ಹಾಸನ : (ನ್ಯೂಸ್ ಮಲ್ನಾಡ್ ವರದಿ) ಚಿರತೆಯ ಶವವೊಂದು ಗ್ರಾಮಸ್ಥರಿಗೆ ದನ ಮೇಯಿಸುವ ಸಂದರ್ಭದಲ್ಲಿ ಪತ್ತೆಯಾಗಿದೆ.
ಹಾಸನ ಜಿಲ್ಲೆಯ ಆಲೂರು ತಾಲೂಕಿನ ಬೈರಾಪುರ ಗ್ರಾಮದ ವ್ಯಾಪ್ತಿಯಲ್ಲಿ ದನ ಮೇಯಿಸುತ್ತಿದ್ದ ಗ್ರಾಮಸ್ಥರಿಗೆ ಚಿರತೆಯ ಶವ ದೊರೆತಿದೆ. ಅಂದಾಜು ಎರಡು ವರ್ಷಪ್ರಾಯದ ಗಂಡು ಚಿರತೆಯ ಶವ ಪತ್ತೆಯಾಗಿದ್ದು ಮುಳ್ಳುಹಂದಿಯನ್ನು ಭೇಟೆಯಾಡಲು ಹೋಗಿ ಚಿರತೆಯು ಸಾವನ್ನಪ್ಪಿರಬಹುದು ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ : ಮೂಡಿಗೆರೆ ಬಳಿ ಭೀಕರ ರಸ್ತೆ ಅಪಘಾತ ; ಜವರಾಯನ ಅಟ್ಟಹಾಸಕ್ಕೆ ಒಂದೇ ಕುಟುಂಬದ ಇಬ್ಬರು ಬಲಿ, ಇನ್ನಿಬ್ಬರ ಸ್ಥಿತಿ ಗಂಭೀರ
ಈ ಸಂಬಂಧ ಚಿರತೆಯ ಮರಣೋತ್ತರ ಪರೀಕ್ಷೆಯ ಬಳಿಕವೇ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ಇಷ್ಟುದಿನಗಳ ಕಾಲ ಹಾಸನ ಭಾಗದಲ್ಲಿ ನಿರಂತರವಾಗಿ ಆನೆಗಳು ದಾಳಿ ನಡೆಸುತ್ತಿದ್ದು ಇದೀಗ ಚಿರತೆಯ ಶವ ಕಂಡ ಗ್ರಾಮಸ್ಥರು ಆತಂಕದಲ್ಲಿರುವಂತಾಗಿದೆ.




0 Comments