ಶೃಂಗೇರಿ : (ನ್ಯೂಸ್ ಮಲ್ನಾಡ್ ವರದಿ) ಓದಿನೊಂದಿಗೆ ಯುವಪೀಳಿಗೆಗೆ ಪರಿಸರದ ಅರಿವು ಹಾಗೂ ಅದನ್ನು ಸಂರಕ್ಷಣೆ ಮಾಡುವ ಮನಸ್ಸು ಅಗತ್ಯ ಎಂದು ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರಾದ ಜಿ.ಎಂ ರಾಜಶೇಖರ್ ಮಾತನಾಡಿದರು.
ಜಿಲ್ಲಾ ಪತ್ರಕರ್ತರ ಸಂಘ, ಶೃಂಗೇರಿ ತಾಲೂಕು ಪತ್ರಕರ್ತರ ಸಂಘ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಶೃಂಗೇರಿಯ ಶಾರದಾನಗರದಲ್ಲಿ ಸಸಿ ನೆಡುವ ಮೂಲಕ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಜಿ.ಎಂ ರಾಜಶೇಖರ್, ಚಿಕ್ಕಮಗಳೂರು ಜಿಲ್ಲೆಯು ಸೊಬಗಿನ ತವರು ಎಂದು ಖ್ಯಾತಿ ಹೊಂದಿದ್ದು ನಿಸರ್ಗದತ್ತವಾದ ನಿತ್ಯಹರಿದ್ವರ್ಣ ಕಾಡುಗಳು, ಜೀವನದಿಗಳು ಹಾಗೂ ಘಟ್ಟ ಪ್ರದೇಶಗಳು ಹೊಂದಿರುವ ಮಲೆನಾಡಿನಲ್ಲಿ ಗಿಡಗಳನ್ನು ನೆಡುವ ಪರಿಸ್ಥಿತಿಯನ್ನು ತಂದುಕೊಂಡಿರುವುದು ವಿಪರ್ಯಾಸವಾದ ಸಂಗತಿಯಾಗಿದೆ. ಮಾನವನ ಸ್ವಾರ್ಥ ಜೀವನಕ್ಕಾಗಿ ಅತಿಯಾದ ಆಸೆಗಾಗಿ ದಿನದಿನಕ್ಕೆ ಕಾಡು ನಾಶ ಮಾಡಲಾಗುತ್ತಿದೆ, ಪರಿಸರವನ್ನು ಕಾಪಾಡುವಲ್ಲಿ ನಾವು ವಿಫಲವಾಗಿದ್ದೇವೆ. ಪರಿಸರವನ್ನು ರಕ್ಷಿಸುವ ಹೊಣೆಗಾರಿಕೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.
ಜಿಲ್ಲಾ ಪತ್ರಕರ್ತರ ಸಂಘವು ಪತ್ರಿಕೋದ್ಯಮದೊಂದಿಗೆ ಪರಿಸರದ ಕಾಳಜಿವಹಿಸಿ ಪ್ರತಿವರ್ಷ ಶಾಲಾ-ಕಾಲೇಜು, ಆಸ್ಪತ್ರೆ ಸೇರಿದಂತೆ ವಿವಿಧ ಬಡಾವಣೆಗಳ ರಸ್ತೆಗಳಲ್ಲಿ ಸಸಿನೆಡುವ ಕಾರ್ಯಕ್ರಮವನ್ನು ಮಾಡಿಕೊಂಡು ಬಂದಂತೆ, ಈ ಬಾರಿಯೂ ಜಿಲ್ಲಾದ್ಯಂತ ಎಲ್ಲ ತಾಲೂಕುಗಳಲ್ಲಿ 1,000 ಸಸಿ ನೆಡುವ ಯೋಜನೆಯನ್ನು ಹಮ್ಮಿಕೊಂಡಿದ್ದು ಇದರ ಅಂಗವಾಗಿ ಶೃಂಗೇರಿಯಲ್ಲೂ ಸಹ ವನಮಹೋತ್ಸವ ಕಾರ್ಯಕ್ರಮವನ್ನು ಆಚರಿಸಲಾಯಿತು ಎಂದರು.
ಸಂಘ ಸಂಸ್ಥೆಗಳು ಕೇವಲ ಪ್ರಚಾರಕ್ಕಾಗಿ ಈ ಕಾರ್ಯ ಮಾಡಬಾರದು, ಸಸಿಗಳನ್ನು ನೆಡುವ ಮೂಲಕ ಅದರ ಪೋಷಣೆ ಹಾಗೂ ರಕ್ಷಣೆ ಎಲ್ಲವನ್ನು ಮಾಡಬೇಕು ಆಗಮಾತ್ರ ಈ ಯೋಜನೆರ ಸಫಲವಾದಂತೆ, ಜಿಲ್ಲಾಡಳಿತ ಈ ಬಾರಿ ಗಿಡಗಳನ್ನು ನೆಟ್ಟು ಅದನ್ನು ರಕ್ಷಿಸಿ ಬೆಳೆಸಿದವರಿಗೆ ಒಂದು ಸರ್ವೆ ಮಾಡಿ ಪ್ರಶಸ್ತಿ ನೀಡುವ ಕೆಲಸವನ್ನು ಮಾಡುಲು ನಿರ್ಧರಿಸಿದ್ದು. ಪರಿಸರ ರಕ್ಷಣೆಯ ಜವಾಬ್ದಾರಿ ಎಲ್ಲರ ಮೇಲಿದೆ - ಜಿ.ಎಂ ರಾಜಶೇಖರ್, ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷರು. ಚಿಕ್ಕಮಗಳೂರು
ಈ ಸಂದರ್ಭದಲ್ಲಿ ಅಜ್ಜಂಪುರ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ರಾಜೇಂದ್ರ ಹಾಗೂ ಶೃಂಗೇರಿ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷರಾದ ಶೋಭಾ ಅನಂತಯ್ಯ, ಉಪಾಧ್ಯಕ್ಷರಾದ ರಂಜಿತ್ ಜಿ.ಎಸ್, ಆಗುಂಬೆ ಗಣೇಶ್ ಹೆಗ್ಡೆ, ಇಲಾಖೆಯ ವಲಯ ಅರಣ್ಯಾಧಿಕಾರಿ ಅನಿಲ್ ಡಿಸೋಜ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.





0 Comments