ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಕಳೆದ ಕೆಲ ತಿಂಗಳುಗಳ ಹಿಂದಷ್ಟೇ ಮಲೆನಾಡು ಭಾಗದಲ್ಲಿ ಆಕ್ಟೀವ್ ಆಗಿದ್ದ ಸ್ಯಾಟಲೈಟ್ ಫೋನ್ ಗಳು ಇದೀಗ ಮತ್ತೆ ಆನ್ ಆಗಿದೆ.
ಇದನ್ನೂ ಓದಿ : ಮೂಡಿಗೆರೆ : ವಿದ್ಯುತ್ ತಗುಲಿ ದುರ್ಮರಣವನ್ನಪ್ಪಿದ ಹಸು
ಚಿಕ್ಕಮಗಳೂರಿನ ದಟ್ಟ ಅರಣ್ಯ ಭಾಗಗಳಲ್ಲಿ ಸ್ಯಾಟಲೈಟ್ ಫೋನ್ ನ ಕರೆಯ ಕುರಿತಾದ ಮಾಹಿತಿ ಲಭ್ಯವಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಕಡೂರು ಬೀರೂರು ನಡುವಿನ ದಟ್ಟ ಅರಣ್ಯ ಭಾಗಗಳಲ್ಲಿ ಸ್ಯಾಟಲೈಟ್ ಫೋನ್ ಗಳು ಸದ್ದು ಮಾಡಿದೆ ಎಂಬ ಮಾಹಿತಿಯು ಬೇಹುಗಾರಿಕಾ ಏಜೆನ್ಸಿಗಳಿಗೆ ಲಭ್ಯವಾಗಿದ್ದು ಈ ಕುರಿತು ಹೆಚ್ಚಿನ ಮಾಹಿತಿಯನ್ನು ಅಧಿಕಾರಿಗಳು ಕಲೆ ಹಾಕುತ್ತಿದ್ದು, ಪೊಲೀಸರು ಈ ಸಂಬಂಧ ಅಲರ್ಟ್ ಆಗಿದ್ದಾರೆ.
ಕಳೆದ ಹತ್ತು ದಿನಗಳಲ್ಲಿ ಮಂಗಳೂರು ನಗರ ಹೊರಭಾಗದ ನಾಟೆಕಲ್, ಕುಳಾಯಿ, ಚಿಕ್ಕಮಗಳೂರು ಜಿಲ್ಲೆಯ ದಟ್ಟ ಅರಣ್ಯ ಪ್ರದೇಶ, ಉತ್ತರಕನ್ನಡದ ಯಲ್ಲಾಪುರ, ಸಿರಸಿ ಭಾಗಗಳಲ್ಲಿ ಸ್ಯಾಟಲೈಟ್ ಫೋನ್ ರಿಂಗಣಿಸಿದೆ ಎಂಬ ಆಘಾತಕಾರಿ ಮಾಹಿತಿ ಲಭ್ಯವಾಗಿದೆ.
ಕೆಲ ತಿಂಗಳುಗಳ ಹಿಂದೆ ರಿಂಗಣಿಸಿದ ಸ್ಯಾಟಲೈಟ್ ಫೋನ್ ಗಳು ಮತ್ತೆ ರಿಂಗಣಿಸುತ್ತಿರುವುದು ಅನೇಕ ರೀತಿಯ ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.





0 Comments