ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ನಿರಂತರವಾಗಿ ಮರಗಳ ಸಾಗಾಟ, ಮರ ಕಡಿಯುವಿಕೆಗಳಿಂದಾಗಿ ಗುಡ್ಡ ಕುಸಿತದಂತಹ ಘಟನೆಗಳು ಮಲೆನಾಡಿನಲ್ಲಿ ಸಂಭವಿಸುತ್ತಿದ್ದು ಮಲೆನಾಡಿಗರು ಕಂಗಾಲಾಗಿದ್ದಾರೆ. ಈ ಬಾರಿಯ ಮಳೆಗಾಲದಲ್ಲಿ ಯಾವೆಲ್ಲಾ ರೀತಿಯ ಸಂಕಷ್ಟಗಳು ಎದುರಾಗಲಿದೆಯೋ ಎಂಬ ಆತಂಕ ಈಗಾಗಲೇ ಮಲೆನಾಡಿಗರಲ್ಲಿ ಮೂಡಿದೆ.
ಇನ್ನೆರಡು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ; ಆರೆಂಜ್ ಅಲರ್ಟ್ ಘೋಷಣೆ
ಹೆಚ್ಚುಮಳೆ ಬೀಳುವ ಪ್ರದೇಶಗಳಲ್ಲಿ ಕಾಫಿನಾಡು ಚಿಕ್ಕಮಗಳೂರು ಸಹ ಒಂದು, ಕಳೆದ ವರ್ಷಗಳ ನಿರಂತರ ಮಳೆಯಿಂದಾಗಿ ರಸ್ತೆ ಕುಸಿತ, ಗುಡ್ಡ ಧರೆ ಕುಸಿತ, ಪ್ರವಾಹ ಮುಂತಾದವುಗಳು ಜನರ ಬದುಕಿಗೆ ಸಮಸ್ಯೆಗಳನ್ನು ತಂದೊಡ್ಡಿತ್ತು. ಪ್ರಸ್ತುತ ಸರ್ಕಾರವನ್ನು ಮನವಿ ಮಾಡಿರುವ ಸಾರ್ವಜನಿಕರು ಮಳೆಗಾಲದ ಅವಧಿಯಲ್ಲಿ ಯಾವುದೇ ಕಾರಣಕ್ಕೂ ಮರಗಳನ್ನು ಕಡಿದು ಸಾಗಣೆ ಮಾಡಲು ಅವಕಾಶ ಕಲ್ಪಿಸಬಾರದು ಎಂದು ಸರ್ಕಾರವನ್ನು ಕೋರಿದ್ದಾರೆ.
ಶೃಂಗೇರಿ, ಕಳಸ, ಹೊರನಾಡು, ಕುದುರೆಮುಖ, ಮೂಡಿಗೆರೆ, ಎನ್. ಆರ್.ಪುರ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸಣ್ಣ ಸಣ್ಣ ಸೇತುವೆಗಳಿದ್ದು ಅದರಲ್ಲೂ ಕೆರೆಕಟ್ಟೆ ಮಾರ್ಗದಲ್ಲಿರುವ ಸೇತುವೆಗಳು ಶಿಥಿಲಾವಸ್ಥೆಯನ್ನು ತಲುಪಿದ್ದು ಅಧಿಕಾರಿಗಳು ಇತ್ತ ಗಮನವಹಿಸಿ 8,10,12 ಚಕ್ರಗಳ ಲಾರಿಗಳಲ್ಲಿ ಮರಗಳ ಸಾಗಾಟ ನಡೆಸುವುದನ್ನು ತಡೆಯಬೇಕೆಂದು ಕೋರಿದ್ದಾರೆ.
ಮರಗಳನ್ನು ಕಡಿಯುವುದು ಬೆಟ್ಟ ಗುಡ್ಡಗಳ ಕುಸಿತಕ್ಕೆ ಕಾರಣವಾಗಬಹುದು. ಈ ನಿಟ್ಟಿನಲ್ಲಿ ಮಳೆಗಾಲದ ಅವಧಿಯಲ್ಲಿ ಯಾವುದೇ ರೀತಿಯ ಸಮಸ್ಯೆಗಳು ಉಂಟಾಗದಂತೆ ಮುನ್ನೆಚ್ಚರಿಕಾ ಕ್ರಮವಾಗಿ ತಡೆಯಬೇಕೆಂದು ಸಾರ್ವಜನಿಕರು ಮನವಿ ಮಾಡಿದ್ದಾರೆ. ಅನುಮತಿ ಪಡೆಯದೆ ಮರಗಳನ್ನು ಕಡಿಯುತ್ತಿರುವ ಮಾಫಿಯಾವನ್ನು ಪತ್ತೆ ಮಾಡಬೇಕು. ಯಾವುದೇ ಕಾರಣಕ್ಕೂ ಮರಗಳ ಸಾಗಾಟಕ್ಕೆ ಮಳೆಗಾಲದ ಅವಧಿಯಲ್ಲಿ ಅನುಮತಿ ನೀಡಬಾರದು ಎಂಬುದು ಮಲೆನಾಡಿಗರ ಒಕ್ಕೊರಲಿನ ಆಗ್ರಹವಾಗಿದೆ.
