ಚಿಕ್ಕಮಗಳೂರು : (ನ್ಯೂಸ್ ಮಲ್ನಾಡ್ ವರದಿ) ದೇಶದಲ್ಲಿ ಹೆಚ್ಚುತ್ತಿರುವ ಇಸ್ಲಾಮಿಕ್ ಜಿಹಾದಿ ಧರ್ಮಾಂಧತೆ ಮತ್ತು ಹಿಂಸಾಚಾರದ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಬಜರಂಗದಳ ಕಾರ್ಯಕರ್ತರು ಮನವಿ ಮಾಡಿದ್ದಾರೆ. 

ಇದನ್ನೂ ಓದಿ :  ಶೃಂಗೇರಿ : ಹಸುವಿಗೆ ಲಾರಿಯಿಂದ ಗುದ್ದಿ ಎಸ್ಕೇಪ್ ಆಗಲು ಯತ್ನಿಸಿದವರಿಂದಲೇ ಅಂತ್ಯ ಸಂಸ್ಕಾರ ಮಾಡಿಸಿದ ಗ್ರಾಮಸ್ಥರು

ಕೆಲ ದಿನಗಳಿಂದ ದೇಶಾದ್ಯಂತ ಇಸ್ಲಾಮಿಕ್ ಜಿಹಾದಿ ಮತಾಂಧತೆ ಹೆಚ್ಚುತ್ತಿದೆ. ಹಿಂದೂಗಳ ಮೇಲೆ ವ್ಯವಸ್ಥಿತವಾಗಿ ದಾಳಿ ಮಾಡಲಾಗುತ್ತಿದೆ. ಭಗವಾನ್ ಶ್ರೀರಾಮನ ಕುರುಹು ಹಬ್ಬವಾದ ಪ್ರತಿಪದ ಮತ್ತು ಶ್ರೀರಾಮ ನವಮಿಯಂದು ದೇಶಾದ್ಯಂತ ಮೆರವಣಿಗೆಗಳ ಮೇಲೆ ಕಲ್ಲು ತೂರಾಟ ಮತ್ತು ದಾಳಿಗಳನ್ನು ನಡೆಸಲಾಯಿತು. ಇದರಿಂದಾಗಿ ಹಲವೆಡೆ ಕರ್ಫ್ಯೂ ವಿಧಿಸಲಾಗಿದ್ದು, ದೇಶಾದ್ಯಂತ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು. ಹಿಂದೂ ಸಮಾಜವು ತಾಳ್ಮೆಯನ್ನು ಕಾಯ್ದುಕೊಂಡಿತು, ಇದರಿಂದಾಗಿ ಯಾವುದೇ ದೊಡ್ಡ ಅಹಿತಕರ ಘಟನೆಗಳು ಸಂಭವಿಸಲಿಲ್ಲ. ನಂತರ ಕೆಲವೆಡೆ ಶ್ರೀ ಹನುಮ ಜಯಂತಿಯ ಮೆರವಣಿಗೆ ಮೇಲೆ ಕಲ್ಲು ತೂರಾಟವೂ ನಡೆಯಿತು. ಹಿಂದೂ ಸಮಾಜವು ತಮ್ಮ ದೇಶದಲ್ಲಿ ತಮ್ಮ ದೇವತೆಗಳ ಮೆರವಣಿಗೆಯನ್ನು ತೆಗೆದುಕೊಂಡು ಹೋಗಲು ಸಾಧ್ಯವಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದ್ದು ಕರ್ನಾಟಕದಲ್ಲಿ ಹಿಜಾಬ್ ವಿವಾದದ ಸಂದರ್ಭದಲ್ಲೂ ಭಜರಂಗದಳದ ಕಾರ್ಯಕರ್ತ ಹರ್ಷ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಆ ಸಮಯದಲ್ಲಿ ಹಿಂದೂಗಳ ಮೇಲೆ ಹಲವೆಡೆ ದಾಳಿಗಳು ನಡೆದವು. ಇತ್ತೀಚೆಗಷ್ಟೇ ಕಳೆದ ಎರಡು ಶುಕ್ರವಾರದಂದು ಸಹೋದರಿಯಾದ ನೂಪುರ್ ಶರ್ಮಾ ಮತ್ತು ನವೀನ್ ಜಿಂದಾಲ್ ಹೇಳಿಕೆಯಿಂದ ಮಸೀದಿಗಳಿಂದ ಹೊರ ಬಂದು ಹಿಂದೂ ಸಮಾಜದ ಮೇಲೆ ದಾಳಿ, ಹಿಂದೂಗಳ ಮನೆಗಳು, ಅಂಗಡಿಗಳು, ವಾಹನಗಳಿಗೆ ಬೆಂಕಿ ಹಚ್ಚಲಾಯಿತು, ಸರ್ಕಾರಿ ಆಸ್ತಿ ಮತ್ತು ದೇವಸ್ಥಾನಗಳಿಗೂ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದೆ. ಪೊಲೀಸ್ ಪಡೆಗಳ ಮೇಲೂ ದಾಳಿ ಮಾರಣಾಂತಿಕ ಹಲ್ಲೆ ನಡೆಸಲಾಗಿದ್ದು, ಹಲವರಿಗೆ ಜೀವ ಬೆದರಿಕೆ ಹಾಕಲಾಗುತ್ತಿದೆ. ಈ ಜಿಹಾದಿಗಳು ಕಾನೂನನ್ನು ಕೈಗೆತ್ತಿಕೊಂಡು ಅಶಾಂತಿ ಗಲಭೆ ಮಾಡುತ್ತಿದ್ದಾರೆ. 

