ಕೊಪ್ಪ : (ನ್ಯೂಸ್ ಮಲ್ನಾಡ್ ವರದಿ) ಕೊಪ್ಪ ತಾಲೂಕಿನ ನೂತನ ತಹಸೀಲ್ದಾರ್ ಆಗಿ ವಿಮಲಾ ಸುಪ್ರಿಯ ಅವರು ಅಧಿಕಾರ ಸ್ವೀಕಾರ ಮಾಡಿದ್ದಾರೆ.
ಇದನ್ನೂ ಓದಿ : ಎನ್.ಆರ್ ಪುರ: ಕೆರೆ ಹೂಳು ತೆಗೆಯದೆ ಬಿಲ್ ಮಾಡಿ ಹಗರಣ: ಅಧಿಕಾರಿ ಸಸ್ಪೆಂಡ್
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ತಹಸೀಲ್ದಾರ್ ಆಗಿ ಎರಡು ವರ್ಷಗಳ ಕಾಲ ಹೆಚ್.ಎಸ್ ಪರಮೇಶ್ವರ್ ಅವರು ಕಾರ್ಯ ನಿರ್ವಹಿಸಿದ್ದರು. ಪ್ರಸ್ತುತ ಅವರು ವರ್ಗಾವಣೆಗೊಂಡಿದ್ದು ಅವರಿಂದ ತೆರವಾದ ಸ್ಥಾನಕ್ಕೆ ನೂತನ ತಹಸೀಲ್ದಾರ್ ಆಗಿ ವಿಮಲಾ ಸುಪ್ರಿಯ ಅಧಿಕಾರ ಸ್ವೀಕರಿಸಿದರು. ಕೊಪ್ಪದ ಶಿರಸ್ತೇದಾರ್ ರಶ್ಮಿ ಅವರು ನೂತನ ತಹಸೀಲ್ದಾರ್ ರಿಗೆ ಹೂಗುಚ್ಚವನ್ನು ನೀಡುವುದರ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು.
ವರ್ಗಾವಣೆ ಹೊಂದಿರುವ ಹೆಚ್.ಎಸ್ ಪರಮೇಶ್ವರ್ ಅವರಿಗೆ ತಾಲೂಕು ಆಡಳಿತ ಸೌಧದಲ್ಲಿ ಬೀಳ್ಕೊಡುಗೆ ಸಮಾರಂಭವನ್ನು ಆಯೋಜಿಸಲಾಗಿತ್ತು, ಈ ಸಂದರ್ಭದಲ್ಲಿ ಮಾತನಾಡಿದ ಅವರು ಈ ಭಾಗದಲ್ಲಿ ಕೊರೋನ ವೈರಸ್ ವ್ಯಾಪಿಸಿದ್ದ ಅವಧಿಯಲ್ಲಿ ಹಾಗೂ ಅತೀವೃಷ್ಟಿಯ ಸಂದರ್ಭದಲ್ಲಿ ಸಿಬ್ಬಂದಿಗಳ ಸಂಪೂರ್ಣ ಸಹಕಾರದಿಂದ ಅಚ್ಚುಕಟ್ಟಾಗಿ ಹಾಗೂ ಸಮರ್ಥವಾಗಿ ಕಾರ್ಯನಿರ್ವಹಿಸಿದ್ದೇನೆ.
ಮಲೆನಾಡು ಭಾಗವು ನನಗೆ ಹೊಸತಾದ ಕಾರಣ ಸಿಬ್ಬಂದಿಗಳು ಇಲ್ಲಿನ ಸಮಸ್ಯೆಗಳ ಕುರಿತು ಸವಿಸ್ತಾರವಾಗಿ ತಿಳಿಸಿದರು ಈ ಹಿನ್ನೆಲೆ ನಾನು ಸಮರ್ಥವಾಗಿ ಕಾರ್ಯ ನಿರ್ವಹಿಸಲು ಸಾಧ್ಯವಾಯಿತು. ಸಹಕಾರ ನೀಡಿದ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿವರ್ಗದವರಿಗೆ ಧನ್ಯವಾದಗಳನ್ನು ತಿಳಿಸಿದರು.
ಈ ಸಂದರ್ಭದಲ್ಲಿ ಸಮಾಜ ಕಲ್ಯಾಣ ಇಲಾಖೆಯ ವಿಜಯಕುಮಾರ್, ಶಿರಸ್ತೇದಾರ್ ಮುರಳಿ, ಅಕ್ಷರ ದಾಸೋಹದ ಅಂಜನಪ್ಪ, ಹಾಗೂ ಸಿಬ್ಬಂದಿಗಳು ಇದ್ದರು.
ಆನ್ ಲೈನ್ ಮೂಲಕ ಅಪ್ಲಿಕೇಶನ್ ಸಲ್ಲಿಸಿ: : https://forms.gle/APPtk8M3ZDk2oMka6






0 Comments