ಬಾಳೆಹೊನ್ನೂರು : ಯುವಕರ ನಡುವೆ ಗ್ಯಾಂಗ್ ವಾರ್, ದೂರು ಪ್ರತಿದೂರು ದಾಖಲು :
ಬಾಳೆಹೊನ್ನೂರು : ದೊಣ್ಣೆ, ಕತ್ತಿ ಮುಂತಾದ ಮಾರಕಾಸ್ತ್ರಗಳಿಂದ ಹಲ್ಲೆ ನಡೆದು ಎರಡೂ ಕಡೆಯವರಿಂದ ದೂರು ಪ್ರತಿದೂರು ದಾಖಲಾಗಿರುವ ಘಟನೆ ವರದಿಯಾಗಿದೆ.
ಚಿಕ್ಕಮಗಳೂರು ಜಿಲ್ಲೆಯ ಬಾಳೆಹೊನ್ನೂರು ಠಾಣಾವ್ಯಾಪ್ತಿಯ ಗೋರಿಗಂಡಿ ಬಳಿಯಲ್ಲಿ ಈ ಘಟನೆ ನಡೆದಿದ್ದು ಶಿಶಿರ ಎಂಬ ಯುವಕ ಒಳಗೋಡು ರಸ್ತೆಯ ಬಳಿಯಲ್ಲಿ ನಿಂತಿದ್ದಾಗ, ಕೆಲ ಯುವಕರು ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ಹಲ್ಲೆಗೀಡಾದ ಯುವಕ ಶಿಶಿರ ಎಂಬಾತ ದೂರು ನೀಡಿದ್ದಾರೆ, ಹಲ್ಲೆಯಿಂದ ಗಾಯಕ್ಕೀಡಾದ ಯುವಕ ಪ್ರಾಥಮಿಕವಾಗಿ ಬಾಳೆಹೊನ್ನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಬಳಿಕದಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ನರಸಿಂಹರಾಜಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕೊಲೆ ಮಾಡುವ ಉದ್ದೇಶದಿಂದ ನನ್ನ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಲಾಗಿದೆ. ಈ ಸಮಯದಲ್ಲಿ ನನ್ನ ಬಳಿಯಿದ್ದ 10000 ರೂಪಾಯಿ ಹಣವನ್ನು ಕಿತ್ತುಕೊಂಡು ಹಲ್ಲೆ ನಡೆಸಿದವರು ಪರಾರಿಯಾಗಿದ್ದಾರೆ ಎಂದು ಹಲ್ಲೆಗೀಡಾದ ಶಿಶಿರ್ ದೂರು ನೀಡಿದ್ದಾರೆ. ಈ ಸಂಬಂಧ ಮಾಗಲು ಸಂದೀಪ್, ನಂದನ್, ಅನುದಿನ್, ಸಿಂಚಿತ್, ಶರಣ್ ಜಿತ್, ಮಂಜುಶೆಟ್ಟಿ, ಕೊಟ್ರೇಶ್, ರಂಜಿತ್, ಸಂದೀಪ್, ನಂದೀಪ್ ಎಂಬುವವರ ವಿರುದ್ದ ಪ್ರಕರಣವು ದಾಖಲಾಗಿದೆ.
ಪ್ರತಿದೂರು ದಾಖಲು :
ಇದೇ ಘಟನೆಗೆ ಸಂಬಂಧಿಸಿದಂತೆ ಪ್ರತಿದೂರು ಸಹ ದಾಖಲಾಗಿದೆ. ದೇವದಾನದ ರಂಜಿತ್ ಕುಮಾರ್ ಎಂಬುವವರು ಗೋರಿಗಂಡಿಯಲ್ಲಿ ಅಂಗಡಿಗೆಂದು ತೆರಳುತ್ತಿದ್ದ ಸಂದರ್ಭದಲ್ಲಿ ಕೆಲ ಯುವಕರು ಏಕಾಏಕಿ ಬಂದು ಹಲ್ಲೆ ಮಾಡಿದ್ದಾರೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ, ವ್ಯಕ್ತಿ ದಲಿತನಾಗಿದ್ದು ವಿನಾಕಾರಣ ಹಲ್ಲೆ ನಡೆಸಿದಾತನ ಮೇಲೆ ದಲಿತ ದೌರ್ಜನ್ಯ ಕಾಯ್ದೆಯಡಿ ಕಠಿಣ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ಪ್ರಕರಣ ದಾಖಲಿಸಿದ್ದಾರೆ. ಈ ಸಂಬಂಧ ಶಿಶಿರ, ಸಂತೋಷ್, ಇಲಿಯಾಸ್, ಧರ್ಮ, ಬಾಳೆಹೊನ್ನೂರಿನ ಇಲಿಯಾಸ್, ಮಸೀದಿಕೆರೆಯ ಇಮ್ದಾದ್, ಲತೀಫ್, ವಾಸೀಂ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಸಂಬಂಧ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದು, ಸಂಪೂರ್ಣ ತನಿಖೆಯ ನಂತರವಷ್ಟೇ ಹೊರಬೀಳಲಿದೆ.






0 Comments