ಬಂಗಾಳ, ಕೇರಳದಂತಹ ರಾಜ್ಯಗಳ ಸರಕಾರಗಳು ಈ ಇಸ್ಲಾಮಿಕ್ ಜಿಹಾದಿಗಳೊಂದಿಗೆ ನಿಂತಿರುವುದು ಕಂಡುಬರುತ್ತದೆ. ಆದರೆ ಹಿಂದೂ ದೇವರು ಮತ್ತು ದೇವತೆಗಳ ಬಗ್ಗೆ ಅನೇಕ ಧರ್ಮದ್ರೋಹಿಗಳಿಂದ ಅನಿಯಂತ್ರಿತ ವಿಕೃತವಾಗಿ ಪ್ರಚಾರವನ್ನು ಮಾಡಲಾಗುತ್ತಿದೆ. ಕೋಮು ದ್ವೇಷವನ್ನು ಹರಡುವ ಹೇಳಿಕೆಗಳನ್ನು ನೀಡಲಾಗುತ್ತಿದೆ, 

ಆದರೆ ದೇಶದ ಹಲವು ಜಾತ್ಯತೀತ ಪಕ್ಷಗಳು ಮೌನವಾಗಿದ್ದು ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂದು ಬೊಬ್ಬೆ ಹೊಡೆಯುತ್ತಿದ್ದು ಹಲವು ರಾಜಕೀಯ ಪಕ್ಷಗಳು ಕಳೆದೆರಡು ಶುಕ್ರವಾರ ನಡೆದ ಪ್ರಜಾಪ್ರಭುತ್ವದ ಕೊಲೆಗೆ ಮೌನವಹಿಸಿವೆ. ಈ ದಾಳಿಗಳಿಂದ ಇಡೀ ದೇಶದ ಹಿಂದೂ ಸಮಾಜಕ್ಕೆ ನೋವಾಗಿದೆ ಮತ್ತು ಕೋಪವೂ ಆಗಿದೆ. ದೇಶದಾದ್ಯಂತ ಹಿಂದೂ ಸಮಾಜವು ಈ ಘಟನೆಗಳ ವಿರುದ್ಧ ಈ ಧರಣಿ ಮತ್ತು ಮನವಿ ಪತ್ರದ ಮೂಲಕ ಬಜರಂಗದಳ ತನ್ನ ಆಕ್ರೋಶವನ್ನು ವ್ಯಕ್ತಪಡಿಸಿದೆ 


ಸಂಘಟನೆ ಕೆಲವು ಬೇಡಿಕೆಗಳನ್ನು ಇಟ್ಟಿದ್ದು 

1) ಕೊನೆಯ ಎರಡು ಶುಕ್ರವಾರದ ಪ್ರಾರ್ಥನೆಯ ನಂತರ, ಮಸೀದಿಗಳಿಂದ ಹೊರಬಂದ ಉದ್ರಿಕ್ತ ಗುಂಪುಗಳು ಮತ್ತು ಗಲಭೆಕೋರರನ್ನು ಗುರುತಿಸಬೇಕು ಮತ್ತು ಅವರ ವಿರುದ್ಧ ಕೋಕಾ ಕಾಯ್ದೆ ಅಡಿಯಲ್ಲಿ ಕ್ರಮ ತೆಗೆದುಕೊಳ್ಳಬೇಕು. ಜೂನ್ 17 ರಂದು, ಈ ಮಸೀದಿಗಳು ಮತ್ತು ಇತರ ಮಸೀದಿಗಳ ಮೇಲೂ ನಿಗಾ ಇಡಬೇಕು. ಮುಲ್ಲಾಗಳು/ಮೌಲ್ವಿಗಳು ಅಥವಾ ಬೇರೆಯವರು ಜಿಹಾದಿ ಭಾಷಣ ಮಾಡುವುದನ್ನು ತಕ್ಷಣವೇ ನಿಲ್ಲಿಸಬೇಕು. 

