ನರಸಿಂಹರಾಜಪುರ : (ನ್ಯೂಸ್ ಮಲ್ನಾಡ್ ವರದಿ) ನಿನ್ನೆ ರಾತ್ರಿಯ ವೇಳೆಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಬಜರಂಗದಳದ ಇಬ್ಬರು ಸಕ್ರಿಯ ಕಾರ್ಯಕರ್ತರು ಮೃತಪಟ್ಟಿದ್ದಾರೆ.
ಇದನ್ನೂ ಓದಿ : ಚಿಕ್ಕಮಗಳೂರು : ಬುರ್ಖಾಧರಿಸಿ ಬೈಕ್ ನ ಮೂಲಕ ಬಂದು ಹಾಲು ಎಗರಿಸಿದ ಕಳ್ಳರು
ಭದ್ರಾವತಿಯ ಜಂಕ್ಷನ್ ಸರ್ಕಲ್ ನಿಂದ ಒಂದು ಕಿಲೋಮೀಟರ್ ಅಂತರದಲ್ಲಿ ಬೈಕ್ ನ ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ಅವಘಡ ಸಂಭವಿಸಿದೆ. ಬೈಕ್ ನಲ್ಲಿದ್ದ ಉತ್ತಮ್ ಹಾಗೂ ಮನೋಜ್ ಇಬ್ಬರೂ ಯುವಕರು ಅಪಘಾತದ ತೀವ್ರತೆಗೆ ದಾರುಣವಾಗಿ ಅಂತ್ಯ ಕಂಡಿದ್ದಾರೆ.
ನರಸಿಂಹರಾಜಪುರದ ಜೈಲ್ ಬಿಲ್ಡಿಂಗ್ ನಿವಾಸಿ ಉತ್ತಮ್ ಹಾಗೂ ನರಸಿಂಹರಾಜಪುರದ ಮಂಡಗದ್ದೆ ಸರ್ಕಲ್ ನಿವಾಸಿ ಮನೋಜ್ ಮೃತ ಯುವಕರು.
ಮೃತರ ಶರೀರವನ್ನು ಭದ್ರಾವತಿಯ ಆಸ್ಪತ್ರೆಯಲ್ಲಿರಿಸಲಾಗಿದ್ದು ಮರಣೋತ್ತರ ಪರೀಕ್ಷೆಯ ನಂತರ ಮೃತ ಯುವಕರ ದೇಹವನ್ನು ನರಸಿಂಹರಾಜಪುರಕ್ಕೆ ತರಲಾಗುವುದು ಎಂಬ ಮಾಹಿತಿ ದೊರಕಿದೆ.
ಯುವಕರನ್ನು ಕಳೆದುಕೊಂಡ ಪೋಷಕರ ಆಕ್ರಂದನ ಹೇಳತೀರದಾಗಿದ್ದು, ಸ್ನೇಹಿತರು ಹಾಗೂ ಸ್ಥಳೀಯರು ಗೆಳೆಯರನ್ನು ಕಳೆದುಕೊಂಡಿರುವ ಕುರಿತು ತೀವ್ರ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ.




0 Comments