಹಾಗೂ ಅವರ ಸಂಬಂಧಿಕರಿಗೆ ತನ್ನ ಬಳಿಯಿರುವ ಫೋಟೋಗಳನ್ನು ಕಳುಹಿಸುವುದಾಗಿ ಬೆದರಿಕೆ ಹಾಕುತ್ತಿದ್ದಾನೆ ಎಂಬುದಾಗಿ ವಿವಾಹಿತೆ ದೂರಿದ್ದಾಳೆ. 

ನಾನು ಬೇರೆಯವರನ್ನು ಮದುವೆಯಾದ ಕಾರಣ ಜೀವ ಬೆದರಿಕೆ ಹಾಕುತ್ತಿದ್ದಾನೆ, ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾನೆ  ಈ ಕುರಿತು ಕ್ರಮ ಕೈಗೊಳ್ಳುವಂತೆ ಕೋರಿ ಯುವತಿಯು ಹಾಸನದ ದೊಡ್ಡಪೇಟೆ ಠಾಣೆಗೆ ತೆರಳಿ ದೂರು ನೀಡಿದ್ದಾಳೆ.

 ಬುರ್ಖಾಧರಿಸಿ ಬೈಕ್ ನ ಮೂಲಕ ಬಂದು ಹಾಲು ಎಗರಿಸಿದ ಕಳ್ಳರು

ಚಿಕ್ಕಮಗಳೂರು : ಬೈಕ್ ಒಂದರಲ್ಲಿ ಬುರ್ಖಾ ಧರಿಸಿಕೊಂಡು ಬಂದ ಇಬ್ಬರು ಪ್ಯಾಕೆಟ್ ಹಾಲು ಕಳ್ಳತನ ನಡೆಸಿರುವ ಘಟನೆ ವರದಿಯಾಗಿದೆ. 

ಚಿಕ್ಕಮಗಳೂರು ಜಿಲ್ಲೆಯ ಆಲ್ದೂರು ಪಟ್ಟಣದಲ್ಲಿ ಈ ಘಟನೆ ನಡೆದಿದ್ದು ಬೈಕ್ ನಲ್ಲಿ ಬುರ್ಖಾ ಧರಿಸಿ ಆಗಮಿಸಿದ ಇಬ್ಬರು ಕಳ್ಳರು ಪಟ್ಟಣದ ಅಂಗಡಿ ಮುಂಭಾಗದಲ್ಲಿಟ್ಟಿದ್ದ ಹಾಲಿನ ಕ್ರೇಟ್ ಗಳಿಂದ ಹಾಲನ್ನು ಕದ್ದು ಸ್ಥಳದಿಂದ ಪರಾರಿಯಾಗಿದ್ದಾರೆ. 

ಲೀಟರ್ ಹಾಲಿನಲ್ಲಿ ದೊರೆಯುವುದು ಕೇವಲ ರೂಪಾಯಿಗಳ ಲಾಭ ಆದರೆ ಈ ಕಳ್ಳರು ಎಗರಿಸಿರುವ ಹಾಲಿನ ಪ್ರಮಾಣದಿಂದ ನಷ್ಟ ಅನುಭವಿಸಿರುವ ಮಾಲೀಕರು ತಮಗೆ ಕಳ್ಳರ ಕೃತ್ಯದಿಂದ ಉಂಟಾಗಿರುವ ನಷ್ಟದ ಕುರಿತು ತಿಳಿಸಿದ್ದಾರೆ. 

ಈ ಹಿಂದಿನಿಂದಲೂ ಈ ಭಾಗದಲ್ಲಿ ನಡೆಯುತ್ತಿದ್ದ ಕಳ್ಳತನದ ನಿಯಂತ್ರಣಕ್ಕಾಗಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಲಾಗಿತ್ತು ಆದರೆ ಕ್ಯಾಮೆರಾ ಅಳವಡಿಕೆಯ ನಂತರವೂ ಕೂಡ ಕಳ್ಳರು ತಮ್ಮ ಕೈಚಳಕವನ್ನು ಮುಂದುವರೆಸಿರುವುದು ನಮ್ಮನ್ನು ಇನ್ನಷ್ಟು ಆತಂಕಕ್ಕೀಡುಮಾಡಿದೆ ಎಂದರು. ಬುರ್ಖಾ ಧರಿಸಿ ಬೈಕ್ ಓಡಿಸಿಕೊಂಡು ಬಂದ ಇಬ್ಬರು ಕಳ್ಳರು ಯಾರೆಂದು ಇನ್ನಷ್ಟೇ ಪತ್ತೆಯಾಗಬೇಕಿದೆ.