ಚಿಕ್ಕಮಗಳೂರು : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ : ಕಳಪೆ ಕಾಮಗಾರಿಯಿಂದ ಸೇತುವೆ ಕುಸಿತ ; ಸಾರ್ವಜನಿಕರ ಆರೋಪ
ಚಿಕ್ಕಮಗಳೂರಿನಲ್ಲಿ ಮಾತನಾಡಿರುವ ಅವರು ಸುಳ್ಳು ಹಾಗೂ ಸಿದ್ದರಾಮಯ್ಯ ಅವರು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ, ಸತ್ಯಕ್ಕೆ ದೂರವಾದುದನ್ನು ಸದಾ ಸಿದ್ದರಾಮಯ್ಯ ಮಾತನಾಡುತ್ತಾರೆ. ಸುಳ್ಳಿನಲ್ಲಿ ಅವರಂತಹ ನಿಷ್ಣಾತರು ಬೇರಾರೂ ಇಲ್ಲ, ಸುಳ್ಳೇ ಕೆಲವರ ಮನೆ ದೇವರು ಎಂದು ಕುಟುಕಿದರು. ದಿನನಿತ್ಯವೂ ಸುಳ್ಳುಗಳನ್ನು ಹೇಳಿಕೊಂಡಿರುವ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ ಅವಧಿಯಲ್ಲಿ ಎಲ್ಲಾದರೂ ಆಕ್ಸಿಜನ್ ಪ್ಲಾಂಟ್ ಗಳ ನಿರ್ಮಾಣ ಮಾಡಿದ್ದರಾ ಎಂದು ಪ್ರಶ್ನಿಸಿದರು.
ಭಾರತದ ಸನ್ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರು ರಾಜ್ಯಕ್ಕೆ ಆಗಮಿಸಿರುವ ಕುರಿತು ಬೇರೆ ರೀತಿಯಲ್ಲೇ ಮಾತನಾಡುವ ಸಿದ್ದರಾಮಯ್ಯ ಅವರು ರಾಜ್ಯಕ್ಕೆ ದೇಶಕ್ಕೆ ಮೋದಿ ಜೀ ಕೊಡುಗೆಯ ಕುರಿತು ಒಮ್ಮೆ ಅವಲೋಕಿಸಿ ಮಾತನಾಡಲಿ. ಅವರು ಪ್ರತಿನಿಧಿಸುವ ಕ್ಷೇತ್ರಗಳಿಂದ ಹಿಡಿದು ಅನೇಕ ಸ್ಥಳಗಳಿಗೆ ಪಿಎಂ ಕೇರ್ಸ್ ಹಣದಿಂದ ಆಕ್ಸಿಜನ್ ಪ್ಲಾಂಟ್ ಗಾಗಿ ಹಣ ಬಂದಿದೆ ಹಾಗೂ ಪ್ಲಾಂಟ್ ಗಳ ನಿರ್ಮಾಣವಾಗಿದೆ. ಅವರೂ ದೇಹಕ್ಕೆ ಹಾಕಿಸಿಕೊಂಡಿರುವ ಕೊರೋನ ಎರಡು ಡೋಸ್ ಲಸಿಕೆಗಳು ಇಲ್ಲದಿದ್ದರೆ ಏನಗುತ್ತಿತ್ತು ಎಂದು ಅವರೊಮ್ಮೆ ಊಹಿಸಿಕೊಳ್ಳಿ ಎಂದರು.
ಬೇರೆ ಬೇರೆ ದೊಡ್ಡ ಖಾಯಿಲೆಗಳ ತರಹ ಸಿದ್ದರಾಮಯ್ಯ ಅವರಿಗೆ ಕೊಂಕು ಮಾತನಾಡುವುದು ಒಂದು ಖಾಯಿಲೆ, ಸುಳ್ಳು ಹೇಳುವುದು ಒಂದು ಖಾಯಿಲೆ. ಸುಳ್ಳಿಗೆ ಪ್ರಶಸ್ತಿ ಎನ್ನುವುದಾದರೆ ಅದು ಸಿದ್ದರಾಮಯ್ಯ ಅವರಿಗೆ ಸಿಗುತ್ತದೆ ಎಂದು ಶಾಸಕ ಸಿ.ಟಿ ರವಿ ವಾಗ್ದಾಳಿ ನಡೆಸಿದ್ದಾರೆ.
ತನು ಕೊಟ್ಟಿಗೆಹಾರ, ವರದಿಗಾರರು




0 Comments