ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಕೌಟುಂಬಿಕ ಕಲಹದ ಕಾರಣದಿಂದ ಪತಿ ಪತ್ನಿ‌ ನಡುವೆ ನಡೆದ ಗಲಾಟೆ ವೇಳೆ ಪತಿಯು ಪತ್ನಿಯ ತಲೆಗೆ ದೊಣ್ಣೆಯಿಂದ ಬಲವಾಗಿ ಹೊಡೆದು ಹತ್ಯೆ ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ : ಜಯಪುರ: ಮೇಗೂರು ಸಮೀಪದ ಎಸ್ಟೇಟ್ ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮಹಿಳೆಯ ಶವ ಪತ್ತೆ

ಜಯಪುರ ಸಮೀಪದಲ್ಲಿನ ತಲವಾನೆ ಎಸ್ಟೇಟ್‌ ನಲ್ಲಿ ಕೂಲಿ ಕಾರ್ಮಿಕರಾಗಿ ದಂಪತಿಗಳು ಕಾರ್ಯ ನಿರ್ವಹಿಸುತ್ತಿದ್ದರು, ಪ್ರತಿದಿನ ಕೌಟುಂಬಿಕ ವಿಚಾರಕ್ಕೆ ಪತಿ ಪತ್ನಿ ನಡುವೆ ಜಗಳ ಉಂಟಾಗುತ್ತಿತ್ತು, ಆದರೆ ಕಳೆದ ಎರಡು ದಿನದ ಹಿಂದೆ ರಾತ್ರಿ ಸಮಯದಲ್ಲಿ ಜಗಳ ತಾರಕಕ್ಕೆ ಏರಿದ್ದು ಪತಿ ಹಾಲಪ್ಪ ದೊಣ್ಣೆಯಿಂದ ಪತ್ನಿ ರಾಧಾ ತಲೆಗೆ ಬಲವಾಗಿ ಹೊಡೆದಿದ್ದಾನೆ, ಈ ಸಮಯ ಆಕೆ ಸ್ಥಳದಲ್ಲೇ ಅಸುನೀಗಿದ್ದಾಳೆ. ಪತ್ನಿಯಾದ ರಾಧಾ ಹತ್ಯೆಯಾದ ದುರ್ದೈವಿಯಾಗಿದ್ದು, ಹತ್ಯೆಯ ನಂತರ ಪತಿ ಹಾಲಪ್ಪ ಸ್ಥಳದಿಂದ ಕಾಲ್ಕಿತ್ತಿದ್ದು ಜಯಪುರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಇಂದು ಆರೋಪಿಯನ್ನು ಸೆರೆಹಿಡಿದು ಕೊಪ್ಪದ ಜೆಎಂಎಫ್ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಕೋರ್ಟ್ ಜೂನ್ 30 ರ ವರೆಗೆ ಆತನನ್ನು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದೆ.

ನುರಿತ ತಜ್ಞರಿಂದ ಉದ್ಯೋಗಾವಕಾಶ ಮಾಹಿತಿ ಹಾಗೂ ತಜ್ಞರಿಂದ ವೃತ್ತಿ ಶಿಕ್ಷಣ ಕುರಿತಂತೆ ಕೋರ್ಸ್ ಕುರಿತು ಮಾಹಿತಿ ಕಾರ್ಯಗಾರ

ಶೃಂಗೇರಿ : ದ್ವಿತೀಯ ಪಿಯುಸಿ ಮುಗಿಸಿ ನಂತರದಲ್ಲಿ ಏನು ಎಂಬ ಪ್ರಶ್ನೆಯೊಂದಿಗಿರುವ  ವಿದ್ಯಾರ್ಥಿಗಳಿಗೆ ಅನುಕೂಲಕರವಾಗುವಂತೆ ಮುಂದೆ ಯಾವ ರೀತಿಯ ಶಿಕ್ಷಣವನ್ನು ಪಡೆಯಬೇಕು ಅಥವಾ ಯಾವ ರೀತಿಯ ವೃತ್ತಿ ಪರವಾದ ಕೋರ್ಸ್ ಮಾಡಬೇಕೆಂಬುದಕ್ಕೆ ಸಲಹೆ ನೀಡಿ ಅವರ ಪೂರಕ ಕಲಿಕೆ ಅಥವಾ ವೃತ್ತಿ ಶಿಕ್ಷಣಕ್ಕೆ ನೆರವಾಗುವ ಉದ್ದೇಶದಿಂದ ಶೃಂಗೇರಿಯ ಜೆಸಿಐ ಸಂಸ್ಥೆಯು ಮಾಹಿತಿ ಕಾರ್ಯಾಗಾರವನ್ನು  ಆಯೋಜನೆ ಮಾಡಿದೆ.

ದ್ವಿತೀಯ ಪಿಯುಸಿ ಮುಗಿಸಿದ ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ, ಇಂಜಿನಿಯರಿಂಗ್, ಮೆಡಿಕಲ್ ವಿಭಾಗ, ಆಯುರ್ವೇದ, ಪ್ಯಾರಾ ಮೆಡಿಕಲ್, ಹೋಟೆಲ್ ಮ್ಯಾನೇಜ್ಮೆಂಟ್, ನರ್ಸಿಂಗ್, ಬಿಸಿಎ,ಸೇರಿದಂತೆ ಹೆಚ್ಚಿನ ಕೋರ್ಸ್ ಗಳ ಕುರಿತಾಗಿ  ಮಂಗಳೂರು ಹಾಗೂ ಉಡುಪಿಯ ಪ್ರತಿಷ್ಠಿತ ಕಾಲೇಜುಗಳ ನುರಿತ ತಜ್ಞರಿಂದ  ಕೋರ್ಸ್ ಮತ್ತು ಉದ್ಯೋಗಾವಕಾಶದ ಮಾಹಿತಿ,  ಜೊತೆಗೆ ಸರ್ಕಾರದ ಹಾಗೂ ಸಂಘ ಸಂಸ್ಥೆಗಳಿಂದ ಸಿಗುವ ಸ್ಕಾಲರ್ಶಿಪ್, ಸರ್ಕಾರದ ಉಚಿತ ಹಾಸ್ಟೆಲ್ , ಎಜುಕೇಶನ್ ಲೋನ್  ಕುರಿತು ಮಾಹಿತಿ ಕಾರ್ಯಾಗಾರವನ್ನು ಆಯೋಜನೆ ಮಾಡಿದೆ. 

ಜೂನ್ 19 ರ ಭಾನುವಾರದಂದು ಬೆಳಿಗ್ಗೆ 9 ಗಂಟೆಯಿಂದ ಶೃಂಗೇರಿಯ ಗೌರೀಶಂಕರ ಸಭಾಂಗಣದಲ್ಲಿ ಈ ಕಾರ್ಯಾಗಾರವು ನಡೆಯಲಿದ್ದು, ಆಸಕ್ತರು ಹಾಗೂ ಯಾವುದೇ ಊರಿನ ವಿದ್ಯಾರ್ಥಿಗಳು ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳಬೇಕೆಂದು ಜೆಸಿಐ ಪದಾಧಿಕಾರಿಗಳು ತಿಳಿಸಿದ್ದಾರೆ. 

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನಂಬರ್ ಗಳನ್ನು ಸಂಪರ್ಕಿಸಿ.

7892715641, 9964072897, 8277451466