2).ಮಸೀದಿಗಳಿಂದ ಶುಕ್ರವಾರದ ನಮಾಜ್ ಮುಗಿಸಿ ಬರುವ ಯುವಕರನ್ನು ಪ್ರಚೋದಿಸುವ ಮುಲ್ಲಾಗಳು / ಧರ್ಮಗುರುಗಳು / ಇತರ ಮುಸ್ಲಿಂ ಮತ್ತು ಜಾತ್ಯತೀತ ನಾಯಕರನ್ನ ಗುರುತಿಸಿ ಅವರ ಮೇಲೆ ಕೇಸುಗಳನ್ನ ದಾಖಲಿಸುವ ಮೂಲಕ ಎಲ್ಲ ಜಿಲ್ಲೆಗಳಲ್ಲಿ ಕ್ರಮ ಕೈಗೊಳ್ಳಬೇಕು. 

3) ದೇಶಾದ್ಯಂತ ಇಂತಹ ವಿಷಕಾರಿ ಭಾಷಣ ಮಾಡುವವರನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. 

4) ಬೆದರಿಕೆಗೆ ಒಳಗಾದವರಿಗೆ ಭದ್ರತೆಯನ್ನು ಒದಗಿಸಬೇಕು ಮತ್ತು ಬೆದರಿಕೆ ಹಾಕಿದಂಥವರ ವಿರುದ್ಧವೂ ಕಠಿಣ ಕ್ರಮ ಕೈಗೊಳ್ಳಬೇಕು.

 5) ಎನ್.ಐ.ಎ. ತನಿಖಾ ಸಂಸ್ಥೆಯಿಂದ ಗಲಭೆ ಅದ ರಾಜ್ಯಗಳಲ್ಲಿ ತನಿಖೆ ನಡೆಸಲು ಆದೇಶಿಸಬೇಕು 

.6) ಇಸ್ಲಾಮಿಕ್ ಜಿಹಾದಿ ಮತಾಂಧತೆಯನ್ನು ಹರಡುವ ಮೂಲಕ ದೇಶದಲ್ಲಿ ಹಿಂಸಾಚಾರವನ್ನು ಹರಡುತ್ತಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮತ್ತು ತಬ್ಲಿಗಿ ಜಮಾತ್‌ನಂತಹ ಮೂಲಭೂತ ಸಂಘಟನೆಗಳ ಮೇಲೆ ತಕ್ಷಣ ಶಾಶ್ವತ ನಿಷೇಧವನ್ನು ಹೇರಬೇಕು. 

7) ಹಿಂದೂಗಳು ಅಲ್ಪಸಂಖ್ಯಾತರಾಗಿರುವ ಸ್ಥಳಗಳಲ್ಲಿ, ಅವರ ಭದ್ರತೆಗೆ ವ್ಯವಸ್ಥೆಗಳನ್ನು ಮಾಡಬೇಕು ಮತ್ತು ಕಡ್ಡಾಯವಾಗಿ ಪೊಲೀಸ್ ಠಾಣೆ ಸ್ಥಾಪಿಸಬೇಕು ಮತ್ತು ಅಲ್ಲಿ ನಿಯೋಜಿಸಲಾದ ಭದ್ರತಾ ಸಿಬ್ಬಂದಿಗೆ ಸಾಕಷ್ಟು ಸೌಲಭ್ಯಗಳು ಮತ್ತು ಹಕ್ಕುಗಳನ್ನು ನೀಡಬೇಕು. 

ಮೇಲಿನ ಬೇಡಿಕೆಗಳ ಬಗ್ಗೆ ಶೀಘ್ರ ನಿರ್ಧಾರ ತೆಗೆದುಕೊಂಡು ಕಠಿಣ ಕ್ರಮ ಕೈಗೊಳ್ಳಲು ಭಾರತ ಸರ್ಕಾರಕ್ಕೆ ಆದೇಶ ನೀಡಬೇಕೆಂದು ಭಾರತದ ಹಿಂದೂ ಸಮಾಜ ನಿರೀಕ್ಷಿಸುತ್ತದೆ ಎಂದು ರಾಷ್ಟ್ರಪತಿಗಳಲ್ಲಿ ಮನವಿ ಮಾಡಿಕೊಂಡಿದೆ.   

ಈ ಸಂದರ್ಭದಲ್ಲಿ ರಂಗನಾಥ, ಜಿಲ್ಲಾ ಕಾರ್ಯದರ್ಶಿ. ಯೋಗೇಶ್ ರಾಜ್ ಅರಸ್, ಜಿಲ್ಲಾ ಉಪಾಧ್ಯಕ್ಷರು. ನಗರ ಸಂಚಾಲಕ ಶ್ಯಾಮ್ ವಿ ಗೌಡ, ಗುರು ಜಿಲ್ಲಾ ವಿದ್ಯಾರ್ಥಿ ಪ್ರಮುಖ್, ಸುನಿಲ್ ರೋಹನ್ ಶಾಮ್ ಕೋಟೆ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು