ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ಜಿಲ್ಲೆಯಲ್ಲಿ ಬಹುತೇಕ ಯುವಕರು ಗಾಂಜಾ ಚಟಕ್ಕೆ ಬಲಿಯಾಗಿ ಅದನ್ನು ಸೇವಿಸುವ ಛಟವನ್ನು ಹೊಂದಿರುವ ಹಿನ್ನೆಲೆ ಈ ಕುರಿತು ಬ್ರೇಕ್ ಹಾಕುವ ನಿಟ್ಟಿನಲ್ಲಿ ಜಿಲ್ಲೆಯ ಪೊಲೀಸರು ವಿವಿಧ ರೀತಿಯ ಕಾರ್ಯಾಚರಣೆ ಹಾಗೂ ಈ ದಂಧೆಯನ್ನು ಮಟ್ಟಹಾಕುವ ಸಲುವಾಗಿ ಹೊಸಹೊಸ ಯೊಜನೆಗಳನ್ನು ರೂಪಿಸುತ್ತಿದ್ದಾರೆ.
ಇದನ್ನೂ ಓದಿ : PSI ಸ್ಥಳ ನಿಯುಕ್ತಿ ಕುರಿತಾಗಿ ನಡೆಸಿರುವ ಆದೇಶವನ್ನು ಹಿಂಪಡೆಯದೇ ಹೋದಲ್ಲಿ ಕಛೇರಿ ಮುಂದೆ ಧರಣಿ ; ಶಾಸಕ ಎಂ.ಪಿ ಕುಮಾರಸ್ವಾಮಿ
ದಿನ ಕಳೆದಂತೆ ಗಾಂಜಾ ವ್ಯಸನಿಗಳು ಹಾಗೂ ಈ ದಂಧೆಯ ಭಾಗಿದಾರರು ಹೆಚ್ಚುತ್ತಲೇ ಇದ್ದಾರೆ ಈ ನಿಟ್ಟಿನಲ್ಲಿ, ಅವರನ್ನು ಮಟ್ಟ ಹಾಕುವ ಸಲುವಾಗಿ ಜಿಲ್ಲೆಯ ಖಾಕಿಪಡೆ ಕಾರ್ಯಾಚರಣೆಗಿಳಿದಿದೆ. ಸಂಜೆಯಾಗುತ್ತಿದ್ದಂತೆಯೇ ಬೀಟ್ ಗೆ ತೆರಳುವ ಪೊಲೀಸರು ನಶೆಯಲ್ಲಿದ್ದವರಂತೆ ಕಂಡುಬರುವವರನ್ನು ವಶಕ್ಕೆ ಪಡೆದು, ಅವರನ್ನು ತಪಾಸಣೆಗೊಳಪಡಿಸಿ ಒಂದು ವೇಳೆ ಧೃಢಪಟ್ಟಲ್ಲಿ ಅವರ ಮೇಲೆ ಎನ್.ಡಿ.ಪಿ.ಎಸ್ ಆಕ್ಟ್ ನ ಅಡಿಯಲ್ಲಿ ಪ್ರಕರಣ ದಾಖಲಿಸಿ ಶಿಕ್ಷೆಗೆ ಗುರಿಪಡಿಸುತ್ತಿದ್ದಾರೆ.
ಎಷ್ಟೇ ಕಡಿವಾಣ ಹಾಕಿದರು ಕೂಡ ದಿನಕಳೆದಂತೆ ವ್ಯಸನಿಗಳು ಹಾಗೂ ನಶಾಭರಿತ ವಸ್ತುಗಳನ್ನು ಸಾಗಾಟ ನಡೆಸುವವರು ಹೆಚ್ಚುತ್ತಲೇ ಇದ್ದು ಈ ಸಂಬಂಧ ಕಾಫಿನಾಡಿನ ಪೊಲೀಸರು ಹೆಚ್ಚಿನ ನಿಗಾವಹಿಸಿ ದೇಶಕ್ಕೆ ಭದ್ರ ಬುನಾದಿಯಾಗಬೇಕಿರುವ ಯುವ ಪಡೆಯನ್ನು ಸರಿದಾರಿಗೆ ತರುವ ಪ್ರಯತ್ನವನ್ನು ನಡೆಸುತ್ತಿದ್ದಾರೆ.
ಕಳೆದ ಕೆಲ ದಿನಗಳ ಹಿಂದಷ್ಟೇ ನಶಾಭರಿತ ವಸ್ತುಗಳನ್ನು ಸೇವಿಸಿ ವಾಹನದ ಮೇಲ್ಭಾಗದಲ್ಲಿ ಯುವಕ ಯುವತಿಯರು ಕುಳಿತು, ನಶೆಯಲ್ಲಿ ತೇಲುತ್ತಾ ರಸ್ತೆ ನಿಯಮವನ್ನು ಉಲ್ಲಂಘಿಸಿ ರಸ್ತೆ ಸಂಚಾರ ಮಾಡುವುದನ್ನು ಕಂಡ ಪೊಲೀಸರು ಕೂಡಲೇ ಕಾರ್ಯಾಚರಣೆಗಿಳಿದು ಅವರನ್ನು ಪರೀಕ್ಷೆಗೊಳಪಡಿಸಿ ಅಮಲು ಭರಿತ ವಸ್ತುಗಳನ್ನು ಅವರು ಸೇವಿಸಿರುವುದು ಧೃಢಪಟ್ಟ ಹಿನ್ನೆಲೆ ಅವರ ಮೇಲೆ ಪ್ರಕರಣ ದಾಖಲಿಸಿದ್ದರು.
ಗಾಂಜಾ ವಿರುದ್ಧವಾಗಿ ಕಠಿಣ ಕಾರ್ಯಾಚರಣೆಗಿಳಿದಿರುವ ಪೊಲೀಸರು, ಈಗಾಗಲೇ ಲಕ್ಷಾಂತರ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ವಶಕ್ಕೆ ಪಡೆದಿದ್ದು ಈ ಸಂಬಂಧ ಅನೇಕರನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಿದ್ದಾರೆ.





0 Comments